ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಧರ್ಮ ವ್ರತ-ಹಬ್ಬ
ಧರ್ಮ ಕ್ರಾಂತಿಯ ಧೀರಯೋಗಿ-ಲಿಂಗಾನಂದ ಸ್ವಾಮೀಜಿ
- ಮಂಜುನಾಥ ಬಂಡಿ
Lingananda Swamiji
AP
''ಕಳ್ಳನಲ್ಲಿ ಕೂಡಲಸಂಗಮದೇವನನ್ನು ಕಂಡವರೆಲ್ಲರೂ ಬಸವಣ್ಣನಾಗುವರೆನಯ್ಯ?
ದಿಗಂಬರಿಯಾಗಿ ಕದಳಿ ಬನಕ್ಕೆ ಹೋದವರೆಲ್ಲಾ ಅಕ್ಕಮಹಾದೇವಿಯಾಗುವರೆನಯ್ಯ?
ಕೈ ಹಿಡಿದ ಹೆಂಡತಿಯನ್ನು ದೇವಿ ಎಂದು ಪೂಜಿಸಿದವರೆಲ್ಲ ಪರಮಹಂಸರಾಗುವರೇನಯ್ಯ?
ವೃತ್ತಿಯನ್ನು ಕೈಬಿಟ್ಟು ವಚನ-ಸಾಹಿತ್ಯ ಸಂಶೋಧನೆಯಲ್ಲಿ ಪ್ರವೃತ್ತರಾದವರೆಲ್ಲರೂ ಪ.ಗು.ಹಳಕಟ್ಟಿಯಾಗುವರೇನಯ್ಯ?''
ಎಂದು ಆಧುನಿಕ ವಚನ ಸಾಹಿತ್ಯ ರಚನೆಕಾರರಾದ ಸಿದ್ಧಯ್ಯ ಪುರಾಣಿಕ ಅವರ ವಾಹಿನಿಯಂತೆ ''ವಿಶ್ವಧರ್ಮ ಪ್ರವಚನ ಮಾಡುವವರೆಲ್ಲರೂ ಲಿಂಗಾನಾಂದ ಸ್ವಾಮಿಜಿವರರಾಗುವರೇನಯ್ಯ?'' ಎಂದರೆ ಅತಿಶಯೋಕ್ತಿ ಏನಲ್ಲ ಎಂದು ಹೇಳಬಹುದು.

ಕಳೆದ ನಾಲ್ಕು ದಶಕಗಳ ಹಿಂದೆ ಕನ್ನಡ ನಾಡಿನ, ಬಸವ ಧರ್ಮದ ಭಕ್ತ ಸಮೂಹದ ನಾಲಿಗೆಯ ಮೇಲೆ ಈ ವಚನ ಮಾರ್ಧನಿಸತೊಡಗಿದೆ, ಹಬ್ಬಿ ಹಸರಿಸುತ್ತಲೆ ಇದೆ.

ಕಾರಣ ತಮ್ಮ ಅದ್ಭುತವಾದ ವಾಕ್ ಶಕ್ತಿಯಿಂದ ವಿಶ್ವಧರ್ಮ ಪ್ರವಚನದ ಪಾಂಚಜನ್ಯ ಮೊಳಗಿಸುತ್ತಾ, ಕಠಿಣವಾದ ಆಧ್ಯಾತ್ಮಿಕ ತತ್ವಗಳನ್ನು, ಲೌಕಿಕ ದೃಷ್ಟಾಂತಗಳ ಮೂಲಕ ಸುಲಭವಾಗಿ ತಿಳಿಯುವಂತೆ ಜನರ ಮುಂದೆ ಇಡುತ್ತಾ, ಪ್ರತಿಯೊಬ್ಬರಿಗೂ ಮನಮುಟ್ಟುವಂತೆ ತಿಳಿಸಿ ಹೇಳುವ ವಿನೂತನ ಶೈಲಿಯ ಪ್ರವಚನದ ಮೂಲಕ ಅಪ್ರತಿಮ ಕ್ರಾಂತಿಯನ್ನುಂಟು ಮಾಡಿ ಲಿಂಗಾಯತ ಧರ್ಮದ ಪುನರುತ್ಥಾನಕ್ಕೆ ತಮ್ಮ ಬಾಳನ್ನೇ ಸವೆಸಿದ, ಪ್ರವಚನ ಪಿತಾಮಹರೆಂದೇ ಖ್ಯಾತರಾದ ಲಿಂ.ಪೂಜ್ಯ ಲಿಂಗಾನಂದ ಸ್ವಾಮಿಜಿಯವರಿಗೆ ಮೇಲಿನ ವಚನ ಅರ್ಥವತ್ತಾಗಿ ಅನ್ವಯಿಸುತ್ತದೆ.

ನಾಡಿನ ಶಿಷ್ಯವರ್ಗಕ್ಕೆ ಗುರೂಜಿ ಎಂದು, ಬಸವ ಭಕ್ತಸಮೂಹಕ್ಕೆ ಅಪ್ಪಾಜಿ ಎಂದೇ ಚಿರಪರಿಚಿತರಾಗಿದ್ದ ಲಿಂ.ಪೂಜ್ಯ ಲಿಂಗಾನಂದ ಸ್ವಾಮಿಜಿಯವರು ಬಿಜಾಪುರ ಜಿಲ್ಲೆಯ ಪುಣ್ಯಭೂಮಿ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯ ಲಿಂಗವಂತ ಸದ್ಭಕ್ತ ದಂಪತಿಗಳ ಪುತ್ರನಾಗಿ ದಿ.15-09-1931ರಂದು ಜನಿಸಿದರು.

