ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಧರ್ಮ ವ್ರತ-ಹಬ್ಬ
ಹೀಗೊಂದು ಹಬ್ಬದ 'ಕಳ್ಳ' ನಂಬಿಕೆ
ಮಲೆನಾಡಿನ ಪ್ರದೇಶದಲ್ಲಿ ಒಂದು ಹಬ್ಬದ ವೇಳೆ ಒಂದು ನಂಬಿಕೆ ಚಾಲ್ತಿಯಲ್ಲಿದೆ. ಭೂರಿ ಹಬ್ಬ ಎಂದು ಕರೆಯಲಾಗುವ ನರಕಚತುರ್ದಶಿ ದಿನ ಕಳವು ಮಾಡಲೇ ಬೇಕು, ಜತೆಗೆ ಬೈಸಿಕೊಳ್ಳಲೂ ಬೇಕು ಅಷ್ಟೇ ಅಲ್ಲ ಕಳವು ಮಾಡಿದ ವಸ್ತುವನ್ನು ವಾಪಸ್ ಕೊಡಲೂ ಬೇಕು. ಈ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ.

ಕಳವು ಕಾರ್ಯವನ್ನು ಬಹು ಚಾಣಾಕ್ಷದಿಂದ ನಿರ್ವಹಿಸಬೇಕು. ಕಳವು ಮಾಡುವಾಗಿ ಸಿಕ್ಕಿಹಾಕಿಕೊಂಡರೆ ಕೆಟ್ಟದ್ದು ಸಂಭವಿಸುತ್ತದೆ. ಅದು ಭವಿಷ್ಯಕ್ಕೆ ಮಾರಕವಾಗುತ್ತದೆ ಎಂದು ನಂಬಿಕೆಯೊಳಗಣ ನಂಬಿಕೆ.

ಕಳವು ಮಾಡಿದ ಮಾಲನ್ನು ತಮ್ಮಲ್ಲೇ ಇಟ್ಟುಕೊಳ್ಳದೇ ಮಾಲೀಕರಿಗೆ ವಾಪಸ್ ಕೊಡುವಾಗ ಅವರು ಬೈದರೆ ಮುಂದೆ ಶ್ರೇಯಸ್ಸಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ.

ಜನ ಕಳವು ಮಾಡುವ ವಸ್ತುಗಳ ಪಟ್ಟಿ ಇಂತಿದೆ. ಖಾರ ಅರೆಯುವ ಗುಮಡು, ಬಚ್ಚಲು ಮನೆಯಲ್ಲಿ ನೀರು ಕಾಯಿಸುವ ಹಂಡೆ, ಬಾವಿ ಹಗ್ಗ, ಪಂಪ್ಸೆಟ್, ಸೈಕಲ್, ಗೇಟ್, ಬಲಿಪಾಡ್ಯಮಿ ದಿನ ಪೂಜೆಗೆ ಬಳಸುವ ನೇಗಿಲು, ನೊಗ ಮುಂತಾದವುಗಳನ್ನು ಕಳವು ಮಾಡುತ್ತಾರೆ.

ಹಾಗಾಗಿ ಇಲ್ಲಿನ ಜನ ಭೂರೆ ಹಬ್ಬದಂದು ಭಾರಿ ಎಚ್ಚರಿಕೆ ವಹಿಸುತ್ತಾರೆ. ಮನೆಗೆ ಬಂದು ಹೋಗುವವರನ್ನು ಹದ್ದಿನ ಕಣ್ಣಿನಲ್ಲಿ ಕಾಯತ್ತಿರುತ್ತಾರೆ.
ಇಷ್ಟೆಲ್ಲಾ ನಡೆದರೂ ಜನ ಇದನ್ನು ಕಳವು ಎನ್ನುವುದಿಲ್ಲ. ಬದಲಿಗೆ ಲಿಭೂರೆ ಹಾಯುವುದು ಎನ್ನುತ್ತಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬಂತು ಬಂತು ದೀಪಾವಳಿ.....
ಬಲಿ ಚಕ್ರವರ್ತಿ-ರಾವಣನ ಕತೆ
ಧರ್ಮ ಕ್ರಾಂತಿಯ ಧೀರಯೋಗಿ-ಲಿಂಗಾನಂದ ಸ್ವಾಮೀಜಿ
ಕಾರ್ತಿಕದ ಕತ್ತಲೆಯ 'ಆಕಾಶ ದೀಪ'
ಮರಳಿ ಬಂದಿದೆ ಯುಗಾದಿ....
ಮಾತೆಯಾಗಿ ಪೊರೆವವಳು
ಸಾಹಿತ್ಯ
ಕಥೆ - ಭೈರಪ್ಪನವರ ದಾಟು ಕಾದಂಬರಿಯಲ್ಲಿ ಬರುವ ಕಥಾನಾಯಕಿ ಸತ್ಯಳ ಪಾತ್ರ ವಿಭಿನ್ನ ಅದೇ ಅವಳ ತಿರಸ್ಕೃತ ಪ್ರೇಮವೇ ಕಥಾ ವಸ್ತು ಎಂದು ಮನಸ್ಸು ಪದೇ ಪದೇ ಹೇಳುವ ಪ್ರಯತ್ನ ಮಾಡುತ್ತಿದ್ದರೂ ಅಲ್ಲ ಅದಲ್ಲ ನಿಜ ಬದುಕಿನಲ್ಲಿ ಇದು ಸಾಧ್ಯವಾ...
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಕುಟುಂಬ ಯೋಜನೆ ಮಹಿಳೆಯ ಜವಾಬ್ದಾರಿಯೇ?
ಕುಟುಂಬ ಯೋಜನೆಯೇನಿದ್ದರು ಮಹಿಳೆಯರ ಜವಾಬ್ದಾರಿಯೇ? ಹಾಗಂತ ಭಾರತದ ಪುರುಷ ಪುಂಗವರು ತಿಳಿದುಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.
ಮೊಗ್ಲಿ ಉತ್ಸವ: ಶಾಲೆ ಮಕ್ಕಳು ಅಸ್ವಸ್ಥ
ಪ್ರಥಮ ಚಿಕಿತ್ಸೆ ಪೆಟ್ಟಿಗೆ: ನಿರ್ಲಕ್ಷ್ಯ ಸಲ್ಲ
ಮನರಂಜನೆ
ಚಿತ್ರ ಸಮೀಕ್ಷೆ - ಆರ್.ಎಸ್.ಗೌಡ ನಿರ್ಮಾಣದ, ಎಸ್.ಮಹೇಂದರ್ ನಿರ್ದೇಶನದ, ಶಿವರಾಜ್ ಕುಮಾರ್ ನಿರ್ದೇಶನದ "ಗಂಡನ ಮನೆ" ರಾಜ್ಯಾದ್ಯಂತ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಮುಂದೆ ಓದಿ|ಮತ್ತಷ್ಟು...
Marketplace