|
| ಆರುವರ್ಷಕ್ಕೊಮ್ಮೆ ಅರ್ಧಕುಂಭಮೇಳ-ಪ್ರಯಾಗದಲ್ಲಿ ಭಕ್ತಾದಿಗಳ ಮಹಾಮೇಳ | |
ಅಲಹಾಬಾದ್‌ನ ಪ್ರಯಾಗದಲ್ಲೀಗ ಜನಜಾತ್ರೆ. ಜನಜಾತ್ರೆ ಸೇರಿದಾಗ ಅದನ್ನು ಕಂಭಮೇಳ ಅನ್ನುತ್ತಾರೆ. ಅದು ವಿಶೇಷಣ. ಆದರೆ ಇದು ನಿಜವಾಗಿಯೂ ಕುಂಭಮೇಳವೇ. ಆದರೆ ಅರ್ಧ ಕುಂಭಮೇಳ.
ತ್ರಿವೇಣಿ ಸಂಗಮವಾದ ಪ್ರಯಾಗದಲ್ಲಿ 45ದಿನಗಳ ಕಾಲ ಜರುಗುವ ಅರ್ಧ ಕುಂಭ ಮೇಳ ಜನವರಿ 3ರಂದು ಆರಂಭವಾಗಿದೆ. ಫೆಬ್ರುವರಿ 16ರಂದು ಮುಕ್ತಾಯವಾಗಲಿದೆ. ಗಂಗೆ, ಯಮುನೆ, ಗುಪ್ತಗಾಮಿನಿಯಾಗಿರುವ ಸರಸ್ವತೀ ನದಿಗಳ ಸಂಗಮ ಸ್ಥಳವಾದ ಪ್ರಯಾಗದಲ್ಲಿ ಕುಂಭಮೇಳ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಅರ್ಧ ಕುಂಭಮೇಳದಲ್ಲಿ ಸುಮಾರು 70 ಲಕ್ಷ ಭಕ್ತರು, ಕುತೂಹಲಿಗಳು ಸೇರುತ್ತಾರೆ. ನದಿಗಳ ಸಂಗಮ ಸ್ಥಾನ- ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದು, ಅವರು ನಂಬುವ ಪುಣ್ಯವಾಹಿನಿಯಲ್ಲಿ ಮಿಂದು ಪಾವನರಾಗುವುದು ಕುಂಭಮೇಳದ ವಿಶೇಷತೆ. ಅರ್ಧಕುಂಭಮೇಳದ ವಿಶೇಷತೆಯೂ ಇದುವೇ.
ಕುಂಭಮೇಳ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಆದರೆ 6 ವರ್ಷಗಳಿಗೊಮ್ಮೆ ಅರ್ಧಕುಂಭಮೇಳ ಜರುಗುತ್ತದೆ.ಸನಾತನ ಭಾರತೀಯ ಕ್ಯಾಲೆಂಡ್ ಲೆಕ್ಕಾಚಾರದಂತೆ ಪುಷ್ಯ, ಮಾಘ, ಪಾಲ್ಗುಣ ಮತ್ತು ಚೈತ್ರ ಮಾಸ(ಜನವರಿ-ಎಪ್ರಿಲ್‌ವರೆಗೆ)ಈ ಮೇಳ ನಡೆಯುತ್ತದೆ. ಉತ್ತರಾಯಣದ ಪರ್ವಕಾಲವಿದು.ಮಾಘಮಾಸದ ಚಳಿಬಿಸಿ, ವಸಂತಾಗಮನದ ವರ್ಣಪ್ರಪಂಚದೊಂದಿಗೆ ಜಾತ್ರೆಯ ಸಂಭ್ರಮ.
ಪ್ರಯಾಗದಲ್ಲಿ ನೀರುಕಲ್ಲಾಗುವ ಚಳಿ. ಅದರ ನಡುವೆ ನೀರಲ್ಲಿ ಮುಳುಗೆಳುವ ಭಕ್ತಾದಿಗಳು. ಅರ್ಧ ಕುಂಭಮೇಳ ಆರಂಭವಾಗುವ ಪುಷ್ಯಹುಣ್ಣಿಮೆ, ಮಕರ ಸಂಕ್ರಾಂತಿ, ಮೌನಿ ಅಮವಾಸ್ಯೆ,ವಸಂತ ಪಂಚಮಿ, ಮಾಘಪೂರ್ಣಿಮೆ,ಮಹಾಶಿವರಾತ್ರಿ ಮುಂತಾದ ಆರು ದಿನಗಳಿಗೆ ಇಲ್ಲಿ ವಿಶೇಷ ಮಹತ್ವವಿದೆ. ಈ ದಿನಗಳಲ್ಲಿ ತ್ರಿವೇಣಿ ಸಂಗಮದಲ್ಲಿ ಭಕ್ತಿ ಪೂರ್ವಕ ಮುಳುಗೆದ್ದರೆ ಪುಣ್ಯ ದ್ವಿಗುಣಗೊಳ್ಳುವುದು ಎಂಬುದು ನಂಬಿಕೆ.
ಕುಂಭಮೇಳ ಎಂದರೆ ಭಕ್ತಾದಿಗಳು, ಸಾಧು ಸಂತರ ಆವೇಶವಲ್ಲ. ಸರ್ಕಾರಕ್ಕೂ ಆದಾಯವಿದೆ. ಈ ಕಾರಣಕ್ಕೆ ಇಲ್ಲಿ ಹಣವನ್ನೂ ಹೂಡುತ್ತಿದೆ. ಉತ್ತರ ಪ್ರದೇಶ ಸರ್ಕಾರ ಅರ್ಧ ಕುಂಭ ಮೇಳಕ್ಕಾಗಿ 1.7 ಬಿಲಿಯನ್ ರೂ.ಗಳನ್ನು ಇದಕ್ಕಾಗಿ ವ್ಯಯಿಸುತ್ತಿದೆ.
ಯಾತ್ರಿಕರಿಗೆ ನದಿ ದಡದಲ್ಲಿ ಸೌಲಭ್ಯ ಒದಗಿಸುವುದು, ಇತರ ಪ್ರಾಥಮಿಕ ಸೌಕರ್ಯಗಳಿಗಾಗಿ ಈ ಮೊತ್ತ ವ್ಯಯವಾಗುತ್ತದೆ. ಅದೇನೆ ಇದ್ದರೂ ಕುಂಭಮೇಳ , ಅರ್ಧ ಕುಂಭಮೇಳ ವೀಕ್ಷಿಸುವುದಂತೂ ಬದುಕಿನ ಮಹತ್ವಾಕಾಂಕ್ಷೆ ಎಂಬುದರಲ್ಲಿ ಎರಡು ಮಾತಿಲ್ಲ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|