|
| ಭಟ್ಟಿ ವಿಕ್ರಮಾದಿತ್ಯ ಕಥೆಗಳು | |
ಭರತ ಖಂಡದ ಗಂಧಾರ ದೇಶದಲ್ಲಿ ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ವೇದ ನಾರಾಯಣ ಎಂಬ ಗ್ರಾಮವಿತ್ತು. ಅಲ್ಲಿ ವಿಷ್ಣು ಶರ್ಮ ಎಂಬ ಬ್ರಾಹ್ಮಣನಿಗೆ ವೇದನಾರಾಯಣ, ವೀರನಾರಾಯಣ, ಯಜ್ಞನಾರಾಯಣ ಹಾಗೂ ಚಂದ್ರ ಶರ್ಮ ಎಂಬ ನಾಲ್ವರು ಮಕ್ಕಳಿದ್ದರು.
ನಾಲ್ವರಲ್ಲಿ ಚಂದ್ರ ಶರ್ಮನು ವಿದ್ಯೆ ಇಲ್ಲದೆ ಅವಿವೇಕಿಯಾದರೆ ಉಳಿದವರು ವೇದ, ಪುರಾಣಗಳಲ್ಲಿ ಪಾರಂಗತರಾಗಿದ್ದರು. ಚಂದ್ರ ಶರ್ಮನನ್ನು ತಮ್ಮ ಕೆಲಸದಾಳಿನಂತೆ ನಡೆಯಿಸಿ ಕೊಳ್ಳುತ್ತಿದ್ದರು. ತಾನು ಅವಿದ್ಯಾವಂತನಾದುದರಿಂದ ಹೀಗಾಗಬೇಕಾಯಿತೆಂದು ಭಾವಿಸಿದ ಚಂದ್ರ ಶರ್ಮನು ಎಲ್ಲರನ್ನೂ ತೊರೆದು ಹೊರಟನು.
ಚಂದ್ರಶರ್ಮನು ನಡೆಯುತ್ತ ಬಹುದೂರ ತಲುಪಿದಾಗ ದಣಿದು ಪಕ್ಕದ ನದಿ ತಾರದಲ್ಲಿ ಬಳಲಿಕೆಯನ್ನು ಪರಿಹರಿಸಲು ವಟ ವೃಕ್ಷದ ನೆರಳಲ್ಲಿ ವಿಶ್ರಮಿಸಿದನು. ಆ ಆಲದ ಮರದ ಮೇಲೆ ಓರ್ವ ಬ್ರಹ್ಮ ರಾಕ್ಷಸ ವಾಸವಾಗಿದ್ದನು. ಮರದಡಿ ವಿಶ್ರಮಿಸುತ್ತಿದ್ದ ಚಂದ್ರ ಶರ್ಮನನ್ನು ಗಮನಿಸಿ ತಾನೋರ್ವ ವೃದ್ಧನ ರೂಪ ತಳೆದು ಅವನ ಮುಂದೆ ಪ್ರತ್ಯಕ್ಷನಾಗಿ, ಯುವಕನ ಪೂರ್ವಾಪರಗಳನ್ನು ವಿಚಾರಿಸಿದನು.
ಚಂದ್ರ ಶರ್ಮನು ವೃದ್ಧನಲ್ಲಿ ತನ್ನ ಅಳಲನ್ನು ತೋಡಿಕೊಂಡು ತನಗೆ ಪಂಡತನಾಗಬೇಕೆಂಬ ವಿಚಾರ ತಿಳಿಸಿದನು. ವೃದ್ಧರೂಪಿನ ಬ್ರಹ್ಮರಾಕ್ಷಸನು ತಾನೇ ವಿದ್ಯಾಭ್ಯಾಸ ಕಲಿಸುವದಾಗಿ ತಿಳಿಸಿ ತನ್ನ ವಾಸಸ್ಥಾನಕ್ಕೆ ಕರೆದೊಯ್ಯಿತು. ಅಲ್ಲಿ ತನ್ನ ನಿಜರೂಪದಲ್ಲೇ ಶರ್ಮನಿಗೆ ವಿದ್ಯಾಭ್ಯಾಸ ಭೋಧಿಸಿತು. ಚಂದ್ರ ಶರ್ಮನು ಸಕಲ ವಿದ್ಯಾ ಪಾರಂಗತನಾದನು.
ಒಂದು ದಿನ ಬ್ರಹ್ಮರಾಕ್ಷಸನು ಚಂದ್ರಶರ್ಮನಲ್ಲಿ ಮಗೂ ಚಂದ್ರ ಸರ್ಮಾ, ಈಗ ನಿನ್ನ ವಿದ್ಯಾಭ್ಯಾಸ ಪೂರ್ಣವಾಯಿತು. ನೀನಿನ್ನು ಸ್ವಂತ ಊರಿಗೆ ಮರಳಬಹುದು ಎಂದಿತು. ಭವಿಷ್ಯದಲ್ಲಿ ನೀನು ನಾಲ್ವರು ಪತ್ನಿಯರನ್ನು ಹೊಂದಿ, ಅವರಿಂದ ನಾಲ್ವರು ಕೀರ್ತಿ ಶಾಲಿ ಮಕ್ಕಳನ್ನು ಪಡೆಯುವಿ ಎಂದು ತಿಳಿಸಿತು.
ಚಂದ್ರ ಶರ್ಮನು ತನ್ನ ಊರನ್ನು ಮರೆತಿದ್ದನು. ಈ ಕಾರಣದಿಂದ ಎದುರಿಗೆ ಸಿಕ್ಕ ದಾರಿಯಲ್ಲೇ ಮುಂದುವರಿದನು. ಉಜ್ಜಯಿನಿಗೆ ತಲುಪಿದನು. ಅಲ್ಲಿನ ರಾಜನು ಕಾರಣಾಂತರಗಳಿಂದ ಈತನಿೆಗ ತನ್ನ ಮಗಳನ್ನು ವಿವಾಹಮಾಡಿಕೊಟ್ಟನು. ಆ ಬಳಿಕ ವಿವಿಧ ವಿಭಾಗಗಳಿಗೆ ಸೇರಿದ ಮೂವರು ತರುಣಇಯರನ್ನು ಶರ್ಮ ವಿವಾಹವಾದನು. ರಾಜನು ಅರ್ಧ ರಾಜ್ವನ್ನು ಈತನಿಗೆ ನೀಡಿದನ್ನು. ಇಂತಿರುತ್ತ ರಾಜ ಇಹಲೋಕ ತ್ಯಜಿಸಲು ಅಳಿಯನಾದ ಚಂದ್ರ ಶರ್ಮನೇ ಅರಸನಾದನು.
ನಾಲ್ವರು ಪತ್ನಿಯರಲ್ಲಿ ವರರುಚಿ, ವಿಕ್ರಮಾದಿತ್ಯ, ಭಟ್ಟಿ, ಭರ್ತೃಹರಿ ಎಂಬ ನಾಲ್ವರು ಪ್ರತಿಭಾವಂತ ಪುತ್ರರನ್ನು ಹೊಂದಿದನು. ಇವರೆಲ್ಲರೂ ವಿದ್ವಾಂಸರಾದರು. ಇವರಲ್ಲಿ ವಿಕ್ರಮಾದಿತ್ಯನಿಗೆ ಅರಸೊತ್ತಿಗೆಯನ್ನೂ ಭಟ್ಟಿಗೆ ಮಂತ್ರಿಗಿರಿಯನ್ನೂ ನೀಡಿ, ತಾನು ವೈರಾಗ್ಯವನ್ನು ತಾಳಿದನು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|