|
| ಕಾಮನ್‌ವೆಲ್ತ್ ಟಿ.ಟಿ.: ಮಾರಿಷಸ್ ವಿರುದ್ಧ ಭಾರತಕ್ಕೆ ಗೆಲುವು |
| ಸ್ಕಾಟ್ಲೆಂಡ್, ಬುಧವಾರ, 20 ಮೇ 2009 ( 18:36 IST ) | |
ಇಲ್ಲಿನ ಗ್ಲಾಸ್ಗೋದಲ್ಲಿ ಮಂಗಳವಾರ ಆರಂಭವಾಗಿರುವ 18ನೇ ಕಾಮನ್‌ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಯನ್ ಅಚಂತಾ ಶರತ್ ಕಮಾಲ್ ಅದ್ಭುತ ಪ್ರದರ್ಶನದ ಮೂಲಕ ಮಾರಿಷಸ್ ವಿರುದ್ಧ 3-0 ಅಂತರದಿಂದ ಜಯ ದಾಖಲಿಸಿದೆ.
ಪ್ರಸಕ್ತ ಅದ್ಭುತ ಲಯ ಕಂಡುಕೊಂಡಿರುವ ವಿಶ್ವದ ನಂ.72 ಆಟಗಾರ ಶರತ್ ಎದುರಾಳಿ ಆಟಗಾರನಿಗೆ ವಿಶ್ರಾಂತಿ ನೀಡದೆ ಪಂದ್ಯವನ್ನು ಗೆದ್ದುಕೊಂಡಿದ್ದಾರೆ. ಅವರು ಮಾರಿಷಸ್ ತಂಡದ ಚಾನ್ ಯೂಕ್ ಫೋರನ್ನು 11-2, 11-3, 11-6ರ ಅಂತರದಿಂದ 'ಬಿ' ಗುಂಪಿನ ಹೋರಾಟದಲ್ಲಿ ಮಣಿಸಿದರು.
ಅದಕ್ಕೂ ಮೊದಲು ಮಾಜಿ ರಾಷ್ಟ್ರೀಯ ಚಾಂಪಿಯನ್ ಸುಭಾಜಿತ್ ಸಾಹಾರವರು ಆರಂಭಿಕ ಪಂದ್ಯದಲ್ಲಿ 11-9, 11-8, 11-8ರಿಂದ ಆರ್. ತೌಕೂರಿಯವರನ್ನು ಪರಾಜಯಗೊಳಿಸಿ ಶುಭಾರಂಭಗೊಳಿಸಿದ್ದರು.
ನಂತರದ ಪಂದ್ಯದಲ್ಲಿ ಸೌರವ್ ಚಕ್ರವರ್ತಿ ಕೂಡ ಗೆಲುವು ಸಾಧಿಸಿದ್ದಾರೆ. ಅವರು ಲೀ ಕಾಮ್ ವಾರನ್ನು 11-3, 11-2, 11-4ರ ಅಂತರದಿಂದ ಮಣಿಸುವ ಮೂಲಕ ಮುಂದಿನ ಭಾರತ ಮುಂದಿನ ಸುತ್ತಿಗೆ ಪ್ರವೇಶಿಸಲು ಸಹಕರಿಸಿದರು.
ಮೇ 19ರಂದು ಆರಂಭವಾಗಿರುವ ಈ ಕ್ರೀಡಾಕೂಟ ಮೇ 25ರವರೆಗೆ ನಡೆಯಲಿದೆ. ಒಟ್ಟು 20 ದೇಶಗಳು ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸುತ್ತಿವೆ. ಸಿಂಗಲ್ಸ್, ಡಬಲ್ಸ್ ಸೇರಿದಂತೆ ಒಟ್ಟಾರೆ 7 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ಈ ಏಳು ದಿನಗಳ ಕಾಲ ನಡೆಯುವ ಸ್ಪರ್ಧೆಗೆ 300ಕ್ಕೂ ಹೆಚ್ಚು ಕ್ರೀಡಾಪಟುಗಳು ಹಾಜರಾಗಿದ್ದಾರೆ.
ಅಚಂತಾ ಶರತ್ ಕಮಾಲ್, ಸುಭಾಜಿತ್ ಸಾಹ, ಸೌರವ್ ಚಕ್ರವರ್ತಿ, ಎ. ಅಮಲರಾಜ್, ಪಾಥಿಕ್ ಮೆಹ್ತಾ, ನೇಹಾ ಅಗರ್ವಾಲ್, ಪೌಲೊಮಿ ಘಾತಕ್, ಮೌಮಾ ದಾಸ್, ಕುಮಾರೇಸನ್ ಶಾಮಿನಿ, ಮಧುರಿಕಾ ಪತ್ಕರ್ ಭಾರತವನ್ನು ಈ ಟೂರ್ನಮೆಂಟ್‌ನಲ್ಲಿ ಪ್ರತಿನಿಧಿಸುತ್ತಿದ್ದಾರೆ. ರಾಷ್ಟ್ರೀಯ ತರಬೇತುದಾರರಾದ ಮಾಸಿಮೋ ಕಾಂಸ್ಟಾನಿನಿ ಮತ್ತು ಎನ್‌ಐಎಸ್ ಪಾಟಿಯಾಲಾ ಟೇಬಲ್ ಟೆನಿಸ್ ಹಿರಿಯ ಕೋಚ್ ಭವಾನಿ ಮುಖರ್ಜಿ ತಂಡದ ಜತೆಗಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು |
| |
|
|
|
|
|
|