|
| ಸಾಂಸ್ಕೃತಿಕವಾಗಿ ಸಮೃದ್ಧವಾಗಿದ್ದ ಪ್ರಾಚೀನ ಭಾರತ | |
ಭಾರತ ಅನುಪಮ ಸಂಸ್ಕೃತಿ ಪರಂಪರೆಗಳ ಉಪಖಂಡ. ಭಾರತದಲ್ಲಿ ಆದ್ಯಾತ್ಮ ಸಾರ್ವತ್ರಿಕವಾಗಿ ಹರಡಿದೆ. ಇಲ್ಲಿನ ಬದುಕು ಆದ್ಯಾತ್ಮದೊಂದಿಗೆ ಹೆಣೆದುಕೊಂಡಿದೆ. ಜಗತ್ತಿಗೇ ಮಾದರಿಯಾದ ಜೀವನಾಂಶಗಳನ್ನು ಹೊಂದಿದೆ.
ಪ್ರಾಚೀನ ಭಾರತದ ಶೋಧನೆಯ ಜನ್ಮಭೂಮಿ. ಆರ್ಷಭಾರತವು ಭಗವಂತನ ಲೀಲಾ ವಿಲಾಸವನ್ನು ಹಮ್ಮಿಕೊಂಡಿರುವ ಪ್ರದೇಶ. ಆದ್ಯಾತ್ಮದೊಂದಿಗೆ ಭೌತಿಕದ ವಾಸ್ತವತೆಯನ್ನೂ ಇದು ಅರ್ಥೈಸಿಕೊಂಡಿದೆ. ಇಂದಿನ ವೈಜ್ಞಾನಿಕ ಬದುಕಿನ ಧಾವಂತದಲ್ಲೂ ಪ್ರಾಚೀನ ಭಾರತದ ಕೊಡುಗೆಗಳು ಗೌರವಿಸಲ್ಪಡುತ್ತವೆ.
ಜಗತ್ತೇ ಕುತೂಹಲದಿಂದ ನೋಡುವ, ಆಸಕ್ತಿಯಿಂದ ಅಭ್ಯಸಿಸುವಂತಹ ಸಾಹಿತ್ಯದ ಮಹಾ ಸಂಗ್ರಹವೇ ಇಲ್ಲಿದೆ. ಭಾರತದ ನೈಜ ಅಧ್ಯಯನ ಜ್ಞಾನೋದಯಕ್ಕೆ ಕಾರಣವಾಗುತ್ತದೆ. ಭಾರತದ ಪೌರಾಣಿಕ, ಐತಿಹಾಸಿಕ ದಾಖಲೆಗಳಲ್ಲಿ ಜಗತ್ತಿಗೆ ನೀತಿಯ ಸಂದೇಶವನ್ನು ನೀಡಿದ ಮಹನ್ ವ್ಯಕ್ತಿಗಳ ಬದುಕು ದಾಖಲೆ ಇಲ್ಲದಿದೆ.
ದಧೀಚಿ ಮಹರ್ಷಿಗಳ ತ್ಯಾಗ ಜೀವನ, ಮೋಕ್ಷಕ್ಕಿಂತ ನೊಂದವರ ದುಃಖ ನಿವಾರಣೆಯನ್ನೇ ಆಯ್ಕೆ ಮಾಡಿಕೊಂಡ ರಂತಿದೇವ, ಪಾತಿವ್ರತ್ಯ ದಾಂಪತ್ಯಪ್ರೀತಿಗಾಗಿ ಯಮನ ಮನವನ್ನೇ ಗೆದ್ದ ಸಾವಿತ್ರಿ, ಮಹಿಳೆಯ ಮಾನ ಪ್ರಾಣ ರಕ್ಷಣೆಗಾಗಿ ಪ್ರಾಣಾರ್ಪಣೆಗೈದ ಜಟಾಯು, ವೈಭೋಗವನ್ನು ಬದಿಗಿರಿಸಿ ಸೋದರ ಪ್ರೇಮಕ್ಕಾಗಿ ಬದುಕು ಸವೆಸಿದ ಲಕ್ಷ್ಮಣ ಮುಂತಾದವರ ಬದುಕು ಕಲಿಸುವ ಪಾಠ ವೈಶಿಷ್ಟ್ಯ ಪೂರ್ಣ.
ವೈದ್ಯಶಾಸ್ತ್ರದಲ್ಲಿ ಶಸ್ತ್ರಕ್ರಿಯೆಯ ಸಂಕೀರ್ಣತೆಯನ್ನು ವಿವರಿಸಿದ ಚರಕ, ಸುಶ್ರುತ ವಾಗ್ಭಟರಂತಹ ಶಾಸ್ತ್ರಿಗಳ ಜ್ಞಾನಹೂರಣ, ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಹೊಸ ಸಾಮ್ರಾಜ್ಯ ಕಟ್ಟಿದ ಚಾಣಕ್ಯ, ಬದುಕಿನ ಹಿಂದಿನ ತತ್ವ ವಿವರಿಸಿದ ಶ್ರೀ ಶಂಕರ ಭಗವತ್ಪಾದರು ಮುಂತಾದವರಿಂದ ಅಣುವಿನ ವರೆಗೂ ದೃಷ್ಟಿ ಹರಿಸಿದ ವಿಶೇಷತೆ ಕಂಡು ಬರುತ್ತದೆ.
ನಾಟ್ಯ ಶಾಸ್ತ್ರ ನೀಡಿದ ಭರತಮುನಿ, ಸಂಗೀತದ ಮತಂಗ, ಧ್ವನ್ಯಾಲೋಕದ ಆನಂದವರ್ಧನ, ಯೋಗದಪತಂಜಲಿ, ವೈಶೇಷಿಕದ ಗೌತಮ, ಸಾಂಖ್ಯದ ಕಪಿಲ, ಪುರಾಣಗಳ ವ್ಯಾಸ, ಕವಿಕುಲಗುರು ಕಾಳಿದಾಸ ತತ್ವಚಿಂತನೆ, ಕಲಾಪ್ರಕಾರಗಳಿಗೆ ನೀಡಿದ ಕೊಡುಗೆ ಇಂದೂ ಬಳಸಲ್ಪಡುತ್ತದೆ.
ದೇಶದಲ್ಲಿ ತಂತ್ರಮಂತ್ರಯಂತ್ರ, ಶಿಲ್ಪನೃತ್ಯಗೀತವಾದ್ಯ, ಕೃಷಿವೃಕ್ಷಾಯುರ್ವೇದ, ಅಶ್ವಹೃದಯ ಗಜಶಾಸ್ತ್ರ ಗೋವಿಜ್ಞಾನ, ವೇದ ದರ್ಶನ ಸಾಂಖ್ಯಯೋಗವೈಶೇಷಿಕ ಮೀಮಾಂಸವೇದಾಂತಗಳು, ಗದ್ಯಪದ್ಯಚಂಪೂ ಇತಿಹಾಸಪುರಾಣಗಳು, ಶಿಕ್ಷಾ ವ್ಯಾಕರಣ ಛಂದಸ್ಸುನಿರುಕ್ತ ಜ್ಯೋತಿಷ್ಯ, ಕತ್ಪದಂಡನೀನಿ, ವಾರ್ತಾಗೋರಕ್ಷ ವಾಣಿಜ್ಯ ಇತ್ಯಾದಿಗಳು ಪ್ರಾಚೀನ ಭಾರತೀಯರ ಕೊಡುಗೆ. ಇದು ಭಾರತದ ವೈಭವೋಪೇತ, ಸಾಂಸ್ಕೃತಿಕ ಸಮೃದ್ಧಿಯ ಇತಿಹಾಸ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|