ಇವರ ಮೂಲನಾಮ ಸಂಗಮೇಶ. ಬಾಲ್ಯದಿಂದಲೂ ದೃಢ ಕಾಯವನ್ನು ಹೊಂದಿದ್ದ, ಇವರು ಮನೆಯ ಆರ್ಥಿಕತೆಯ ಸಂಕಷ್ಟದ ಮಧ್ಯೆಯು ತಮ್ಮ ಬೌದ್ಧಿಕ ಪಟುತ್ವದಿಂದ ಹಂತಹಂತವಾಗಿ ಮೇಲೆರುತ್ತಾ ಬಂದು ಬಿ.ಎ.ಆನರ್ಸ್ ಪದವಿಯನ್ನು ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಪೂರೈಸಿಕೊಂಡರು.

ಬೆಳಗಾವಿಯ ರುದ್ರಾಕ್ಷಿ ಮಠದ ಹಾಸ್ಟೆಲಿನಲ್ಲಿದ್ದಾಗ ದಾಸೋಹದ ಮನೆಯ ಮೇಲೆ 'ಲಿಂಗವಿಲ್ಲದವರಿಗೆ ಪ್ರವೇಶವಿಲ್ಲ' ಎನ್ನುವ ವಾಕ್ಯವನ್ನು ನೋಡಿ ನಿತ್ಯವು ಗೇಲಿ ಮಾಡುತ್ತಾ 'Linga is the gate pass to dining hall' ಎನ್ನುತ್ತಾ ಗೇಲಿ ಮಾಡುತ್ತಿದ್ದರು. ಅದೇ ಸಂಗಮೇಶ ಮುಂದೆ ಸ್ವಾಮಿ ಲಿಂಗಾನಂದರಾಗಿ 'Linga is the gate pass to the kingdom of God' ಎಂಬುದನ್ನು ತೋರಿಸಿಕೊಟ್ಟಿದ್ದು ವಿಚಿತ್ರವಾದರೂ ಸತ್ಯವಾದ ಇತಿಹಾಸ.

ಮುಂದೆ ಧಾರವಾಡದಲ್ಲಿ ಎಂ.ಎ ತತ್ವಜ್ಞಾನವನ್ನು ಅಭ್ಯಸಿಸುತ್ತಿದ್ದಾಗ, ನವಕಲ್ಯಾಣ ಮಠದ ಕುಮಾರಸ್ವಾಮಿಗಳ ಉಪನ್ಯಾಸದಿಂದ ಪ್ರಭಾವಿತರಾಗಿ, ಮಾರ್ಕ್ಸಿಂಸಂನ್ನು ಬಹಳವಾಗಿ ನಂಬಿದ್ದ ಇವರು ಬಸಾವಾಯಿಸಂ ಕಡೆಗೆ ಕವಲೊಡೆದರು. ಆಗ ಬಸವ ಧರ್ಮದ ಭವ್ಯವಾದ ಬಾನಂಗಳದಲ್ಲಿ ದಿವ್ಯವಾದ ಲಿಂಗಾನಂದವೆಂಬ ನಕ್ಷತ್ರವೊಂದು ಪ್ರಜ್ವಲಿಸಹತ್ತಿತು.
(ಮೂಲ - ವೆಬ್‌ದುನಿಯಾ)
1| 2
 
ಮತ್ತಷ್ಟು...
ಕಾರ್ತಿಕದ ಕತ್ತಲೆಯ 'ಆಕಾಶ ದೀಪ'
ಮರಳಿ ಬಂದಿದೆ ಯುಗಾದಿ....
ಮಾತೆಯಾಗಿ ಪೊರೆವವಳು
ರಂಗುರಂಗಾದ 'ರಂಗಿನ' ಹಬ್ಬ
ಭಾವ ಶುದ್ಧಿಗಾಗಿ ವ್ರತಾಚರಣೆ
ಪೂಜಾ ವಿಧಾನ
ಮನರಂಜನೆ
ಚಿತ್ರ ಸುದ್ದಿ - ಆಕೆ ಚಿತ್ರದಲ್ಲಿ ಆತನ ತಾಯಿಯ ಪಾತ್ರ ನಿರ್ವಹಿಸಿದ್ದರು. ಆದರೆ, 'ಮದರ್ ಇಂಡಿಯ' ಚಿತ್ರದ ಚಿತ್ರೀಕರಣದಲ್ಲಿ ನರ್ಗೀಸ್...
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ನೇತ್ರದಾನ: ಅಂಧರ ಬದುಕಿಗೆ ದೃಷ್ಠಿ ದಾನ
ದೇಶದಲ್ಲಿ ದೃಷ್ಠಿಹೀನತೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ನೇತ್ರದಾನ ಮಾಡಲು...
ದಕ್ಷಿಣ ಕಾಶ್ಮೀರದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸರಕಾರ ಅನುಮೋದನೆ
ಕೊಚ್ಚಿಯಲ್ಲಿ ರಾಷ್ಟ್ರೀಯ ಮಧುಮೇಹ-ನೇತ್ರ ತಪಾಸಣೆ ಶಿಬಿರ
ವಾಣಿಜ್ಯ
ವಾಣಿಜ್ಯ ಲೇಖನಗಳು - ಭಾರತೀಯ ತೈಲ ನಿಗಮ(ಇಂಡಿಯನ್ ಆಯಿಲ್ ಕಾರ್ಪೊರೇಶನ್-ಐಒಸಿ)ವು ಹೊಸ 15 ದಶಲಕ್ಷ ಟನ್ ತೈಲ...
ಮುಂದೆ ಓದಿ|ಮತ್ತಷ್ಟು...
Marketplace