ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಧರ್ಮ ಧಾರ್ಮಿಕ ಲೇಖನ
ಸಾವಿನ ಭಯ..
- ವಿಷ್ಣು
ಶ್ರೀರಾಮಕೃಷ್ಣ ಪರಮಹಂಸರ ದೇಹತ್ಯಾಗವಾದ ಕೆಲವು ದಿನಗಳು ಕಳೆದಿದ್ದವು. ಅವರ ಪತ್ನಿ ಶಾರದಾ ದೇವಿಯವರು ತಾವು ಹಾಕಿಕೊಂಡಿದ್ದ ಬಳೆಗಳನ್ನು ತೆಗೆಯಲು ಪ್ರಯತ್ನಿಸಿದಾಗ ಪರಮ ಹಂಸರು ಪ್ರತ್ಯಕ್ಷವಾಗಿ ' ಶಾರದೆ ಏನು ಮಾಡುತ್ತಿರುವೆ. ನಾನು ಸತ್ತಿಲ್ಲ. ನಾನು ಒಂದು ಕೊಠಡಿಯಿಂದ ಇನ್ನೊಂದು ಕೊಠಡಿಗೆ ಹೋಗಿದ್ದೇನೆ' ಎಂದರು.

ಮನುಷ್ಯರಿಗೆ ಭಯಗಳಲ್ಲಿ ಮೃತ್ಯುಭಯ ಬಹಳ ದೊಡ್ಡದು. ಇದು ಪ್ರತಿಯೊಬ್ಬರನ್ನೂಕಾಡುತ್ತದೆ. ' ಜಾತಸ್ಯ ಮರಣಂ ದ್ರುವಂ' ಅಂದರೆ ಹುಟ್ಟಿದವನು ಸಾಯಲೇಬೇಕು. ಸಾವು ಎಂದರೆ ಸೂರ್ಯದೇವ ಮುಳುಗಿದ ಹಾಗೆ. ಇಲ್ಲಿ ಸೂರ್ಯ ಮುಳುಗಿದ ಎಂಬ ಭಾವನೆ ಮೂಡಿಸಿದರೆ, ಇನ್ನೊಂದು ಕಡೆ ಮೂಡಿದ ಎಂಬ ಭಾವನೆ ಉಂಟುಮಾಡುತ್ತಾನೆ.
ಹೀಗೆ ಸಾವು ಎಂಬುದ ಒಂದು ಭ್ರಮೆ. ಏಕೆಂದರೆ ಇಲ್ಲಿ ಸತ್ತರೆ ಮತ್ತೆಲ್ಲೊ ನಾವು ಹುಟ್ಟಿರುತ್ತೇವೆ. ಈ ಜಗತ್ತು ಪ್ರವಾಸಿ ಮಂದಿರವಿದ್ದಂತೆ. ಪ್ರವಾಸಿಮಂದಿರದಲ್ಲಿ ಯಾರೂ ಸುದೀರ್ಘವಾಗಿ ವಾಸಿಸುವುದಿಲ್ಲ.

ಈ ಜೀವನ ಎಂಬುದು ಸಂತೆ ಇದ್ದಹಾಗೆ ಎಂದು ರಾಮಕೃಷ್ಣ ಪರಮಹಂಸರು ಹೇಳುತ್ತಿದ್ದರು. ಸಂತೆ ಬೆಳಗಿನಿಂದ ಸಂಜೆವರೆಗೆ ನಡೆದು ನಂತರ ಗಂಟುಮೂಟೆ ಕಟ್ಟಿಕೊಂಡು ಇನ್ನೊಂದು ಊರಿಗೆ ಹೋಗುವರು. ಸಾವು ಸಹ ಇದೇ ರೀತಿ. ಈ ಸಾವಿನ ಅನುಭವ ನಮಗೆ ದಿನನಿತ್ಯ ಆಗುವುದು. ನಾವು ನಿದ್ರೆಯಲ್ಲಿದ್ದಾಗ ಸಾವು. ಎಚ್ಚರವಾಗಿದ್ದಾಗ ಹುಟ್ಟು ಹಾವುಗಳು ತಮ್ಮ ಹಳೆಯ ಚರ್ಮವನ್ನು ಪೊರೆಯ ರೂಪದಲ್ಲಿ ಕಳಚಿಟ್ಟು ಹೊಸ ಚರ್ಮವನ್ನು ಧರಿಸುತ್ತವೆ.

