|
| ಕಾಮನ್‌ವೆಲ್ತ್ ಗೇಮ್ಸ್‌ಗೆ ಭದ್ರತೆ: ಕಲ್ಮಾಡಿ |
| ನವದೆಹಲಿ, ಬುಧವಾರ, 20 ಮೇ 2009 ( 18:34 IST ) | |
ನೆರೆಹೊರೆಯ ರಾಷ್ಟ್ರಗಳಲ್ಲಿ ಗೊಂದಲಕರ ರಾಜಕೀಯ ಪರಿಸ್ಥಿತಿಗಳು ಮುಂದುವರಿಯುತ್ತಿರುವ ಹಿನ್ನಲೆಯಲ್ಲಿ ಮುಂದಿನ ವರ್ಷದ ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಭಾರತವು ಗರಿಷ್ಠ ಭದ್ರತಾ ವ್ಯವಸ್ಥೆಗಳನ್ನು ಒದಗಿಸಲಿದೆ ಮತ್ತು ಎಚ್ಚರಿಕೆಯಿಂದ ನಿಭಾಯಿಸಲಿದೆ ಎಂದು ಸಂಘಟನಾ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿ ತಿಳಿಸಿದ್ದಾರೆ.
"ಭದ್ರತೆ ಬಗ್ಗೆ ನಾವು ಹೆಚ್ಚಿನ ಆಸ್ಥೆ ವಹಿಸಲಿದ್ದೇವೆ. ಇದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ದೆಹಲಿ ಕಾಮನ್‌ವೆಲ್ತ್ ಸದಸ್ಯ ರಾಷ್ಟ್ರಗಳ ಮಹಾಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ನಾವು ಅವರನ್ನು ಸುರಕ್ಷತೆಯ ವಿಚಾರದಲ್ಲಿ ಸಂತೃಪ್ತಿಗೊಳಿಸಲಿದ್ದೇವೆ" ಎಂದು ಕಲ್ಮಾಡಿ ತಿಳಿಸಿದ್ದಾರೆ.
"ಭದ್ರತಾ ವಿಚಾರಗಳ ವಿಭಾಗಕ್ಕೆ ನಾವು ದೆಹಲಿ ರಾಜ್ಯಪಾಲರ ಮುಂದಾಳುತ್ವ ಹೊಂದಿದ್ದೇವೆ. ಕಾಮನ್‌ವೆಲ್ತ್ ಫೆಡರೇಷನ್ ನಮಗೆ ಕಳುಹಿಸುತ್ತಿರುವ ವರದಿಗಳೂ ನಮ್ಮಲ್ಲಿವೆ. ಅದೇ ರೀತಿ ನಾವು ಕೂಡ ಪ್ರತಿ ತಿಂಗಳು ಭದ್ರತಾ ವಿಚಾರಗಳ ಬಗ್ಗೆ ಅವರಿಗೆ ಮಾಹಿತಿ ರವಾನಿಸುತ್ತಿದ್ದೇವೆ. ಹಾಗಾಗಿ ಗೇಮ್ಸ್‌ನ ಪ್ರಮುಖ ವಿಚಾರಗಳಲ್ಲಿ ಭದ್ರತಾ ವ್ಯವಸ್ಥೆ ಪ್ರಮುಖವಾದುದು" ಎಂದರು.
ದೆಹಲಿ ಗೇಮ್ಸ್‌ನಲ್ಲಿ ಭಾಗವಹಿಸುವ ಸದಸ್ಯ ರಾಷ್ಟ್ರಗಳ ಭದ್ರತಾ ಕಳವಳಗಳನ್ನು ದೂರ ಮಾಡುವುದು ಗೇಮ್ಸ್ ಸಂಘಟನಾ ಸಮಿತಿಯ ಪ್ರಥಮ ಆದ್ಯತೆ ಎಂದೂ ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.
"ಪಕ್ಕದ ದೇಶಗಳಲ್ಲಿ ಭದ್ರತಾ ವಿಚಾರಗಳು ಒಂದು ಸಮಸ್ಯೆಯಾಗಿ ಕಾಡುತ್ತಿರುವಾಗ ನಾವು ಸದಸ್ಯ ರಾಷ್ಟ್ರಗಳಿಗೆ ನಮ್ಮ ವ್ಯವಸ್ಥೆಗಳ ಬಗ್ಗೆ ತೃಪ್ತರನ್ನಾಗಿಸುವುದು ಪ್ರಮುಖ ಕೆಲಸ. ನಾವು ಬೀಜಿಂಗ್‌ನಲ್ಲಿದ್ದ ಭದ್ರತಾ ವ್ಯವಸ್ಥೆಯ ರೀತಿಯಲ್ಲೇ ದೆಹಲಿಯಲ್ಲೂ ಒದಗಿಸಲಿದ್ದೇವೆ" ಎಂದು ಸರಕಾರದ ನಿಲುವನ್ನು ಅವರು ಪ್ರತಿಪಾದಿಸಿದರು.
"ಈ ಬಗ್ಗೆ ನಾವು ಅಕ್ಟೋಬರ್‌ನಲ್ಲಿ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ. ಆ ಮೂಲಕ 71 ರಾಷ್ಟ್ರಗಳನ್ನು ಮಹಾಸಭೆಯ ಸಂದರ್ಭದಲ್ಲಿ ನಾವು ಸಮಾಧಾನಗೊಳಿಸಲಿದ್ದೇವೆ" ಎಂದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು |
| |
|
|
|
|
|
|