|
| ಭಗವದ್ಗೀತೆ : ಲೌಕಿಕ-ಪಾರಲೌಕಿಕಗಳ ಕೊಂಡಿ | |
ಭಗವದ್ಗೀತೆಯನ್ನು ಸ್ವಯಂ ಭಗವಂತನೇ ಹೇಳಿದ ಶಾಸ್ತ್ರಗ್ರಂಥವಾಗಿ ಪರಿಭಾವಿಸಲಾಗಿದೆ. ಶ್ರೀಕೃಷ್ಣನು ಹೇಳಿದ ತತ್ವಾಂಶಗಳನ್ನು ವೇದವ್ಯಾಸರು ಛಂದೋಬದ್ಧವಾಗಿ ದಾಖಲಿಸಿದರು.
ಗೀತೆಯು ಹೊರ ನೋಟಕ್ಕೆ ದ್ವಾಪರಯುಗದ ರಾಜವಂಶವೊಂದರಲ್ಲಿ ನಡೆದ ಅಂತಃಕಲಹದ ಸಾರಾಂಶವೆಂದು ಭಾವಿಸುವವರಿದ್ದಾರೆ. ಆದರೆ ಅದರಲ್ಲಿ ಆಧ್ಯಾತ್ಮ ಮತ್ತು ಬದುಕಿನ ತಥ್ಯಾಂಶಗಳೇ ತುಂಬಿವೆ.
ಯುಗಾಂತರದಲ್ಲಿ ಗೀತೆಯ ವ್ಯಾಖ್ಯಾನ ನೀಡಲು ಅನೇಕ ಯೋಗಿಗಳು, ಸಂತರು , ವಿದ್ವಾಂಸರು ಪ್ರಯತ್ನಿಸಿದ್ದಾರಾದರೂ ಅದರೋಳಗಿನ ಯಾವುದೇ ರಹಸ್ಯಾರ್ಥವನ್ನರಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಪ್ರಯತ್ನಿಸಿದವರಿಗೆಲ್ಲಾ ಹೊಸ ಹೊಳಹು ನೀಡುತ್ತಲೇ ಬಂದಿದೆ. ಇದರೊಂದಿಗೆ ಅಜ್ಞಾನ- ಜ್ಞಾನಗಳ ನಡುವಿನ ಘರ್ಷಣೆ ಮುಂದುವರಿದಿದೆ.
ದೃತರಾಷ್ಟ್ರನು ಜನ್ಮತಃ ಅಂಧ. ಅವನ ಮಕ್ಕಳು ನೂರು ಮಂದಿ. ಕುರುಡನಿಗೆ ಯಾವಾತ್ತೂ ಕಣ್ಣ ಮುಂದೆ ಕತ್ತಲೆ ತುಂಬಿರುತ್ತದೆ. ತಾಮಸ ಗುಣದ ಪ್ರತೀಕ. ತಮಸ್ಸಿನ ಸಂತಾನವೇ ಕಾಮಕ್ರೋಧಾದಿಗಳಾದ ಅರಿಷಡ್ವೈರಿಗಳು. ಈ ಕಾರಣದಿಂದ ಇಂತಹ ಗುಣಗಳು ಕೌರವರಲ್ಲಿ ಕಾಣುವಂತಾಯಿತು.
ಪಾಂಡು ಎಂಬ ಶಬ್ದಕ್ಕೆ ಬಿಳಿ ಎಂದರ್ಥ. ಬಿಳಿ ಸಾತ್ವಿಕತೆಯ ಪ್ರತೀಕ ಈತನಿಗೆ ಐವರು ಮಕ್ಕಳು. ಇವರ ಮಕ್ಕಳೂ ಸಾತ್ವಿಕರು. ಪಂಚ ಪಾಂಡವರೆಂದರೆ ಅನುಕ್ರಮವಾಗಿ ಸತ್ಯಧರ್ಮ, ನಿಷ್ಠೆ, ಸಹನೆ, ಜ್ಞಾನ, ತ್ಯಾಗ ಮೊದಲಾದ ಗುಣಗಳ ಪ್ರತೀಕವಾಗಿರುತ್ತಾರೆ. ಅರ್ಜುನನು ಜೀವಾತ್ಮ, ಶ್ರೀಕೃಷ್ಣನು ಪರಮಾತ್ಮ. ಹೃದಯವೇ ಕುರುಕ್ಷೇತ್ರ. ಇವುಗಳಲ್ಲಿರುವ ಪಾಪಪುಣ್ಯಗಳ ಸಂಗ್ರಾಮವನ್ನೇ ಗೀತೆಯಲ್ಲಿ ವರ್ಣಿಸಲಾಗಿದೆ ಎಂಬ ವಿವರಣೆಗಳೂ ಇವೆ.
ಹೃದಯದಲ್ಲಿ ದೃಷ್ಟಗುಣವಿಲ್ಲದಿದ್ದರೆ ಮೋಕ್ಷಪ್ರಾಪ್ತಿಯಾಗುವುದು. ದೈವೀ ಕೃಪೆಯಿಂದ ಮಾತ್ರ ಇದು ಸಾಧ್ಯ. ಧರ್ಮ ನಿಷ್ಠರಿಗೆ ದುಃಖ ಕಷ್ಟಗಳೇ ಪ್ರಾರಂಭದಲ್ಲಿ ಎದುರಾದರೂ ಅಂತ್ಯದಲ್ಲಿ ಜಯವಾಗಿ ಧರ್ಮಸ್ಥಾಪನೆಯಾಗುವುದು. ಆದರೆ ದುಷ್ಟರಿಗೆ ಪ್ರಾರಂಭದಲ್ಲಿ ಸುಖ ಸಂಪದ ಹಿತಕರವಾಗಿ ಕಂಡರೂ ಅಂತ್ಯವು ವಿನಾಶಕರವಾಗಿರುತ್ತದೆ. ಪಾಂಡವರು ಮತ್ತು ಕೌರವರ ಕಥೆಗೆ ಇದು ಗೀತೆಯ ಸಾರ. ಇಂತಹ ಭಗವದ್ಗೀತೆ ಪವಿತ್ರಗ್ರಂಥವಾಗಿ ಪೂಜಿಸಲ್ಪಡುತ್ತಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|