|
| ಗವಿ ಗಂಗಾಧರೇಶ್ವರನ ಮೇಲೆ ಸೂರ್ಯಕಿರಣ |
| ಬುಧವಾರ, 16 ಜನವರಿ 2008 ( 10:19 IST ) | |
ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸಂಕ್ರಾಂತಿಯಂದು ವಿಶೇಷ ಕಳೆ. ಇಲ್ಲಿನ ಗುಹೆಯೊಳಗಿನ ಶಿವಲಿಂಗ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ಸಂಕ್ರಾತಿ ದಿನದಂದು ಗುಹೆಯೊಳಗಿನ ಶಿವಲಿಂಗದ ಮೇಲೆ ಸೂರ್ಯ ಕಿರಣವು ಬೀಳುವುದು ಇಲ್ಲಿನ ವಿಶೇಷತೆ.
ಸುಮಾರು 20,000 ವರ್ಷಗಳ ಇತಿಹಾಸವಿರುವ ಈ ಶಿವಲಿಂಗವು ದಕ್ಷಿಣಾಭಿಮುಖವಾಗಿ ಸ್ವಯಂ ಉದ್ಭವವಾಗಿದೆ. ಇದು ಗೌತಮ ಮುನಿಗಳು ತಪಗೈದ ಪುಣ್ಯಸ್ಥಳವೆಂಬ ಐತಿಹ್ಯವಿದೆ. ಅಲ್ಲದೆ, ಛತ್ರಪತಿ ಶಿವಾಜಿ ಆದೇಶದ ಮೇರೆಗೆ ಈ ದೇವಾಲಯ ಸ್ಥಾಪಿತವಾಗಿದೆ. ಇದರ ಜೀರ್ಣೋದ್ದಾರವನ್ನು ನಾಡಪ್ರಭು ಕೆಂಪೇಗೌಡರು ಮಾಡಿಸಿದ್ದರು ಎಂಬುದನ್ನು ಇತಿಹಾಸ ಸಾರುತ್ತದೆ.
ಇದರ ಇನ್ನೊಂದು ವೈಶಿಷ್ಟ್ಯವೆಂದರೆ ಪಾರ್ವತಿ ಪರಮೇಶ್ವರನ ಎಡಭಾಗದಲ್ಲಿದ್ದರೆ, ಇಲ್ಲಿ ಪಾರ್ವತಿ ಶಿವನ ಬಲಭಾಗದಲ್ಲಿ ನೆಲೆಸಿದ್ದಾಳೆ. ದೇಗುಲದ ಬಳಿಯಲ್ಲಿ ಗೋಸಾಯಿ ಮಠದಲ್ಲಿ ಅವಾನಿ ಪೀಠವಿದೆ. ಕಲ್ಲಿನಿಂದ ಕೆತ್ತಲಾದ ಪೀನಪಾನ, ಚಂದ್ರಪಾನ, ಡಮರುಗಳು ಇಲ್ಲಿನ ವಿಶೇಷ ಆಕರ್ಷಣೆ.
ಇಲ್ಲಿನ ಪ್ರಸಿದ್ದಿಯು ಹಲವಾರು ಗಣ್ಯವ್ಯಕ್ತಿಗಳನ್ನು ತನ್ನತ್ತ ಸೆಳೆದಿದೆ. ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿ ಹರಕೆ ಕಟ್ಟಿಕೊಂಡಲ್ಲಿ ಈಡೇರುತ್ತದೆ ಎಂಬುದು ಭಕ್ತರ ನಂಬುಗೆ.
ಈ ಎಲ್ಲಾ ವೈಶಿಷ್ಠ್ಯ ಹೊಂದಿರುವ ಗವಿ ಗಂಗಾಧರೇಶ್ವರ ದೇವಾಲಯ ಅನನ್ಯ ಭಕ್ತಿಯ ತಾಣವಾಗಿ ಪ್ರಸಿದ್ದಿಯನ್ನು ಪಡೆದಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿಕಿತ್ಸೆ - ಒತ್ತಡದ ಸಂದರ್ಭದಲ್ಲಿ ನಾವು ಪ್ರಶಾಂತವಾಗಿ, ನಿರಾಳವಾಗಿ ಇರುವುದನ್ನು ಕಲಿಯುವುದರಿಂದ ಸಮಸ್ಯೆ ಸುಲಭವಾಗಿ ಬಗೆಹರಿಯಬಹುದು ಮತ್ತು ಆರೋಗ್ಯಕಾರಿ ಜೀವನಕ್ಕೂ ಸಹಕಾರಿಯಾಗುತ್ತದೆ. |
| |
|
|
|
|
|
|
|
|
|
| ಪ್ರೇಮಗಾಥೆ - ನೀನಂದು ನನ್ನ ಮೊಬೈಲ‌್‌ಗೆ ಕರೆ ಮಾಡಿದಾಗ ಕೇಳಲಿಲ್ಲವಾ ಯಾಕೆ ಈ ಹಾಡನ್ನು ಕಾಲರ್ ಟ್ಯೂನ್ ಆಗಿ ಸೆಟ್ ಮಾಡಿದ್ದೀಯಾ ಅಂತ? ನಿನಗೆ ಈ ಹಾಡು ನೆನಪಿದೆಯಾ ಅನು?..ಅಂದು ನಮ್ಮ ಕಾಲೇಜ್ ಡೇಗೆ ನೀನು ನನಗೆ ಡೆಡಿಕೇಟ್ ಮಾಡಿದ್ದು ಈ ಹಾಡನ್ನೇ ಅಲ್ವಾ.. |
| |
|
|
|
|
|
|
|