RSS ಅಂದರೆ ಏನು?
RSS ಅಂದರೆ "ರಿಯಲಿ ಸಿಂಪಲ್ ಸಿಂಡಿಕೇಶನ್ " – ಇದು ಅಂತರ್ಜಾಲ ಪತ್ರಿಕೆಗಳು, ಮ್ಯಾಗಜಿನ್‌ಗಳು, ಮತ್ತು
ಬ್ಲಾಗ್ ಸೇರಿದಂತೆ ವೆಬ್‌ನಾದ್ಯಂತದ ಮೂಲಗಳಿಂದ ವಿಷಯಗಳನ್ನು ವಿತರಿಸಲು ಮತ್ತು ಒಂದೆಡೆ ಕಲೆಹಾಕಲು
ಇರುವ ಒಂದು ವಿಧಾನ.
ಲಿಂಕ್‌ಗಳು, ಶೀರ್ಷಿಕೆಗಳು
ಮತ್ತು ಸಾರಾಂಶವನ್ನೊಳಗೊಂಡ ಸುದ್ದಿಯ ಫೀಡ್‌ಗಳನ್ನು ಸುಲಭವಾಗಿ ರಚಿಸಿ ವಿತರಿಸಲು ವೆಬ್ ಪ್ರಕಾಶಕರು
RSS ಅನ್ನು ಬಳಸುತ್ತಾರೆ.
ದಿ ಕ್ರಿಶ್ಚಿಯನ್ ಸೈನ್ಸ್
ಮಾನಿಟರ್, ಸಿಎನ್ಎನ್ ಮತ್ತು ಸಿಎನ್ಇಟಿ ನ್ಯೂಸ್ ಮುಂತಾದ ಹಲವಾರು ಪ್ರಮುಖ ಸೈಟ್‌ಗಳು ಈಗ
RSS ಮೂಲಕ ಆನ್‌ಲೈನ್
ವಿಷಯವನ್ನು ಕ್ಷಣಕ್ಷಣಕ್ಕೂ ಒದಗಿಸುತ್ತದೆ.
Yahoo! News ಕೂಡ ನೀವು My Yahoo! ವಿನಲ್ಲಿ ಅಥವಾ ಬೇರೆ ಯಾವುದೇ RSS ಸುದ್ದಿ ಓದುವಿಕೆಗೆ ಪೂರಕವಿರುವ
ಸಾಫ್ಟ್‌ವೇರ್ ಬಳಸಿ ಓದಬಹುದಾದ ಡಜನ್‌ಗಟ್ಟಲೆ RSS ಫೀಡ್‌ಗಳ ಕೊಡುಗೆ ನೀಡುತ್ತಿದೆ. RSS ಬಗ್ಗೆ ಹಾಗೂ
Yahoo! News ನಲ್ಲಿ ನೀವು ಇದನ್ನು ಹೇಗೆ ಬಳಸಬಹುದು ಎಂಬುದರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು
ಇಲ್ಲಿ ಕ್ಲಿಕ್ ಮಾಡಿ.
RSS ಮೂಲಕ Yahoo! News ಯಾವ ಮಾದರಿಯ ವಿಷಯ ಒದಗಿಸುತ್ತದೆ?
RSS ಸ್ವರೂಪದಲ್ಲಿ Yahoo! News ಹಲವಾರು ಫೀಡ್‌ಗಳನ್ನು ಒದಗಿಸುತ್ತದೆ. ಓದುಗರಿಗೆ ವ್ಯಕ್ತಿಗತ ಬಳಕೆಗೆ
ಮತ್ತು ಲಾಭ-ರಹಿತ ಸಂಸ್ಥೆಗಳಿಗೆ ವಾಣಿಜ್ಯೇತರ ಬಳಕೆಗಾಗಿ ಉಪಯೋಗಿಸಲು ಈ ಫೀಡ್‌ಗಳು ಶುಲ್ಕರಹಿತವಾಗಿರುತ್ತವೆ.
ಸೌಜನ್ಯ (ಪ್ರತಿಯೊಂದು ಫೀಡ್‌ನಲ್ಲಿ ಸೇರಿಸಲಾಗಿದೆ) ಉಲ್ಲೇಖಿಸುವುದು ಅಗತ್ಯ.
|