|
| ರಂಗುರಂಗಾದ 'ರಂಗಿನ' ಹಬ್ಬ | |
ಹಿರಣ್ಯಕಶುಪು ಒಬ್ಬ ಕ್ರೂರ ಮತ್ತು ಶಕ್ತಿ ಶಾಲಿ ರಾಜ. ಸ್ವತಃ ಹಿರಣ್ಯಕಶುಪು ತನ್ನನ್ನು ತಾನೆ ದೇವರೆಂದು ಭಾವಿಸುತ್ತಿದ್ದ. ಎಲ್ಲರು ಅವನನ್ನೇ ಪೂಜಿಸಬೇಕು ಎಂಬುದು ಅವನ ಆಜ್ಞೆ. ಆದರೆ ಅವನ ಮಗ ಪ್ರಹಲ್ಲಾದ ಮಾತ್ರ ಭಗವಾನ್ ವಿಷ್ಣುವಿನ ಭಕ್ತ. ಅವನನ್ನೇ ಪೂಜಿಸಲು ಪ್ರಾರಂಭಿಸುತ್ತಾನೆ. ಹಿರಣ್ಯಕಶುಪು ತನ್ನನ್ನು ಪೂಜಿಸಲು ಹೇಳಿದರೂ ಪ್ರಹ್ಲಾದ ಮಾತ್ರ ನಾರಾಯಣನ ಭಕ್ತಿಯಲ್ಲೇ ಮಗ್ನನಾಗುತ್ತಾನೆ.
ಪ್ರಹಲ್ಲಾದನನ್ನು ಭಗವಾನ್ ನಾರಾಯಣನ ಧ್ಯಾನದಿಂದ ದೂರ ಮಾಡಲು ಹಿರಣ್ಯ ತನ್ನ ಸಹೋದರಿ ಹೋಲಿಕಾಳ ಸಹಾಯ ಕೋರುತ್ತಾನೆ. ಕಡು ಬೆಂಕಿಯಲ್ಲಿ ನಿಂತರು ಜೀವಂತವಾಗಿರುವ ಶಕ್ತಿಯನ್ನು ಹೋಲಿಕಾ ಹೊಂದಿರುತ್ತಾಳೆ. ಹಾಗಾಗಿ ಉರಿಯುವ ಬೆಂಕಿಯಲ್ಲಿ ಪ್ರಹಲ್ಲಾದನನ್ನು ತನ್ನ ಮಡಿಲಲ್ಲಿರಿಸಿ ಕುಳಿತುಕೊಳ್ಳಲು ಹೋಲಿಕಾಳಿಗೆ ಹಿರಣ್ಯಕಶುಪು ಅಪ್ಪಣೆ ನೀಡುತ್ತಾನೆ. ಆದರೆ ಪ್ರಹಲ್ಲಾದನ ಭಕ್ತಿಗೆ ಒಲಿದ ವಿಷ್ಣು ಅವನನ್ನು ರಕ್ಷಿಸುತ್ತಾನೆ. ಹೋಲಿಕೆ ಬೆಂಕಿಯ ದಗೆಯಲ್ಲಿ ಹತಳಾಗುತ್ತಾಳೆ. ಇದು ಹೋಲಿ ಉತ್ಸವದ ಪೌರಾಣಿಕ ಹಿನ್ನೆಲೆ. 'ಹೋಲಿ' ಭಾರತೀಯ ಪ್ರಮುಖ ಹಬ್ಬಗಳಲ್ಲಿ ಒಂದು. ಮೂಲತಃ ಇದರ ಹೆಸರು 'ಹೋಳಿಕ'. ಈ ಆಚರಣೆಯ ಪೂರ್ಣ ವಿವರಣೆಯು ಜೈಮಿನಿಯ ಪೂರ್ವಮೀಮಾಂಸ-ಸೂತ್ರ ಮತ್ತು ಕತಕ ಗ್ರಯಾ ಸೂತ್ರಗಳಲ್ಲಿ ಕಂಡುಬಂದಿದೆ. ಈ ಹಬ್ಬವನ್ನು ಹೆಚ್ಚಾಗಿ ಭಾರತದ ಪೂರ್ವ ಭಾಗಗಳಲ್ಲಿ ಎಲ್ಲಾ ಆರ್ಯನ್ನರು ಆಚರಿಸುತ್ತಾರೆ ಎಂಬುದು ಇತಿಹಾಸ ತಜ್ಞರ ನಂಬಿಕೆ.
ಕ್ರಿಸ್ತ ಪೂರ್ವದಲ್ಲೇ ಹೋಳಿಯನ್ನು ಆಚರಿಸುತ್ತಿದ್ದರು ಎಂಬುದು ಕೆಲವರ ವಾದ. ಪ್ರಾರಂಭಿಕ ಹಂತದಲ್ಲಿ ಹೋಳಿಯನ್ನು ಗೃಹಿಣಿಯರು ತಮ್ಮ ಕುಟುಂಬದ ಸಂತೋಷ ಮತ್ತು ಯೋಗಕ್ಷೇಮಕ್ಕಾಗಿ ಆಚರಿಸುತ್ತಿದ್ದರು. ಹೋಳಿ ಹಬ್ಬದೊಂದಿಗೆ ಅವರು ಪೂರ್ಣ ಚಂದ್ರನನ್ನೂ ಪೂಜಿಸುತ್ತಿದ್ದರು.
ಹೋಳಿ ಹಬ್ಬದ ಎಣಿಕಾ ವಿಧಾನ
ಚಂದ್ರ ಮಾಸವನ್ನು 'ಪೂರ್ಣಿಮಾಂತ' ಮತ್ತು 'ಅಮಾಂತ' ಎಂಬ ಎರಡು ರೀತಿಯಲ್ಲಿ ಗುರುತಿಸಬಹುದು. ಪ್ರಸ್ತುತ ಜನತೆ ಸಾಮಾನ್ಯವಾಗಿ ಅಮಾಂತವನ್ನೇ ಎಣಿಸುತ್ತಾರೆ. ಹಿಂದಿನ ದಿನಗಳಲ್ಲಿ ಪೂರ್ಣಿಮಾಂತವನ್ನು ಗುರುತಿಸುತ್ತಿದ್ದರು. 'ಪೂರ್ಣಿಮಾಂತ'ದ ಪ್ರಕಾರ ಫಾಲ್ಗುಣಿ ಪೂರ್ಣಿಮವು ವರ್ಷದ ಕೊನೆಯ ದಿನವಾಗಿದ್ದು ವಸಂತ ಋತುವಿನೊಂದಿಗೆ ಹೊಸ ವರ್ಷ ಪ್ರಾರಂಭವಾಗುತ್ತದೆ. ಹಾಗೆ ಪೂರ್ಣ ಚಂದ್ರ ಹಬ್ಬವು ವಸಂತ ಋತುವಿನ ಆಗಮನವನ್ನು ಸೂಚಿಸುತ್ತ ಹೋಳಿ ಎಂಬ ಹೆಸರಿನೊಂದಿಗೆ ಆಚರಿಸಲ್ಪಡುತ್ತದೆ. ಈ ಆಚರಣೆಯ ಇತರ ಹೆಸರೆಂದರೆ ವಸಂತ ಮಹೋತ್ಸವ ಮತ್ತು ಕಾಮ ಮಹೋತ್ಸವ.
ವೇದ ಮತ್ತು ಪುರಾಣಗಳಾದ ನಾರದ ಪುರಾಣ ಮತ್ತು ಭಾವಿಷ್ಯ ಪುರಾಣದಲ್ಲಿ ಈ ಹಬ್ಬದ ಕುರಿತು ವಿವರಣೆ ಇದ್ದರೂ ಜೈಮಿನಿ ಮಿಮಾಂಸದಲ್ಲಿ ಹಬ್ಬದ ಆಚರಣೆಯ ವರ್ಣನೆ ಇದೆ. ವಿಂಧ್ಯಾ ಪ್ರದೇಶದ ರಾಮಗರ್‌ನಲ್ಲಿರುವ ಕ್ರಿಸ್ತ ಪೂರ್ವ 300ವರ್ಷ ಹಳೆಯ ಶಿಲಾ ಶಾಸನದಲ್ಲಿ ಹೋಳಿಯೋತ್ಸವದ ಕುರಿತು ವಿವರಣೆ ನೀಡಿದ್ದಾರೆ. ಪ್ರಸಿದ್ದ ಮುಸ್ಲಿಂ ರಾಯಭಾರಿ ಅಲ್ಬರುನಿ ಮಾತ್ರವಲ್ಲದೆ ಇತರ ಮುಸ್ಲಿಂ ಬರಹಗಾರರೂ ತಮ್ಮ ಐತಿಹಾಸಿಕ ಪುಸ್ತಕಗಳಲ್ಲಿ ಹೋಳಿಯನ್ನು ಕೇವಲ ಹಿಂದೂಗಳು ಮಾತ್ರವಲ್ಲದೆ, ಮುಸ್ಲಿಮರೂ ಒಟ್ಟು ಸೇರಿ ಆಚರಿಸುತ್ತಿದ್ದರು ಎಂದು ಬರೆದಿದ್ದಾರೆ.
| | (ಮೂಲ - ವೆಬ್‌ದುನಿಯಾ) |
|
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|