|
| ಅಪ್ಸರೆಯರ ಪಾಪ ವಿಮೋಚನೆ | |
ಧರ್ಮರಾಜ ದ್ರೌಪತಿಯೊಡನೆ ಏಕಾಂತದಲ್ಲಿರುವುದನ್ನು ನೋಡಿದ ಅರ್ಜುನ ಪಾಪ ಪರಿಹಾರಕ್ಕಾಗಿ 12 ನರ್ಷ ಕಾಲ ತೀರ್ಥಯಾತ್ರೆ ಹೊರಟ. ದಕ್ಷಿಣ ಸಮುದ್ರದ ತೀರದ ಪ್ರದೇಶಗಳಲ್ಲಿದ್ದ ಪುಣ್ಯಕ್ಷೇತ್ರಗಳಿಗೆ ಭೇಟಿಯಿತ್ತಾಗ ಅಲ್ಲಿಯ ಐದು ಸರೋವರಗಳನ್ನು ಯಾರೂ ಬಳಸದೇ ಇರುವುದು ಇವನ ಗಮನಕ್ಕೆ ಬಂತು.
ಈ ಸರೋವರಗಳಲ್ಲೇಕೆ ಯಾರೂ ಸ್ನಾನ ಮಾಡುವುದಿಲ್ಲ ಎಂದು ಅರ್ಜುನ ಅಲ್ಲಿದ್ದ ಋಷಿಗಳನ್ನು ಕೇಳಿದ. ಆ ಎಲ್ಲಾ ಸರೋವರಗಳಲ್ಲೂ ಒಂದು ಬಲಿಷ್ಠ ಮೊಸಳೆ ಇದ್ದು ಯಾರು ನೀರಿಗಿಳಿದರೂ ಅವರನ್ನು ಅದು ಸೆಳೆದು ತಿಂದುಹಾಕುತ್ತದೆ ಎಂದು ತಿಳಿಸಿದರು. ಆಗ ಅರ್ಜನನು ಒಂದು ಸರೋವರಕ್ಕೆ ದುಮುಕಿದನು. ಕೂಡಲೇ ಬೃಹದಾಕಾರದ ಮೊಸಳೆಯೊಂದು ಅವನ ಕಾಲುಗಳನ್ನು ಹಿಡಿದೆಳೆಯಿತು.
ಪರಾಕ್ರಮಿಯಾದ ಅರ್ಜುನ ಅದರ ದವಡೆಗಳನ್ನು ಅಗಲಿಸಿ ತನ್ನ ಕಾಲುಗಳನ್ನು ಬಿಡಿಸಿಕೊಂಡು ಅದನ್ನು ಎಳೆತಂದು ದಡದ ಮೇಲೆ ಹಾಕಿದನು. ಮರುಕ್ಷಣವೇ ಆ ಮೊಸಳೆ ಮಾಯವಾಗಿ ಅದರ ಜಾಗದಲ್ಲಿ ಒಬ್ಬ ಸುಂದರ ತರುಣಿ ನಿಂತಿದ್ದಳು. ಅವಳು ಅರ್ಜುನನಿಗೆ ಹೇಳಿದಳು. ನಾನು ವರ್ಗಾ ಎಂಬ ಹೆಸರಿನ ಅಪ್ಸರೆ. ನನಗೆ ನಾಲ್ವರು ಸಖಿಯರಿದ್ದಾರೆ.ಅವರೂ ಮೊಸಳೆಗಳ ರೂಪದಲ್ಲಿ ಆ ನಾಲ್ಕು ಸರೋವರಗಳಲ್ಲಿದ್ದಾರೆ. ನಾವು ಐವರು ಕುಬೇರನ ಅರಮನೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಒಬ್ಬ ಸುಂದರನೂ, ತೇಜಸ್ವಿಯೂ ಆದ ಬ್ರಹ್ಮಜ್ಞಾನಿಯು ತಪಸ್ಸು ಮಾಡುತ್ತಿದ್ದುದನ್ನು ಕಂಡೆವು.
ರೂಪ, ಯೌವನಗಳಿಂದ ಗರ್ವಿತರಾಗಿದ್ದ ನಾವು ಹಾಡಿ, ಕುಣಿದು ಅವನ ತಪಸ್ಸನ್ನು ಕೆಡಿಸಲು ಯತ್ನಿಸಿದೆವು. ಆದರೆ ಆ ತಪಸ್ವಿಯು ಧ್ಯಾನದಿಂದ ವಿಚಲಿತನಾಗಲಿಲ್ಲ. ಧ್ಯಾನ ಮುಗಿದ ಬಳಿಕ ಅವನು ನೀವೆಲ್ಲರೂ ನೂರು ವರ್ಷಗಳ ಕಾಲ ಮೊಸಳೆಯಾಗಿ, ನೀರಲ್ಲಿ ಬಾಳಿ ಎಂದು ಶಪಿಸಿಬಿಟ್ಟನು. ಆಗ ನಮಗೆ ಪಶ್ಚಾತ್ತಾಪವಾಗಿ ಕ್ಷಮೆ ಯಾಚಿಸಿದೆವು. ಅದಕ್ಕವನು ನೂರು ವರ್ಷಗಳ ಕಾಲ ಖಂಡಿತವಾಗಿಯೂ ನೀವು ಮೊಸಳೆಗಳಾಗಿ ಹುಟ್ಟಿ ನೀರಿಗಿಳಿದವರನ್ನು ಹಿಡಿದು ತಿನ್ನುತ್ತಿರುವಿರಿ. ಆ ಕಾಲ ಮುಗಿದ ಬಳಿಕ ಮಹಾನುಭಾವ ನೊಬ್ಬನು ನಿಮ್ಮನ್ನು ನೀರಿನಿಂದ ಹೊರಗೆಳೆಯುವನು.
ಆಗ ನಿಮ್ಮ ಪಾಪ ವಿಮೋಚನೆಯಾಗುವುದು.ನೀವು ವಾಸಿಸುವ ಸರೋವರಗಳು ನಾರಿ ತೀರ್ಥ ಎಂಬ ಹೆಸರಿನಿಂದ ಪ್ರಸಿದ್ಧವಾಗಿ ಅವುಗಳಲ್ಲಿ ಸ್ನಾನ ಮಾಡಿದವರನ್ನು ಪಾವನಗೊಳಿಸುವವು ಎಂದು ಹೇಳಿದನು. ಅನಂತರ ನಾವು ಬಹು ದುಃಖದಿಂದ ಯಾವ ಸರೋವರಕ್ಕೆ ಹೋಗುವುದು ಎಂದು ಬರುತ್ತಿದ್ದಾಗ ನಾರದ ಮಹರ್ಷಿಗಳು ಎದುರಾದರು. ಆಗ ಅವರು ನಮಗೆ ಈ ಸರೋವರಗಳನ್ನು ತೋರಿಸಿದರಲ್ಲದೆ ನೂರು ವರ್ಷಗಳ ನಂತರ ನೀನು ಬಂದು ನಮ್ಮನ್ನು ಶಾಪವಿಮುಕ್ತರನ್ನಾಗಿಸುವೆಯೆಂದು ಹೇಳಿದರು.
ಅಂದಿನಿಂದ ನಾವು ಮೊಸಳೆಗಳಾಗಿರುವೆವು. ನಿನ್ನಿಂದ ಬಹಳ ಉಪಕಾರವಾಯಿತು. ಸೌರಭೇಯಿ, ಲತಾ, ಸಮೀಚಿ, ಬುದ್ಬುದಾ ಎಂಬ ಆ ನನ್ನ ನಾಲ್ವರು ಸಖಿಯರನ್ನೂ ಹೀಗೆಯೇ ಬಿಡುಗಡೆಗೊಳಿಸು ಎಂದು ಅವಳು ವಿನಂತಿಸಿದಳು. ಅವಳೆಂದಂತೆ ಅರ್ಜುನ ಆ ಸರೋವರಗಳಲ್ಲಿ ಮೊಸಳೆಗಳ ರೂಪದಲ್ಲಿದ್ದ ಇತರ ನಾಲ್ಕು ಮಂದಿ ಸಖಿಯರನ್ನು ನೀರಿನಿಂದ ಮೇಲೆ ತಂದು ಹಾಕಿದನು. ಕೂಡಲೇ ಅವರ ಶಾಪ ವಿಮೋಚನೆಯಾಯಿತು. ಐವರು ಅಪ್ಸರೆಯರೂ ಅರ್ಜುನನಿಗೆ ವಂದಿಸಿ, ತಮ್ಮ ಲೋಕಕ್ಕೆ ಹೋದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|