ಆದರೆ ಹಾವು ಮಾತ್ರ ಅದೇ. ಚರ್ಮ ಮಾತ್ರ ಹೊಸದು. ಹುಟ್ಟೆಂಬುದು ನಾವು ಹೊಸ ಅಂಗಿಯನ್ನು ಧರಿಸಿದಂತೆ. ಸಾವೆಂಬುದು ಹಳೆಯ ಅಂಗಿಯನ್ನು ಬಿಚ್ಚಿಟ್ಟಂತೆ. ಈ ಶರೀರ ಒಂದು ಪಂಜರ. ಇದಕ್ಕೆ 9 ದ್ವಾರಗಳಿವೆ. ಅವು ಯಾವುವು ಎಂದರೆ ಕಣ್ಣು,ಕಿವಿಗಳು, ಮೂಗಿನ ಹೊಳ್ಳೆಗಳು, ಒಂದು ಬಾಯಿ, ಒಂದು ಮೂತ್ರದ್ವಾರ, ಒಂದು ಮಲದ್ವಾರ ಮತ್ತು ಚರ್ಮದ ದ್ವಾರಗಳು. ಇವು ಯಾವಾಗಲೂ ತೆರೆದಿರುತ್ತವೆ.

ಇವುಗಳ ಒಳಗೆ ಪ್ರಾಣ ಪಕ್ಷಿ ಇರುವುದು. ಇದು ಆತ್ಮವಾಗಿದೆ. ಈ ಪಂಜರ ಮುರಿದು ಬಿದ್ದಾಗ ಈ ಜೀವಾತ್ಮವು 9 ರಂಧ್ರಗಳ ಮೂಲಕ ಹೊರಬಂದು ಪರಮಾತ್ಮನಲ್ಲಿ ಲೀನವಾಗುತ್ತದೆ. ಆ ಆತ್ಮಕ್ಕೆ ಹುಟ್ಟು ಸಾವುಗಳಿಲ್ಲ. ಈ ದೇಹಕ್ಕೆ ಮಾತ್ರ ಹುಟ್ಟು ಸಾವುಗಳು. ಈ ದೇಹವೇ ನಾನು ಎಂಬುದು ಮಾತ್ರ ಸುಳ್ಳು. ಏಕೆಂದರೆ ಈ ದೇಹ ಸತ್ತಾಗ ನಾನು ಎಂಬುದು ಸಾಯುವುದಿಲ್ಲ. ರಮಣ ಮಹರ್ಷಿಗಳು ಹೇಳುವ ಹಾಗೆ ಈ ನಾನು ಎಂಬುದನ್ನು ಹುಡುಕಲು ಹೋದಾಗ ಕೊನೆಗೆ ಸಿಗುವುದು ಈ ನಾನು ಎಂಬುದೇ ಆತ್ಮವಾಗಿದೆ ಎಂದು.

ಈ ನಮ್ಮ ಶರೀರಕ್ಕೆ ಹೇಗೆ ಬಾಲ್ಯ, ಯೌವನ ಮತ್ತು ವೃದ್ದಾಪ್ಯ ಇರುವುದೋ ಹಾಗೆ ಮೃತ್ಯುವೂ ಒಂದು ಸಹಜ ಪ್ರಕ್ರಿಯೆ. ನಾವು ಸರಿಯಾಗಿ ಚಿಂತನ-ಮಂಥನ ಮಾಡಿದಾಗ ಈ ಸಾವಿಗೇಕೆ ಇಷ್ಟೊಂದು ಭಯ ಪಡಬೇಕು ಎನಿಸುವುದರಲ್ಲಿ ಆಶ್ಚರ್ಯವಿಲ್ಲ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಅಪ್ಸರೆಯರ ಪಾಪ ವಿಮೋಚನೆ
ಬೇಡನೋರ್ವ ವಾಲ್ಮೀಕಿಯಾದ ಕಥೆ
ಮಹಾಕಾವ್ಯ ರಾಮಾಯಣ
ವೇದಗಳನ್ನು ರಕ್ಷಿಸಿದ ಮತ್ಸ್ಯಾವತಾರ
ಕಾರ್ತಿಕಮಾಸದಲ್ಲಿ ದೀಪೋತ್ಸವ
ಶ್ರೀರಾಮನ ಜನನದ ಹಿನ್ನೆಲೆ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace