|
| ಬೇಡನೋರ್ವ ವಾಲ್ಮೀಕಿಯಾದ ಕಥೆ | |
ಒಬ್ಬ ಬೇಡನು ಜನರನ್ನು ಪೀಡಿಸಿ ಅವರಿಂದ ಸಿಕ್ಕ ವಸ್ತುಗಳನ್ನು ಉಪಯೋಗಿಸಿ ತನ್ನ ಜೀವನವನ್ನು ನಿರ್ವಹಿಸುತ್ತಿದ್ದನು. ತಪಸ್ವಿಯೋಬ್ಬರು ಆ ದಾರಿಯಾಗಿ ಹೋಗುವಾಗ ಅವರನ್ನು ಬೇಡನು ತಡೆದು ನಿಲ್ಲಿಸಿ ಹಣ ಸಂಪತ್ತುಗಳಿಗಾಗಿ ಪೀಡಿಸಿದನು. ಇಂತಹ ಜನ ಪೀಡೆಯಿಂದ ಪಾಪಬರುವುದೆಂದು ಆತನಿಗೆ ತಿಳಿಸಿದ ಅವರು, ಪಾಪವನ್ನು ನಿನ್ನ ಹೆಂಡತಿ ಮಕ್ಕಳೂ ಹಂಚಿ ಕೊಳ್ಳುವುದಿಲ್ಲ ಎಂದರು.
ಋಷಿಯ ಮಾತನ್ನು ಪರೀಕ್ಷಿಸಲು ಮನೆಗೆ ಮರಳಿದ ಬೇಡನು ಹೆಂಡತಿ ಮಕ್ಕಳಲ್ಲಿ ಜನಪೀಡನೆಯಿಂದ ತನಗೆ ಬರುವ ಪಾಪ ಹಂಚಿಕೊಳ್ಳುವಿರಾ ಎಂದು ವಿಚಾರಿಸಿದನು. ಆದರೆ ಅವರು ಆದಾಯದಲ್ಲಷ್ಟೆ ನಾವು ಭಾಗಿಗಳು ಪಾಪದಲ್ಲಲ್ಲ ಎಂದು ಉತ್ತರಿಸಿದರು. ಇದು ಬೇಡನಲ್ಲಿ ಮಾನಸಿಕ ಬದಲಾವಣೆಗೆ ಕಾರಣವಾಯಿತು. ಆತ ಕಾಡಿಗೆ ವಾಪಸಾಗಿ ತಪಸ್ವಿಗಳ ಹಿತವಚನ ಪಡೆದನು. ಅವರು ರಾಮಮಂತ್ರವನ್ನು ಬೋಧಿಸಿದರು. ಇದರಿಂದ ಯಶಸ್ಸು ದೊರೆಯಲೆಂದು ಹಾರೈಸಿದರು.
ರಾಮ ಎನ್ನಲು ನಾಲಗೆ ಸರಿಯ ಬೇಡನು ಮರಾ ಎನ್ನುತ್ತಾ ಸ್ಮರಣೆ ಆರಂಬಿಸಿದ , ಒಂದು ಹಂತದಲ್ಲಿ ಏಕಾಗ್ರತೆ ದೊರೆತು ತಪಸ್ಸು ಆರಂಭಿಸಿದನು. ಕಾಲ ಕಳೆಯುತ್ತಿದ್ದಂತೆ ನಿಶ್ಚಲನಾಗಿ ಕುಳಿತ ಅವನ ಸುತ್ತ ಹುತ್ತ ಬೆಳೆಯಿತು. ಆ ದಾರಿಯಾಗಿ ಬಂದ ನಾರದ ಮಹರ್ಷಿಗಳು ಹುತ್ತದೊಳಗಿಂದ ರಾಮ ಮಂತ್ರ ಕೇಳಿ ಬೇಡನನ್ನು ಎಚ್ಚರಿಸಿದನು. ಹುತ್ತ(ವಲ್ಮೀಕ)ದೊಳಗಿದ್ದು ಜ್ಞಾನೋದಯ ಪಡೆದ ಕಾರಣ ಬೇಡನಿಗೆ ವಾಲ್ಮೀಕಿ ಎಂದು ಕರೆದರು. ಶ್ರೀರಾಮ ಚರಿತೆಯನ್ನು ವಾಲ್ಮೀಕಿಗೆ ತಿಳಿಸಿದರು.
ವಾಲ್ಮೀಕಿ ಮಹರ್ಷಿಗಳು ತಮಸಾ ನದಿಯ ತೀರದಲ್ಲಿ ಆಶ್ರಮ ಕಟ್ಟಿ ನೆಲೆಸಿದ್ದರು. ವಾಲ್ಮೀಕಿಯಿಂದ ದಾಖಲಾಗಿರುವ ರಾಮಕಥೆಯು ರಾಮಾಯಣವಾಗಿ ಅಯೋಧ್ಯೆ, ಲಂಕೆ, ಕಿಷ್ಕಿಂದೆ ಮುಂತಾದ ಪ್ರದೇಶಗಳ ಮಾಹಿತಿ ನೀಡುತ್ತದೆ. ಮಾನವ ದಾನವ ಕಪಿಗಳ ಸಂಸ್ಕೃತಿಯನ್ನು ತಿಳಿಸುತ್ತವೆ. ಜಗತ್ತಿನಲ್ಲಿ ಗ್ರೀಕ್, ರೋಮನ್ ಮುಂತಾದ ಸಂಸ್ಕೃತಿಗಳು ಇಂದು ನಾಶವಾಗಿವೆ. ಆದರೆ ಕಾವ್ಯಗಳಲ್ಲಿ ಅವುಗಳು ನೆಲೆ ನಿಂತಿವೆ.
ರಾಮಾಯಣದಂತಹ ಪ್ರಾಚೀನ ಮಹಾ ಕಾವ್ಯಗಳು ಇಂದಿಗೀ ಜನಮಾನಸದಲ್ಲಿ ನೆಲೆನಿಂತಿವೆ. ಆದರ್ಶಗ್ರಂಥಗಳು ಆದರ್ಶ ಜೀವನಕ್ಕೆ ಕಾರಣವಾಗುತ್ತದೆ. ದಾಶದ ಜನರು ಇಂದೂ ರಾಮಾದಿಗಳಂತೆ ನಡೆಯಬೇಕು, ರಾವಣರಾಗಬಾರದು ಎಂಬ ನೀತಿ ಪಾಠ ಹೊಂದುತ್ತಾರೆ. ಹಿಂದಿನ ಯುಗದ ಘಟನೆಗಳು ಮುಂದಿನ ಯುಗಕ್ಕೆ ಮಾರ್ಗದರ್ಷಕಗಳಾಗಿ ಮುಂದುವರಿಯುತ್ತವೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|