|
| ಕೊಲ್ಕತ್ತಾ ತಂಡದ ವರದಿಗಾಗಿ ಕಾಯುತ್ತಿರುವ ಕಿಂಗ್ ಖಾನ್ |
| ಕೊಲ್ಕತ್ತಾ, ಬುಧವಾರ, 20 ಮೇ 2009 ( 18:38 IST ) | |
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಮೆಂಟ್‌ನಿಂದ ಕೊಲ್ಕತ್ತಾ ನೈಟ್ ರೈಡರ್ಸ್ ಮಾಲಕ ಶಾರೂಖ್ ಖಾನ್ ನೂರಾರು ಮೈಲುಗಳ ದೂರದಲ್ಲಿರಬಹುದು; ಆದರೆ ತಂಡದಲ್ಲಿನ ಆಗು-ಹೋಗುಗಳ ಬಗ್ಗೆ ಈ ಬಾಲಿವುಡ್ ನಟ ಶೀಘ್ರದಲ್ಲೇ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ.
ಮತದಾನ ಮಾಡಲು ತವರಿಗೆ ವಾಪಸಾಗಿದ್ದ ಕಿಂಗ್ ಖಾನ್ ಮತ್ತೆ ದಕ್ಷಿಣ ಆಫ್ರಿಕಾದತ್ತ ಮುಖ ಮಾಡಿಲ್ಲ. ಆದರೆ ತಂಡದ ಸಹ-ಮಾಲಕ ಜಯ್ ಮೆಹ್ತಾ ಅಲ್ಲೇ ಇದ್ದಾರೆ. ತಂಡದೊಳಗೆ ನಡೆಯುತ್ತಿರುವ ವಿಚಾರಗಳ ಬಗ್ಗೆ, ಆಟಗಾರು - ತರಬೇತುದಾರರ ನಡುವಿನ ಬೆಳವಣಿಗೆಗಳ ಬಗ್ಗೆ ಕೂಲಂಕಷವಾಗಿ ಗಮನ ಹರಿಸಿ ಪ್ರಥಮ ಮಾಹಿತಿಯನ್ನು ತನಗೆ ನೀಡಬೇಕು ಎಂದು ಖಾನ್ ಹೇಳಿದ್ದಾರಂತೆ.
ಐಪಿಎಲ್ ದ್ವಿತೀಯ ಆವೃತ್ತಿಯಲ್ಲಿ ಕೊಲ್ಕತ್ತಾದ ಕೊನೆಯ ಪಂದ್ಯ ರಾಜಸ್ತಾನ ರಾಯಲ್ಸ್ ವಿರುದ್ಧ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಮೋಘ ಜಯ ದಾಖಲಿಸಿದ್ದರೂ ಸಹ ಐಪಿಎಲ್ ಅಂಕಪಟ್ಟಿಯಲ್ಲಿ ತೀರಾ ಕಡಿಮೆ ಅಂಕಗಳನ್ನು ಪಡೆದು ಈ ತಂಡ ನಿರ್ಗಮಿಸಲಿದೆ.
"ಶಾರೂಖ್ ಖಾನ್ ತಾನಾಗಿ ದಕ್ಷಿಣ ಆಫ್ರಿಕಾಕ್ಕೆ ಬಂದಿಲ್ಲ. ಬದಲಿಗೆ ಮೆಹ್ತಾ ಮೂಲಕ ತನ್ನ ಕಿವಿ ಮತ್ತು ಕಣ್ಣುಗಳನ್ನು ಇತ್ತ ನೆಟ್ಟಿದ್ದಾರೆ. ಅಂದರೆ ಮೆಹ್ತಾ ಮೂಲಕ ಈ ಆವೃತ್ತಿಯ ನಂತರ ಎಲ್ಲವನ್ನೂ ವಿವರವಾಗಿ ಖಾನ್ ತಿಳಿದುಕೊಳ್ಳಲಿದ್ದಾರೆ" ಎಂದು ಮೂಲವೊಂದು ಪತ್ರಿಕೆಗೆ ವಿವರಿಸಿದೆ.
ಈ ನಿಟ್ಟಿನಲ್ಲಿ ಮೆಹ್ತಾ ಈಗಾಗಲೇ ತನ್ನ ಕೆಲಸಗಳನ್ನು ಆರಂಭಿಸಿದ್ದು, ನಾಯಕ ಬ್ರೆಂಡನ್ ಮೆಕಲಮ್ ಸೇರಿದಂತೆ ಇತರ ಕೆಲವು ಆಟಗಾರರ ಜತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ತರಬೇತುದಾರ ಜಾನ್ ಬುಚನಾನ್, ನಿರ್ದೇಶಕ ಜಾಯ್ ಭಟ್ಟಾಚಾರ್ಯ ಸೇರಿದಂತೆ ತಂಡದ ಇತರೆ ಸಹಾಯಕ ಸಿಬಂದಿಗಳ ಜತೆಗೂ ಮೆಹ್ತಾ ಸಭೆ ನಡೆಸಲಿದ್ದು, ತಂಡದ ಹಲವು ಸದಸ್ಯರ ಅದೃಷ್ಟ ಪರೀಕ್ಷೆಯಾಗಲಿದೆ ಎನ್ನಲಾಗಿದೆ.
ಈ ಬಾರಿ ತಂಡವು ಕಳಪೆ ಪ್ರದರ್ಶನ ನೀಡಲು ಪ್ರಮುಖ ಕಾರಣಗಳೇನು ಎಂಬುವುದನ್ನು ಪಟ್ಟಿ ಮಾಡಿ ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಖಾನ್ ಹೆಚ್ಚಿನ ಆಸ್ಥೆ ವಹಿಸಲಿದ್ದಾರೆ. ಬಹುತೇಕ ಜಾನ್ ಬುಚನಾನ್ ಸೇರಿದಂತೆ ಹಲವು ವಿವಾದಾತ್ಮಕ ನಿರ್ಧಾರಗಳಿಗೆ ಕಾರಣರಾಗಿದ್ದ ಇತರ ಸದಸ್ಯರು ಮುಂದಿನ ಆವೃತ್ತಿಯಲ್ಲಿ ಸ್ಥಾನ ಪಡೆದುಕೊಳ್ಳುವುದು ಸಂಶಯ ಎಂದೇ ಅಂದಾಜಿಸಲಾಗುತ್ತಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು |
| |
|
|
|
|
|
|