|
| ಮರಳಿ ಬಂದಿದೆ ಯುಗಾದಿ.... | |
"ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ"
ಯುಗಾದಿ ಬಂದಾಕ್ಷಣ ಈ ಹಾಡು ಎಲ್ಲ ಕನ್ನಡಿಗರ ಹೃನ್ಮಗಳಲ್ಲಿ ಹರಿದಾಡುತ್ತದೆ. ಆದರೆ, ಈ ಹಾಡನ್ನು ನಮಗೆ ನೀಡಿದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರನ್ನು ಮಾತ್ರ ನಾವು ಮರೆತು ಬಿಡುತ್ತೇವೆ. ಹೊಸ ವರುಷವನು ಹೊಸ ಹರುಷದಿಂದ, ಸಂಭ್ರಮ ಸಡಗರಗಳಿಂದ ಸ್ವಾಗತಿಸುವ ಈ ಶುಭ ದಿನದಂದು ಕನ್ನಡಿಗರೆಲ್ಲರ ಪರವಾಗಿ ಅವರಿಗೂ ನಮ್ಮ ನಮನಗಳನ್ನು ಅರ್ಪಿಸಿ ಹೊಸ ವರುಷವನ್ನು ಬರಮಾಡಿಕೊಳ್ಳೋಣ ಬನ್ನಿ.
ಚಾಂದ್ರಮಾನ ಯುಗಾದಿಯ ಈ ಶುಭದಿನ ನಾವು ವಸಂತ ಋತುವಿನ ಚೈತ್ರಮಾಸಕ್ಕೆ ಕಾಲಿಡುತ್ತೇವೆ. ಶಿಶಿರ ಋತುವಿನಲ್ಲಿ ಕಾಲವೃಕ್ಷವು ತನ್ನೆಲ್ಲಾ ದುಃಖದುಮ್ಮಾನಗಳ ಎಲೆಗಳನ್ನು ಕಳೆದುಕೊಂಡು ಬೆತ್ತಲಾಗಿ ವಸಂತನು ತನಗಾಗಿ ತರಲಿರುವ ಹೊಸ ಉಡುಗೆಯನ್ನು ತೊಟ್ಟು ಸಂಭ್ರಮದಿಂದ ನಲಿಯಲು ಕಾತರದಿಂದ ಕಾಯುತ್ತಿರುವಂತೆ ಕಾಣುತ್ತದೆ. ಸೃಷ್ಟಿಯು ತನ್ನ ಜನನ ಮರಣಗಳ ನಿಯಮವನ್ನು, ಸೋಲು ಗೆಲುವು, ನೋವು ನಲಿವುಗಳ ಅಶಾಶ್ವತತೆಯನ್ನು ಪ್ರಕೃತಿಯ ಮೂಲಕ ಸೂಚ್ಯವಾಗಿ ತಿಳಿಯಪಡಿಸುವ ಸಲುವಾಗಿ ಈ ಋತುವಿನಾಟವನ್ನು ಆಡುವನೇನೊ ಎಂಬಂತೆ, ಒಂದು ವರ್ಷದಲ್ಲಿನ ಆರು ಋತುಗಳ, ಹನ್ನೆರಡು ಮಾಸಗಳ ಈ ನಿಸರ್ಗ ಪ್ರಕ್ರಿಯೆಯಲ್ಲಿ ಇಡೀ ಮಾನವ ಬದುಕಿನ ಸೌಂದರ್ಯವನ್ನು ಎಷ್ಟು ರಮಣೀಯವಾಗಿ ಅನಾವರಣಗೊಳಿಸುತ್ತಾನಲ್ಲವೇ!
"ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಬಗು" ಎನ್ನುವ ಕವಿವಾಣಿಯಂತೆ, ನಮ್ಮ ಹಳೆಯ ಬದುಕು ನಾವು ಇಂದು ನಾಳೆಗಳಲಿ ಬೆಳೆಸಲಿರುವ ಬದುಕಿಗೆ ಬೇರಾಗಲಿ. ನಾವೆಲ್ಲರು ಆ ಬೇರಿನಿಂದ ಹೊರಟ ವೃಕ್ಷವಾಗೋಣ. ಈ ಶುಭಗಳಿಗೆಯಲ್ಲಿ ಹಳೆ ವರುಷದ ಕಹಿಯನು ಮರೆತು, ಹೊಸ ವರುಷ ನಮಗೆಲ್ಲ ಸಿಹಿಯನ್ನು ತರಲಿ ಎಂದು ಆಶಿಸುತ್ತ, ನೋವು ನಲಿವಿನ ಸಂಕೇತವಾದ ಬೇವು-ಬೆಲ್ಲವನು ಸವಿದು, ಬದುಕಿನ ಸಿಹಿಕಹಿಗಳೆರಡನು ಸಮಾನವಾಗಿ ಸ್ವೀಕರಿಸುವ ಮನಸ್ಸನ್ನು ಕರುಣಿಸು ಎಂದು ಭಗವಂತನಲ್ಲಿ ಪ್ರಾರ್ಥಿಸಿ, ನಮ್ಮ ಹಿರಿಯರಿಗೆ ನಮಿಸೋಣ.
ಈ ವರುಷದ ವಸಂತ ಬರೆಯುವ ಒಲವಿನ ಓಲೆ, ಎಲ್ಲರ ಬದುಕಿನ ಎಲೆಎಲೆಗಳ ಮೇಲೆ ಚಿಗುರಲಿ. ಮಾಮರದ ಕೋಗಿಲೆಯ ನಾದಲೀಲೆ ನಾಡಿನೆಲ್ಲಾ ಭಾಂದವರ ಮನೆಮನಗಳನು ತುಂಬಲಿ. "ಹೊಸ ದಿನ, ಹೊಸ ಚಿಗುರು, ಹೊಸ ಕನಸು, ಹೊಸ ಬದುಕು" ಎಲ್ಲವನು ಈ ಯುಗಾದಿ ಮತ್ತೆ ಎಲ್ಲರಿಗೂ ತರಲಿ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|