ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಧರ್ಮ ವ್ರತ-ಹಬ್ಬ
ಮಾತೆಯಾಗಿ ಪೊರೆವವಳು
- ಮಂಜುನಾಥ ಬಂಡಿ
"ಹೆಣ್ಣನ್ನು ಮಾಯೆಯಾಗಿ ಕಂಡಾಗ ವಿಕೃತಿ
ಹೆಣ್ಣನ್ನು ಹೆಣ್ಣನ್ನಾಗಿ ಕಂಡಾಗ ಪ್ರಕೃತಿ
ಆದರೆ ಹೆಣ್ಣನ್ನು ಮಾತೆಯಾಗಿ ಕಂಡಾಗಲೇ ಸಂಸ್ಕ್ರತಿ"

ಎಂಬ ಶ್ರೇಷ್ಠ ಅಮರವಾಣಿಯಂತೆ ಹೆಣ್ಣು ಜನನಿಯಾಗಿ, ಮಡದಿಯಾಗಿ ಈ ಜಗತ್ತನ್ನು ಪೊರೆಯುತ್ತಿರುವುದರಿಂದಲೆ ಅವಳಿಗೆ ಮಾತೆಯ ಸ್ಥಾನವನ್ನು ನೀಡಿರುವುದು. ಪುರಾಣ ಕಾಲದಿಂದಲೂ ಹೆಣ್ಣುಮಕ್ಕಳು ಸರ್ವರೀತಿಯಲ್ಲಿಯೂ ತಾನೇನು ಗಂಡಸಿಗಿಂತ ಯಾತರಲ್ಲೂ ಕಡಿಮೆಯಿಲ್ಲವೆಂಬುದನ್ನು ಸಾಬೀತು ಪಡಿಸುತ್ತಾ ಬಂದಿದ್ದಾಳೆ. ಸಹನೆ, ತ್ಯಾಗದ ಪ್ರತೀಕವಾಗಿ ಪುರಾತನ ಕಾಲದಲ್ಲಿ ಸೀತೆ, ದ್ರೌಪದಿ ಮಹಿಳಾ ಮಣಿಗಳ ಕೀರ್ತಿಯನ್ನು ಬೆಳಗಿದ್ದಾರೆ.

ಇಂದು ಮಹಿಳೆಯರಿಗೆ ಸಂಸತ್ತಿನಲ್ಲಿ ಶೇಕಡಾ 33ರಷ್ಟು ಮಿಸಲಾತಿ ಕೊಡಬೇಕೆನ್ನುವ ತಿಕ್ಕಾಟದಲ್ಲಿರುವ ನಮ್ಮ ಸರಕಾರ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ ಅಚ್ಚರಿಯಿಂದ ಸಮಾನತೆಯನ್ನು ಘೋಷಿಸುತ್ತದೆ. ಏಕೆಂದರೆ ಕಂದಾಚಾರ, ಮೂಢಾಚಾರಗಳ ಮಧ್ಯೆಯೆ ಸಮಾಜವನ್ನು ಎದುರು ಹಾಕಿಕೊಂಡು ಆದರ್ಶದ ಕಲ್ಯಾಣ ರಾಜ್ಯ ನಿರ್ಮಾಣದ ಪರಿಕಲ್ಪನೆ ನೀಡಿದ್ದ ಬಸವಣ್ಣನವರು ಮಹಿಳೆಯರಿಗೆ ಸಮಾನತೆಯ ಹಕ್ಕನ್ನು ನೀಡಿದ್ದರು.

ಕಸ ಗುಡಿಸುವ ಸತ್ಯಕ್ಕನಿಂದ ಹಿಡಿದು ಚೆನ್ನಮಲ್ಲಿಕಾರ್ಜನನೆನ್ನಗಂಡ ಎನ್ನುವ ಅಕ್ಕಮಹಾದೇವಿಯಂತಹ ಆದರ್ಶ ಮಾತೆಯರಿಗೆ ಅನುಭವ ಮಂಟಪದಲ್ಲಿ ಚರ್ಚೆಗೆ ಅವಕಾಶ ನೀಡಿ ಮಹಿಳೆಯರ ಸುಪ್ತ ಪ್ರತಿಭೆಯನ್ನು ಹೊರಜಗತ್ತಿಗೆ ತೋರಿಸಿಕೊಟ್ಟರು.

14ನೇಯ ಶತಮಾನದಲ್ಲಿ ಸಂಚಿಯ ಹೊನ್ನಮ್ಮನಂತಹ ಕವಳ ಕಾಯಕದ ಮಹಿಳೆ ಸಾಹಿತ್ಯ ಪ್ರಪಂಚದಲ್ಲಿ ಮಿಂಚಿ, ಹೆಣ್ಣು ಹೆಣ್ಣೆಂದು ಹೆಣ್ಣನ್ನೇಕೆ ಹೀಗಳೆಯುವಿರಿ ಹೆಣ್ಣಲ್ಲವೆ ನಿಮ್ಮನ್ನೆಲ್ಲ ಪೊರೆದ ತಾಯಿ ಎಂದು ಧೈರ್ಯವಾಗಿ ಪುರುಷವರ್ಗವನ್ನು ಪ್ರಶ್ನಿಸಿದ್ದಾಳೆ.

ತೊಟ್ಟಿಲ ತೂಗುವ ಕೈ ಜಗತ್ತನ್ನು ಆಳಬಲ್ಲದು ಎಂಬುದನ್ನು ಸಾಧಿಸಿ ತೋರಿಸಿದ ಕಿತ್ತೂರ ರಾಣಿ ಚೆನ್ನಮ್ಮ ಮಹಿಳಾ ಕುಲಕ್ಕೆ ಸದಾ ಆದರ್ಶಪ್ರಾಯರು. ಗಂಡ ಯುದ್ಧದಲ್ಲಿ ಮಡಿದಾಗ ಮಕ್ಕಳ ಪಾಲನೆ ಪೋಷಣೆಗಿಂತ ರಾಜ್ಯದ ಸಮಸ್ತ ಜನತೆಯ ಹಿತ ಮುಖ್ಯವೆಂದು ಸೂರ್ಯಮುಳುಗದ ಸಾಮ್ರಾಜ್ಯದ ಬ್ರಿಟಿಷರ ವಿರುದ್ಧ ಸಡ್ಡುಹೊಡೆದು ನಿಂತು ಕಿತ್ತೂರಿನ ಹಿತವನ್ನು ಕಾಪಾಡಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಮಹಿಳೆಯಾಗಿ ಮಹಿಳಾ ಜಗತ್ತು ಹೆಮ್ಮೆಯಿಂದ ಬೀಗುವಂತೆ ಮಾಡಿದ್ದಾಳೆ.

ಅನಾಥರ, ನಿರ್ಗತಿಕರ ಮಾತೆಯಾಗಿ ಅವರನ್ನೆಲ್ಲ ಪೋಷಣೆ ಮಾಡಿದ ಮದರ್ ಥೆರೇಸಾರಂತಹ ನಿಷ್ಕಲ್ಮಷ ಮನಸ್ಸಿನ ಮಹಾ ಮಾತೆಯನ್ನು ಈ ಭೂಮಿ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಸದಾ ಸ್ಮರಿಸುತ್ತಲೆ ಇರುತ್ತದೆ.


(ಮೂಲ - ವೆಬ್‌ದುನಿಯಾ)
1| 2
 
ಮತ್ತಷ್ಟು...
ಮರಳಿ ಬಂದಿದೆ ಯುಗಾದಿ....
ರಂಗುರಂಗಾದ 'ರಂಗಿನ' ಹಬ್ಬ
ಭಾವ ಶುದ್ಧಿಗಾಗಿ ವ್ರತಾಚರಣೆ
ಪೂಜಾ ವಿಧಾನ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace