ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಧರ್ಮ ಧಾರ್ಮಿಕ ಲೇಖನ
ಭಕ್ತರ ಇಷ್ಟಾರ್ಥ ಸಿದ್ಧಿಗೆ ತಿರುಪತಿ ದರ್ಶನ
- ಎಚ್. ಎನ್. ಬಿ
ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನ ದೇಶ, ವಿದೇಶಗಳಲ್ಲಿ ಸುಪ್ರಸಿದ್ದ. 9 ನೇ ಶತಮಾನದಲ್ಲಿ ಕಾಂಚೀಪುರಂನ ಪಲ್ಲವರು,10 ನೇ ಶತಮಾನದಲ್ಲಿ ತಂಜಾವೂರಿನ ಚೋಳರು, ಮಧುರೈನ ಪಾಂಡವರು, 14ರಿಂದ 15 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು ಭಗವಾನ್ ವೆಂಕಟೇಶ್ವನ ಭಕ್ತರಾಗಿದ್ದರೆಂದು ಐತಿಹಾಸಿಕ ಶಿಲ್ಪಗಳು, ಇತಿಹಾಸದ ಮೈಲುಗಲ್ಲುಗಳು ಹೇಳುತ್ತವೆ.

ವಿಜಯನಗರದ ಅರಸರ ಕಾಲದಲ್ಲಿ ರಾಜಾ ಶ್ರೀಕೃಷ್ಣದೇವರಾಯ ದೇವಾಲಯದ ಅಭುದ್ಯಯಕ್ಕಾಗಿ ಶ್ರಮಿಸಿದನೆಂದು ಇತಿಹಾಸ ಹೇಳುತ್ತದೆ. ಈಗಲೂ ದೇವಾಲಯದ ಮುಖ್ಯ ಮಂದಿರದಲ್ಲಿ ವೆಂಕಟಪತಿರಾಯ ಅವರ ಮೂರ್ತಿಯನ್ನು ಕಾಣಬಹುದಾಗಿದೆ. ವಿಜಯನಗರದ ಸಾಮ್ರಾಜ್ಯದ ಅವನತಿಯ ನಂತರವೂ ದೇಶದ ಎಲ್ಲೆಡೆ ಇರುವ ಭಕ್ತರು ಕೊಡುಗೆಗಳನ್ನು ನೀಡುವುದರ ಮೂಲಕ ದೇವಸ್ಥಾನವನ್ನು ಶ್ರೀಮಂತಗೊಳಿಸುತ್ತಲೇ ಪ್ರಖ್ಯಾತಗೊಳಿಸಿದರು.

ಮರಾಠಾ ಜನರಲ್ ಎಂದೇ ಖ್ಯಾತಿವೆತ್ತ ರಾಘೋಜಿ ಭೋಂಸ್ಲೇ ದೇವಸ್ಥಾನಕ್ಕೆ ಅತ್ಯಮೂಲ್ಯವಾದ ಆಭರಣ, ವಜ್ರಾಭರಣಗಳನ್ನು ನೀಡಿದ್ದು ಅವುಗಳನ್ನು ಇಂದಿನವರೆಗೆ ಭದ್ರವಾಗಿ ಇಡಲಾಗಿದೆ. ನಂತರ ಆಳಿದ ಮೈಸೂರು ಮಹಾರಾಜರು, ಗದ್ವಾಲ್‌ನ ರಾಜರು ದೇವಾಲಯಕ್ಕೆ ಸಂಪತ್ತಿನ ಹೊಳೆಯನ್ನೇ ಹರಿಸಿದರು.

ಹಿಂದು ಸಾಮ್ರಾಜ್ಯಗಳು ಅಳಿದ ನಂತರ, ಕರ್ನಾಟಕದಲ್ಲಿನ ಮುಸ್ಲಿಂ ರಾಜರು, ನಂತರದ ಬ್ರಿಟೀಷರು ಮಂದಿರವನ್ನು ತಮ್ಮ ಆಧೀನಕ್ಕೆ ತೆಗೆದುಕೊಂಡಿದ್ದಲ್ಲದೆ ಈ ದೇವಸ್ಥಾನದ ಅಡಿಯಲ್ಲಿ ಉಳಿದ ದೇವಾಲಯಗಳನ್ನು ಆಧೀನಕ್ಕೊಳಪಡಿಸಲಾಯಿತು. 1843ರಲ್ಲಿ ಈಸ್ಟ್ ಇಂಡಿಯಾ ಕಂಪನಿ ದೇವಸ್ಥಾನವನ್ನು ತಿರುಮಲೆಯ ಮಹಾಂತರಿಗೆ ಒಂದು ಶತಮಾನಗಳ ಕಾಲ ನೀಡಿತು. 1933ರಲ್ಲಿ ಮದರಾಸ್ ಸರಕಾರ ದೇವಸ್ಥಾನವನ್ನು ಟ್ರಸ್ಟನ್ನಾಗಿ ಪರಿವರ್ತಿಸಿ(ಟಿಟಿಡಿ) ಆದೇಶ ಹೊರಡಿಸಿತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದಶರಥನ ಪುತ್ರಶೋಕದ ಹಿನ್ನೆಲೆ
ಬಲಿ ಚಕ್ರವರ್ತಿ-ರಾವಣನ ಕತೆ
ರಾಮಾಯಣಕ್ಕೆ ನಾಂದಿ ಹಾಡಿದ ಘಟನೆ
ರಾವಣ ಕುಂಭಕರ್ಣ ಶೂರ್ಪನಖಿ ಜನನ
ಸಪ್ತಮುಕ್ತಿ ಕ್ಷೇತ್ರಗಳಲ್ಲೊಂದು ಕೊಲ್ಲೂರು ಮುಕಾಂಬಿಕಾ ಸನ್ನಿಧಿ
ರಾಮಾಯಣದ ಉಗಮ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace