ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಧರ್ಮ ಧಾರ್ಮಿಕ ಲೇಖನ
ಹಿಮಾಲಯದಲ್ಲಿ ಪೌರಾಣಿಕ ಮಹತ್ವದ ಪ್ರದೇಶಗಳು
- ವಿಷ್ಣು
ಸುಂದರ ನಿಸರ್ಗ ಸೌಂದರ್ಯ, ಪುರಾಣೋಕ್ತ ಪ್ರದೇಶಗಳ ವೀಕ್ಷಣೆಗಾಗಿ ಪ್ರವಾಸಿಗರು ಹಿಮಾಲಯದ ತಪ್ಪಲಿಗೆ ಬರುತ್ತಾರೆ. ವರ್ಷ ಪೂರ್ತಿ ಹಿಮವನ್ನೇ ಹೊದ್ದ ಬೆಳ್ಳನೆ ಬೆಟ್ಟಗಳು, ತಣ್ಣನೆಯ ಕಣಿವೆಗಳು. ಹಿಮಾಚಲದ ಮನಾಲಿ ಇಂತಹ ವಿವಿಧ ಪ್ರದೇಶಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ.

ಹಿಮಾಚಲ ಪ್ರದೇಶದ ಮನಾಲಿ-ಕೆಲಂಗ್‌ ರಾಜ ಮಾರ್ಗದಿಂದ 51ಕಿ.ಮೀ. ದೂರದಲ್ಲಿ 3,978 ಮೀಟರ್‌ ಎತ್ತರದ ರೋಹತಾಂಗ್‌ ಪ್ರದೇಶ ಇದೆ. ಇಲ್ಲಿ ಎಲ್ಲೆಲ್ಲೂ ಹಿಮಾಚ್ಛಾದಿತ ಪ್ರದೇಶಗಳೇ ತುಂಬಿವೆ. ಇಲ್ಲಿ ಹಸುರಿನ ದರ್ಶನವೇ ಇಲ್ಲ. ಇಲ್ಲಿ ಅಪರಾಹ್ನಗಳಲ್ಲಿ ಹಿಮದ ತೂಫಾನ್‌ ಬೀಸಿ ಜನರನ್ನು ಬಲಿ ತೆಗೆದುಕೊಳ್ಳುವುದೂ ಇದೆ.

ರೋಹತಾಂಗ್‌ನ ತಪ್ಪಲು ಪ್ರದೇಶ ರೋಹತಾಂಗ್‌ ಟಾಪ್‌. ಮನಾಲಿ- ಲೇಹ್‌ ಮಾರ್ಗದಲ್ಲಿ ಸಮುದ್ರ ಮಟ್ಟದಿಂದ 13,050 ಅಡಿ ಎತ್ತರದಲ್ಲಿ ರೋಹತಾಂಗ್ ಟಾಪ್‌ ಇದೆ. ಹಿಮಾಚಲದ ಕುಲು ಘಟ್ಟ ಪ್ರದೇಶದ ಪ್ರಖ್ಯಾತ ಪ್ರವಾಸಿ ಜಾಗ ಇದು. ಮನಾಲಿಯಿಂದ ಇದು 51 ಕಿ.ಮೀ. ದೂರದಲ್ಲಿದೆ.

ರೋಹತಾಂಗ್‌ ಟಾಪ್‌ನಲ್ಲಿ ವಿಪರೀತ ಹಿಮಗಾಳಿ . ಇದರಿಂದ ರಕ್ಷಣೆ ಪಡೆಯಲು ಹೊಸ ಪ್ರವಾಸಿಗರು ಪಲ್‌ಚಾನ್‌ ಎಂಬ ಚಿಕ್ಕ ಊರಲ್ಲಿ ಬಾಡಿಗೆಗೆ ಲಭಿಸುವ ಕೋಟುಗಳನ್ನು ಖರೀದಿಸಿ ಬೆಟ್ಟ ಏರಲಾಗುತ್ತದೆ. ಮರಳುವಾಗ ವಾಪಸ್‌ ನೀಡಬೇಕು. ರೋಹತಾಂಗ್‌ ಟಾಪ್‌ನ ಬಳಿಕದ ಪ್ರದೇಶವೇ ಸೋಲಾಂಗ್‌ ಕಣಿವೆ.

ಸೋಲಾಂಗ್‌ ಕಣಿವೆ ಪ್ರದೇಶದಲ್ಲೇ ಅರ್ಜುನ ಗುಹೆ ಇದೆ. ಕಣ್ವ ಋಷಿ ಮತ್ತು ಶಾಂಡಿಲ್ಯ ಋಷಿಯ ತಪೋಭೂಮಿಯೂ ಇದೆ. ಮನಾಲಿ-ಲೇಹ್‌ ಮಾರ್ಗದಲ್ಲಿ ಮುನಿ ವಸಿಷ್ಠರ ಆಶ್ರಮವಿದೆ. ಇಲ್ಲಿ ಗಂಧಕಯುಕ್ತ ಬಿಸಿ ನೀರಿನ ಬುಗ್ಗೆ ಇದೆ. ಅರ್ಜುನ ಪಾಶುಪತಾಸ್ತ್ರ ಪಡೆಯಲು ಇಂದ್ರನ ಕುರಿತ ತಪಸ್ಸು ಮಾಡಿದ 'ಇಂದ್ರಕಿಲ' ಕೂಡ ಇಲ್ಲೇ ಇದೆ. ವಸಿಷ್ಠ ಮತ್ತು ವ್ಯಾಸ ಋಷಿಗಳು ತಪಸ್ಸು ಮಾಡಿದ ಕ್ಷೇತ್ರ ವ್ಯಾಸ ಕುಂಡ ಇಲ್ಲಿದೆ. ಇಲ್ಲಿ ಎಲ್ಲೆಂದರಲ್ಲಿ ಪೈನ್‌ ವೃಕ್ಷಗಳು ಬೆಳೆದು ನಿಂತಿವೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದಶರಥನ ಪುತ್ರಶೋಕದ ಹಿನ್ನೆಲೆ
ಬಲಿ ಚಕ್ರವರ್ತಿ-ರಾವಣನ ಕತೆ
ರಾಮಾಯಣಕ್ಕೆ ನಾಂದಿ ಹಾಡಿದ ಘಟನೆ
ರಾವಣ ಕುಂಭಕರ್ಣ ಶೂರ್ಪನಖಿ ಜನನ
ಸಪ್ತಮುಕ್ತಿ ಕ್ಷೇತ್ರಗಳಲ್ಲೊಂದು ಕೊಲ್ಲೂರು ಮುಕಾಂಬಿಕಾ ಸನ್ನಿಧಿ
ರಾಮಾಯಣದ ಉಗಮ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace