|
| ಕಮರಿದ ಪಂಜಾಬ್ ಸೆಮಿಫೈನಲ್ ಕನಸು: ಚನ್ನೈಗೆ ಗೆಲುವು |
| ಡರ್ಬನ್, ಗುರುವಾರ, 21 ಮೇ 2009 ( 10:12 IST ) | |
ಪಂಜಾಬ್ ಕಿಂಗ್ಸ್ ಇಲೆವೆನ್‌ಗೆ ಸೆಂಚುರಿಯನ್‌ಗೆ ಟಿಕೆಟ್ ಬುಕ್ ಮಾಡಲು ಅಗತ್ಯವಾಗಿ ಬೇಕಾಗಿದ್ದು 117 ರನ್ ಮಾತ್ರ. ಆದರೆ ಪಂಜಾಬ್ ಕೇವಲ 92 ರನ್‌ಗಳನ್ನು ಮಾತ್ರ ಗಳಿಸಿ ಚೆನ್ನೈ ಸೂಪರ್ ಕಿಂಗ್ಸ್‌ಗೆ 24 ರನ್ ಗೆಲುವನ್ನು ಧಾರೆಯೆರೆದು ಕೊಟ್ಟಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ಆರಂಭದಲ್ಲೆ ಕಳಪೆ ಆಟ ಪ್ರದರ್ಶಿಸಿ ಓಪನರ್‌ಗಳಾದ ಸನ್ನಿ ಸೊಹಾಲ್ ಮತ್ತು ಸೈಮನ್ ಕ್ಯಾಟಿಚ್ ಕ್ರಮವಾಗಿ 3 ಮತ್ತು 8 ರನ್ ಬಾರಿಸಿದರು.
ಕಾಟಿಚ್ ಮುರಳೀಧರನ್‌ಗೆ ಕ್ಲೀನ್ ಬೌಲ್ಡ್ ಆದರು ಮತ್ತು ಸೊಹಾಲಾ ಔಟ್‌ಗೆ ತುಶಾರಾ ಕಾರಣರಾದರು.ಇದಾದ ಬಳಿಕ ಪಂಜಾಬ್ ಚೇತರಿಸಿಕೊಳ್ಳಲೇ ಇಲ್ಲ. ವಿಕೆಟ್‌ಗಳು ಒಂದರ ಬೆನ್ನಹಿಂದೆ ಇನ್ನೊಂದು ಉರುಳಿದವು. ಆಧುನಿಕ ಕ್ರಿಕೆಟ್‌ನ ಚತುರಮತಿಗಳಾದ ಕೋಚ್ ಫ್ಲೆಮಿಂಗ್ ಮತ್ತು ನಾಯಕ ಧೋನಿ ತಮ್ಮ ಸಂಪನ್ಮೂಲ ಸರಿಯಾಗಿ ಬಳಸಿಕೊಂಡರು. ವಿಶೇಷವಾಗಿ ಮುರಳೀಧರನ್ ಮತ್ತು ಅಶ್ವಿನ್ ಪಂಜಾಬ್‌ಗೆ ಉಸಿರಾಡಲೂ ಅವಕಾಶ ನೀಡಲಿಲ್ಲ.
ಡರ್ಬನ್‌ನಲ್ಲಿ ಎರಡೂ ಕಡೆಯಿಂದ ಸ್ಪಿನ್ನರ್‌ಗಳು ದಾಳಿ ಮಾಡುತ್ತಾ, ವೇಗಿಗಳು ಪೂರ್ಣ ಕೋಟಾ ಬಳಸದೇ ಇದ್ದಿದ್ದು ಅಪರೂಪದ ವಿದ್ಯಮಾನವಾಗಿತ್ತು. ಆದರೆ ಧೋನಿ ನಾಯಕತ್ವದಲ್ಲಿ ನಿರಾಶೆ ಉಂಟುಮಾಡದೇ, ಮೂವರು ಸ್ಪಿನ್ನರ್‌ಗಳಾದ ಮುರಳಿ, ಅಶ್ವಿನ್ ಮತ್ತು ರೈನಾ 6 ವಿಕೆಟ್ ಹಂಚಿಕೊಂಡರು ಮತ್ತು ಸ್ಪಿನ್ನರ್‌ಗಳ ಸಾಧನೆಯಿಂದ ಚೆನ್ನೈ ಪರವಾಗಿ ಪಂದ್ಯ ಒಲಿಯಿತು.
ಪಂದ್ಯದ ಪ್ರಥಮಾರ್ಧದಲ್ಲಿ ಪಂಜಾಬ್ ಚೆನ್ನೈ ತಂಡವನ್ನು ಕೇವಲ 116 ರನ್‌ಗೆ ಆಲ್‌ಔಟ್ ಮಾಡುವ ಮೂಲಕ ಪಂಜಾಬ್ ಪಾಳೆಯದಲ್ಲಿ ಗೆಲುವಿನ ಭರವಸೆ ಮೂಡಿತ್ತು. ಕೇರಳ ಎಕ್ಸ್‌ಪ್ರೆಸ್ ಶ್ರೀಶಾಂತ್ ಚೆನ್ನೈ ನಾಯಕ ಧೋನಿಯನ್ನು ಬೌಲ್ಡ್ ಮಾಡಿದಾಗ ಪಂಜಾಬ್ ಪರವಾಗಿ ಪಂದ್ಯ ವಾಲಿತ್ತು.ಟಾಸ್ ಗೆದ್ದಿದ್ದ ಧೋನಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಓಪನರ್‌ಗಳಾದ ಪಾರ್ಥಿವ್ ಪಟೇಲ್ ಮತ್ತು ಬೈಲಿ ಉತ್ತಮ ಆರಂಭ ಹಾಕಿಕೊಟ್ಟರೂ, ಯುವರಾಜ್ ಅದ್ಭುತ ಎಸೆತದಿಂದ ಬೈಲಿ ರನ್‌ಔಟ್ ಆದರು.
ಯುವರಾಜ್ ಸಿಂಗ್ ಸ್ಪಿನ್ ದಾಳಿಗೆ ಒಲವು ತೋರಿದ್ದು ಫಲಪ್ರದವಾಯಿತು. ರೊಮೇಶ್ ಪವಾರ್ ಪಟೇಲ್ ಅವರನ್ನು 32 ರನ್‌ಗಳಿಗೆ ಔಟ್ ಮಾಡಿದರು. ಸುರೇಶ್ ರೈನಾ ಪಂಜಾಬ್ ತಂಡಕ್ಕೆ ದೊಡ್ಡ ತಲೆನೋವಾಗಿದ್ದರು. ಅವರು ಕೆಲವು ಮೈನವಿರೇಳಿಸುವ ಹೊಡೆತಗಳನ್ನು ಬಾರಿಸಿ 20 ರನ್‌ಗೆ ಔಟಾದರು.ಬಳಿಕ ಚೆನ್ನೈ ಬ್ಯಾಟಿಂಗ್ ಬಲವೇ ಕುಗ್ಗಿ, ಅಶ್ವಿನ್, ಗೋನಿ, ಓರಮ್ ಮತ್ತು ತುಶಾರಾ ಬಹುಬೇಗನೇ ಔಟಾದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು |
| |
|
|
|
|
|
|