ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಧರ್ಮ ಧಾರ್ಮಿಕ ಲೇಖನ
ಸಪ್ತಮುಕ್ತಿ ಕ್ಷೇತ್ರಗಳಲ್ಲೊಂದು ಕೊಲ್ಲೂರು ಮುಕಾಂಬಿಕಾ ಸನ್ನಿಧಿ
- ವಿಷ್ಣು
ಪಶ್ಚಿಮ ಘಟ್ಟದ ರಮಣೀಯ ತಪ್ಪಲು ಹಾಗೂ ಸೌಪರ್ಣಿಕಾ ನದಿ ತೀರದ ಶಾಂತಪರಿಸರದಲ್ಲಿರುವ ಮುಕ್ತಿ ಕ್ಷೇತ್ರ ಕೊಲ್ಲೂರು. ಇಲ್ಲಿನ ಶಕ್ತಿ ದೇವತೆ ಮುಕಾಂಬಿಕೆಯ ಸನ್ನಿಧಿಯನ್ನು ಸಪ್ತಮುಕ್ತಿ ಕ್ಷೇತ್ರಗಳ ಸನ್ನಿಧಿಗಳಲ್ಲೊಂದೆಂದು ಪರಿಗಣಿಸಲಾಗುತ್ತದೆ.

ಕೊಲ್ಲೂರು ಮುಕಾಂಬಿಕೆಯ ಶಕ್ತಿ ಪ್ರಭೆ ಭಾರತದಾದ್ಯಂತವಲ್ಲದೆ ವಿದೇಶಿಗರತ್ತಲೂ ಹರಡಿದೆ. ಆದರೂ ದಕ್ಷಿಣ ಭಾರತದ ಭಕ್ತರ ಸಂಖ್ಯೆ ಇಲ್ಲಿ ಸಾಮಾನ್ಯ. ಕೊಡಚಾದ್ರಿಯ ರಮ್ಯ ನಿಸರ್ಗದ ಮಡಿಲಿನ ಶಾಂತ ಗಂಭೀರ ತಾಣದಲ್ಲಿ ಮಾನಸಿಕ ನೆಮ್ಮದಿಯಂತೆಯೇ ಭಕ್ತಾದಿಗಳಿಗೆ ದೇವೀಕೃಪೆಯ ಸಾನಿಧ್ಯವೂ ಇದೆ.

ಉಡುಪಿ, ಸುಬ್ರಹ್ಮಣ್ಯ, ಕುಂಭಾಸಿ, ಕೊಡೇಶ್ವರ, ಶಂಕರನಾರಾಯಣ, ಗೋಕರ್ಣ ಹಾಗೂ ಕೊಲ್ಲೂರು ಪರಶುರಾಮ ಸೃಷ್ಟಿಯಲ್ಲಿ ಕಾಣಸಿಗುವ ಏಳು ಮುಕ್ತಿ ಕ್ಷೇತ್ರಗಳು. ಪಾರ್ವತಿ, ಗಣೇಶ, ಸುಬ್ರಹ್ಮಣ್ಯ, ಈಶ್ವರ ದೇವರುಗಳು. ಆದರೂ ಇಲ್ಲಿರುವ ವೀರಭದ್ರ, ಮಹಾಲಕ್ಷ್ಮಿ, ಆಂಜನೇಯ, ಸರಸ್ವತಿ, ನಾಗದೇವನಿಗೂ ಅಪಾರ ಮಹಿಮೆಯಿದೆ. ಭಕ್ತವೃಂದವೂ ಇದೆ.

ಕೊಲ್ಲೂರು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿದೆ. ಕುಂದಾಪುರದಿಂದ 50 ಕಿ.ಮೀ. ಅಂತರವಿದೆ. ಮಂಗಳೂರಿನಿಂದ 135 ಕಿ.ಮೀ. ದೂರವಿದೆ.ರಾಜ್ಯದ ಇತರ ಭಾಗಗಳಾದ ಬೆಂಗಳೂರು, ಮೈಸೂರು, ಶಿವಮೊಗ್ಗ ಮುಂತಾದೆಡೆಗಳಿಂದ ಸಾಕಷ್ಟು ಖಾಸಗಿ ಬಸ್ಸುಗಳು ಲಭ್ಯವಿವೆ.

ಸ್ಕಂದ ಪುರಾಣದಲ್ಲಿ ಕೊಲ್ಲೂರನ್ನು ಮಹಾರಣ್ಯಪುರ ಎಂದು ಹೆಸರಿಸಲಾಗಿದೆ. ಕೋಲ ಎನ್ನುವ ಮಹರ್ಷಿ ತಪಸ್ಸನ್ನಾಚರಿಸಿದ ಕಾರಣದಿಂದ ಕೊಲ್ಲಾಪುರ, ಕೊಲ್ಲೂರು ಎಂಬ ಹೆಸರು ಪಡೆಯಿತೆನ್ನಲಾಗಿದೆ. ಆತನ ಕೋರಿಕೆಯಂತೆ ಶಿವಶಿವೆ ಶಕ್ತಿ ಸ್ವರೂಪಿಣಿಯರು ಇಲ್ಲಿ ಅವತರಿಸಿದರೆಂದು ಕೊಲ್ಲೂರನ್ನು ಪರಶುರಾಮ ಸೃಷ್ಟಿ ಎಂದು ಪುರಾಣಗಳು ಹೇಳುತ್ತಿದ್ದರೆ, ಶಂಕರಾಚಾರ್ಯರು ಮೂಕಾಂಬಿಕಾ ಮೂರ್ತಿಯನ್ನು ಪ್ರತಿಷ್ಠಾಪಿಸಿದರು ಎಂಬುದಾಗಿ ಇತಿಹಾಸ ನೆನಪಿಸುತ್ತದೆ. ಆದಿಶಂಕರರಿಗೆ ಶಕ್ತಿದೇವತೆಯೇ ಅಪ್ಪಣೆ ನೀಡಿ ಈ ಕಾರ್ಯಮಾಡಿಸಿದಳೆಂಬುದು ಸ್ಥಳಪುರಾಣದ ದಾಖಲೆ.

ಕೊಡಚಾದ್ರಿ, ಅಂಬಾವನ, ಚಿತ್ರಮೂಲ ಪ್ರದೇಶಗಳಲ್ಲಿ ಶ್ರೀಶಂಕರರು ತಮ್ಮ ಸಾಧನೆ ನಡೆಸಿದರು, ತಪಃಮಗ್ನರಾಗಿದ್ದರೆಂಬ ಮಾಹಿತಿ ಇದೆ.ಶಂಕರರ ಸೌಂದರ್ಯಲಹರಿ ಕೃತಿ ರಚನೆಗೂ ಈ ಸನ್ನಿಧಿ ಪ್ರೇರಣೆಯಾಯಿತೆಂಬ ಹೇಳಿಕೆ ಇದೆ. ಇನ್ನೊಂದು ವಿಶೇಷತೆ ಎಂದರೆ ದೇವಿ ಮೂರ್ತಿಗೆ ಅಭಿಮುಖವಾಗಿ ಸ್ವಯಂಭೂ ಲಿಂಗ ತ್ರಿಮೂರ್ತಿ ರೂಪವಿದೆ.

ಶಿವ ಹಾಗೂ ಶಕ್ತಿಯ ಪ್ರತೀಕವೆಂದು ನಂಬಲಾಗಿರುವ ಸವರ್ಣ ರೇಖೆ ಲಿಂಗದ ಮಧ್ಯಭಾಗದಲ್ಲಿದೆ. ಸೂರ್ಯ ಕಿರಣಗಳಿಗೆ ಮಾತ್ರ ಈ ಸ್ವರ್ಣ ರೇಖೆ ಗೋಚರಿಸುತ್ತದೆ. ತ್ರಿಮೂರ್ತಿಗಳ ಏಕಆಕಾರ, ಪಾರ್ವತಿ ಲಕ್ಷ್ಮಿ,ಸರಸ್ವತೀ ಸಂಗಮವು ಮುಕಾಂಬಿಕೆಯ ಅವತಾರ ಎಂಬುದಾಗಿ ಇಲ್ಲಿಗಾಗಮಿಸುವ ಭಕ್ತಾದಿಗಳ ನಂಬಿಕೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದಶರಥನ ಪುತ್ರಶೋಕದ ಹಿನ್ನೆಲೆ
ಬಲಿ ಚಕ್ರವರ್ತಿ-ರಾವಣನ ಕತೆ
ರಾಮಾಯಣಕ್ಕೆ ನಾಂದಿ ಹಾಡಿದ ಘಟನೆ
ರಾವಣ ಕುಂಭಕರ್ಣ ಶೂರ್ಪನಖಿ ಜನನ
ರಾಮಾಯಣದ ಉಗಮ
ಶಿವ ಜಡೆಯಿಂದ ಮಧುಸುರಿಸಿದ ಮಧುರೈ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace