|
| ಕೋಲ್ಕತ್ತಾಗೆ ಮಣಿದ ರಾಜಸ್ತಾನ ಸೆಮಿಫೈನಲ್ ಕನಸು ಭಗ್ನ |
| ಡರ್ಬನ್, ಗುರುವಾರ, 21 ಮೇ 2009 ( 09:50 IST ) | |
ಹಾಲಿ ಚಾಂಪಿಯನ್ ರಾಜಸ್ತಾನ ರಾಯಲ್ಸ್ ಐಪಿಎಲ್ ದ್ವಿತೀಯ ಆವೃತ್ತಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಕನಸನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಭಗ್ನಗೊಳಿಸಿದೆ.ಶೇನ್ ವಾರ್ನೆ ಪಡೆ ಗೆಲ್ಲಲೇ ಬೇಕಾಗಿದ್ದ ಕೊನೆಯ ಪಂದ್ಯವನ್ನು ಬ್ರೆಂಡನ್ ಮೆಕಲಮ್ ಪಾಳಯ ರೋಚಕವಾಗಿ ಪರಾಜಯಗೊಳಿಸುವ ಮೂಲಕ ಇತ್ತಂಡಗಳೂ ಐಪಿಎಲ್‌ನಿಂದ ಹೊರಬಿದ್ದಿವೆ.
ಇಲ್ಲಿ ಎರಡೂ ತಂಡಗಳಿಗಾದ ನಿರಾಸೆಯಲ್ಲೂ ಹುಡುಕಬಹುದಾದ ವ್ಯತ್ಯಾಸವೆಂದರೆ ರಾಜಸ್ತಾನ ಕೊನೆಯವರೆಗೂ ಉಳಿಸಿಕೊಂಡಿದ್ದ ಸೆಮಿ ಆಸೆ ನೀರುಪಾಲಾದದ್ದು ಮತ್ತು ಕೊಲ್ಕತ್ತಾ ತಾನೇನೂ ಗಳಿಸಲು ಉಳಿದಿಲ್ಲ ಎಂಬಂತಿದ್ದರೂ ಕೊನೆಯ ಎರಡು ಪಂದ್ಯಗಳನ್ನು ಸತತವಾಗಿ ಗೆದ್ದುಕೊಂಡು ಗೌರವ ಉಳಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ತಾನವು ಕೊಲ್ಕತ್ತಾದ ಬಿರುಸಿನ ಬೌಲಿಂಗ್‌ನಲ್ಲಿ ನಲುಗಿ ಹೋಗಿತ್ತು. ಹಾಗೂ ಹೀಗೂ ತೆವಳುತ್ತಾ 20 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತ್ತು.
ಇಲ್ಲಿ ಎರಡಂಕಿ ತಲುಪಿದವರು ಕೇವಲ ನಾಲ್ಕು ಮಂದಿ ಮಾತ್ರ. ಅದೂ ಗರಿಷ್ಠ ಮೊತ್ತ ನಾಮನ್ ಓಜಾರದ್ದು. ಅವರು 12 ಎಸೆತಗಳಿಂದ 22 ರನ್ ದಾಖಲಿಸಿದ್ದರು. ನೀರಜ್ ಪಟೇಲ್ 14, ರವೀಂದ್ರ ಜಡೇಜಾ 14 ಮತ್ತು ಶೇನ್ ವಾರ್ನೆ 18 ರನ್ನು ಗಳಿಸಿದ್ದರು.
ಉಳಿದವರ ಸಾಧನೆ ಎರಡಂಕಿ ತಲುಪಲೇ ಇಲ್ಲ. ರಾಬ್ ಕ್ವೈನಿ 1, ಸ್ವಪ್ನಿಲ್ ಅಸ್ನೋಡ್ಕರ್ 4, ಜೋಹಾನ್ ಬೋಥಾ 8, ಯೂಸುಫ್ ಪಠಾಣ್ 9, ಟೈರಾನ್ ಹೆಂಡರ್ಸನ್ 0, ಮುನಾಫ್ ಪಟೇಲ್ 5* ಮತ್ತು ಅಮಿತ್ ಸಿಂಗ್ 1*ಕ್ಕೆ ಸೀಮಿತರಾದರು.
ಕೇವಲ 10 ಓವರುಗಳಲ್ಲಿ ರಾಜಸ್ತಾನ 5 ವಿಕೆಟ್ ಕಳೆದುಕೊಂಡಿತ್ತು. ಚಾರ್ಲ್ ಲಾಂಗ್‌ವೆಲ್‌ಡ್ತ್ 15ಕ್ಕೆ ಮೂರು ವಿಕೆಟ್ ಪಡೆದು ಮಾರಕಾಯುಧವಾಗಿ ಪರಿಣಿಸಿದರೆ, ಅಜಿತ್ ಅಗರ್ಕರ್ 15ಕ್ಕೆ ಎರಡು ವಿಕೆಟ್ ಕಿತ್ತು ತಾನೂ ಕಡಿಮೆಯಲ್ಲ ಎಂದು ನಿರೂಪಿಸಿದರು. ಸೌರವ್ ಸರ್ಕಾರ್ ಕೂಡ 15ಕ್ಕೆ ಒಂದು ವಿಕೆಟ್ ಪಡೆದರು.
102ರ ಗುರಿ ಪಡೆದುಕೊಂಡು ಹೊರಟ ಕೊಲ್ಕತ್ತಾ ಆರಂಭವೂ ಚೆನ್ನಾಗಿರಲಿಲ್ಲ. ಸಿಡಿಯಬಹುದಾಗಿದ್ದ ದಾಂಡಿಗರಾದ ಬ್ರೆಂಡನ್ ಮೆಕಲಮ್ (9), ಸೌರವ್ ಗಂಗೂಲಿ (0), ಬ್ರಾಡ್ ಹಾಡ್ಜ್ (6), ಯಶಪಾಲ್ ಸಿಂಗ್ (6), ಡೇವಿಡ್ ಹಸ್ಸಿ (9) ಕೇವಲ 10 ಓವರುಗಳಲ್ಲಿ ಕಳೆದು ಹೋಗಿದ್ದರು.
ಆದರೆ ಲಕ್ಷ್ಮೀ ಶುಕ್ಲಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಕ್ರೀಸಿಗಂಟಿಕೊಂಡು ಅಜೇಯ ಪ್ರದರ್ಶನ ನೀಡಿದ್ದಾರೆ. ಅವರು ತನ್ನ ಇನ್ನಿಂಗ್ಸ್‌ನಲ್ಲಿ 46 ಎಸೆತಗಳನ್ನೆದುರಿಸಿ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ 48 ರನ್ ದಾಖಲಿಸುವ ಮೂಲಕ ಕೊಲ್ಕತ್ತಾವನ್ನು ನಗುವಿನೊಂದಿಗೆ ನಿರ್ಗಮಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಶೋಯಿಬ್ ಶೇಕ್ 6ಕ್ಕೆ ರನ್ನೌಟಾಗಿದ್ದರೆ ಅಜಿತ್ ಅಗರ್ಕರ್ 13 ರನ್ ಗಳಿಸಿ ಅಜೇಯರಾಗುಳಿದರು. ರಾಜಸ್ತಾನ ಪರ ಮುನಾಫ್ ಪಟೇಲ್ 14ಕ್ಕೆ ಎರಡು ವಿಕೆಟ್ ಪಡೆದು ಅಬ್ಬರ ತೋರಿಸಿದರೂ ಕೊಲ್ಕತ್ತಾವನ್ನು ತಡೆಯಲಾಗಿರಲಿಲ್ಲ. ಜೋಹಾನ್ ಬೋಥಾ 19ಕ್ಕೆ ಎರಡು ಹಾಗೂ ಅಮಿತ್ ಸಿಂಗ್ ಒಂದು ವಿಕೆಟ್ ಕಿತ್ತಿದ್ದಾರೆ.ಕೊಲ್ಕತ್ತಾ ಗೆಲುವಿನಲ್ಲಿ ಮುಂಚೂಣಿ ನಿರ್ವಹಣೆ ನೀಡಿದ ಲಕ್ಷ್ಮೀ ಶುಕ್ಲಾ ಅರ್ಹವಾಗಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು |
| |
|
|
|
|
|
|