|
| ಕಾರ್ತಿಕದ ಕತ್ತಲೆಯ 'ಆಕಾಶ ದೀಪ' | |
ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರ ಬಗ್ಗೆ ರಾಷ್ಟ್ರಕವಿ ಕುವೆಂಪು ಹೇಳಿದ ಮಾತು 'ಕಾರ್ತಿಕದ ಕತ್ತಲಲಿ ಆಕಾಶ ದೀಪವಾಗಿ ನೀ ಬಂದೆ, ಬಟ್ಟೆಗೆಟ್ಟವರಿಗೆ ದೊಂದಿ ದಿಕ್ಕಾಗಿ ಎಂಟು ಶತಮಾನಗಳ ಹಿಂದೆ ಅಗ್ನಿ ಖಡ್ಗವನಾಂತ ಓ ಆಧ್ಯಾತ್ಮ ಕ್ರಾಂತಿವೀರ ದೇವ ದಯೆಯೊಂದೆ ಹೇ ಧೀರಾವತಾರ ಶ್ರೀ ಬಸವೇಶ್ವರ' ಎಂದು ಹೇಳುವ ಮಾತು ಅಕ್ಷರಶಃ ನಿಜವೆನಿಸುತ್ತದೆ.
ಹನ್ನೆರಡನೆಯ ಶತಮಾನದಲ್ಲಿ ಎಲ್ಲೆಲ್ಲಿಯೂ ಪ್ರಾಣಿಬಲಿ, ನರಬಲಿ ವ್ಯಾಪಕವಾಗಿತ್ತು, ಅನ್ಯಾಯ, ಅತ್ಯಾಚಾರ, ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದರು. ಮೂಢಾಚಾರ ಕಂದಾಚಾರ ಎಲ್ಲೆಲ್ಲಿಯೂ ತಂಬಿ ತುಳುಕುತ್ತಿತ್ತು. ಇಂತಹ ಸಂದರ್ಭದಲ್ಲಿ ಕಾರ್ಮೋಡದ ಕತ್ತಲೆಯ ಹಿಂದಿನ ಬೆಳ್ಳಿ ಗೆರೆಯಾಗಿ ಮೂಡಿ, ಕಂದಾಚಾರ ಹಿಂಸಾಚಾರಗಳನ್ನು ಹೋಗಲಾಡಿಸಿ, ತಮ್ಮದೇ ಸಮಾನತೆ, ದಾಸೋಹ ತತ್ವಗಳ ಮೂಲಕ ಸರ್ವ ರಂಗಗಳಲ್ಲಿಯೂ ಸಮೃದ್ಧಿಯ ಚಾಪನ್ನೊತ್ತಿದ ಬಸವಣ್ಣನವರು ಮಾಡಿದ ಧಾರ್ಮಿಕ ಕ್ರಾಂತಿ, ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೇ ವಿಶ್ವದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು ಎಂದರೆ ಅತಿಶಯೋಕ್ತಿಯೇನಲ್ಲ.
ಅಂತೆಯೇ, ಖ್ಯಾತ ಬ್ರಿಟನ್ ತತ್ವಜ್ಞಾನಿ ಆರ್ಥರ್ ಮೈಲ್ಸ್ ಕರ್ನಾಟಕ್ಕೆ ಆಗಮಿಸಿ 1929ರಲ್ಲಿ ಗುರುಬಸವಣ್ಣನವರ ಬಗ್ಗೆ ವಿಶೇಷ ಅಧ್ಯಯನ ಕೈಗೊಂಡು 'The land of ling'ಅನ್ನುವ ಪುಸ್ತಕವನ್ನು ಬರೆದು, ಈ ರೀತಿ ಉಲ್ಲೇಖಿಸಿದ್ದಾರೆ-"What ever the legend may say about Lord Basava, the fact is fully clear that, he is the first free thinker of india and Anubhava Mantapa is the parliment in the world" ಎಂದು ಹೇಳುವ ಮೂಲಕ ಗುರು ಬಸವಣ್ಣನವರ ವಿಶಿಷ್ಟ ವ್ಯಕ್ತಿತ್ವವನ್ನು ಹೊರಜಗತ್ತಿಗೆ ತೆರೆದಿಟ್ಟಿದ್ದಾರೆ.
ಜನ ಬದುಕಲೆಂದು, ಜಗ ಬದುಕಲೆಂದು ಮಾನವನನ್ನು ಮಾಧವನನ್ನಾಗಿಯೂ, ಭವಿಯನ್ನು ಭಕ್ತನನ್ನಾಗಿಯೂ ಮಾಡಿದ ಗುರುಬಸವಣ್ಣನವರು 12ನೆಯ ಶತಮಾನದ ಆಚಾರ್ಯ ಪರುಷ ಮತ್ತು ಪುರುಷ.
ತಮ್ಮ ಸತ್ಯ ಶುದ್ಧ ಕಾಯಕ ಮತ್ತು ದಾಸೋಹದಿಂದ ಹೆಸರಾಗಿದ್ದ ಗುರು ಬಸವಣ್ಣನವರು, 12ನೆಯ ಶತಮಾನದಲ್ಲಿ ರಾಜ ಪದ್ದತಿಯ ನಡುವೆಯೂ ಪ್ರಧಾನ ಮಂತ್ರಿಯಾಗಿ ಬೊಕ್ಕಸ ಬರಿದಾಗಿ ಅಳಿದು ಹೋಗುತ್ತಿದ್ದ ಕಲ್ಯಾಣದ ಬಿಜ್ಜಳನ ಆಸ್ಥಾನಕ್ಕೆ ಮತ್ತೆ ಚೇತರಿಕೆ ನೀಡಿದ ಮಹಾನ್ ಪುರುಷ.
ಲೌಕಿಕ ಮತ್ತು ಅಲೌಕಿಕ ಜಗತ್ತಿನ ವಿಶಿಷ್ಟ ಅನುಭೂತಿಯನ್ನು ಗಳಿಸಿದ್ದ ಗುರುಬಸವಣ್ಣನವರು ಅನುಭವ ಮಂಟಪವೆನ್ನುವ ಆಧ್ಯಾತ್ಮಿಕ ವಿಶ್ವವಿದ್ಯಾಲಯ ಸ್ಥಾಪಿಸಿ ತನ್ಮೂಲಕ ಪುರುಷ ಮತ್ತು ಸ್ತ್ರೀ ಇಬ್ಬರಿಗೂ ಸಮಾನ ಅವಕಾಶ ಕಲ್ಪಿಸಿ ನೂರಾರು ಶರಣ ಶರಣೆಯರ ಸುಪ್ತ ಪ್ರತಿಭೆಯನ್ನು ಮತ್ತು ಅವರಲ್ಲಿದ್ದ ಅನುಭಾವ ಸಾಹಿತ್ಯವನ್ನು ವಚನಗಳ ಮೂಲಕ ಹೊರ ಹೊಮ್ಮಿಸಿ, ವಿಶ್ವಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಹಿರಿಮೆ ಗರಿಮೆಗಳನ್ನು ನೀಡಿ, ಕನ್ನಡ ಸಾಹಿತ್ಯವನ್ನು ವಿಶ್ವಸಾಹಿತ್ಯಕ್ಕೆ ಕೊಂಡೊಯ್ಯುವಂತೆ ಮಾಡಿದ ಮಹಾನ್ ಪುರುಷ. ಚರ್ಚಾಕೂಟದ ವೇದಿಕೆ ಸ್ಥಾಪಿಸಿ ಸರ್ವರಿಗೂ ಮುಕ್ತ ಅವಕಾಶ ನೀಡುವ ಮೂಲಕ ವಿಶ್ವದ ಮೊದಲ ಧಾರ್ಮಿಕ ಸಂಸತ್ತನ್ನು ಸ್ಥಾಪಿಸಿದ ಹೆಗ್ಗಳಿಕೆಗೆ ಪಾತ್ರರಾದ ಮಹಾನ್ ಮೇರು ವ್ಯಕ್ತಿ.
ವೀರ ವೀರಾಗಿಣಿ ಅಕ್ಕ ಮಹಾದೇವಿ, ಅಕ್ಕ ನಾಗಲಾಂಬಿಕೆ, ಗುಡ್ಡಾಪೂರದ ದಾನಮ್ಮ ದೇವಿ, ಕಸಗುಡಿಸುವ ಸತ್ಯಕ್ಕ, ಸೂಳೆ ಸಂಕವ್ವೆ, ಆಯ್ದಕ್ಕಿ ಲಕ್ಕಮ್ಮರಂತಹ ಶ್ರೇಷ್ಠ ಶಿವಶರಣೆಯರಿಗೆ 'ಅನುಭವ ಮಂಟಪ'ದಲ್ಲಿ ಮುಕ್ತ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದು ಇಂದಿನ ಸಂಸತ್ತಿಗೂ ಆದರ್ಶವೇ ಆಗಿದೆ.
| | (ಮೂಲ - ವೆಬ್‌ದುನಿಯಾ) |
|
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|