ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಮುನಿಚ್: ಶೂಟಿಂಗ್ ವಿಶ್ವಕಪ್‌ನಲ್ಲಿ ತೇಜಸ್ವಿನಿಗೆ ಕಂಚು
ಜರ್ಮನಿ, ಬುಧವಾರ, 20 ಮೇ 2009   ( 18:29 IST )
ಮುನಿಚ್‌ನಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್‌ನ ಮಹಿಳೆಯರ ಮೂರನೇ ಹಂತದ ರೈಫಲ್ ಸ್ಪರ್ಧೆಯಲ್ಲಿ ಭಾರತದ ತೇಜಸ್ವಿನಿ ಸಾವಂತ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

28ರ ಹರೆಯದ ಮಹಾರಾಷ್ಟ್ರ ಶೂಟರ್ ತೇಜಸ್ವಿನಿಯವರು ಪ್ರೋನ್ ವಿಭಾಗದಲ್ಲಿ ಪರಿಪೂರ್ಣ 200, ಸ್ಟಾಂಡಿಂಗ್ ವಿಭಾಗದಲ್ಲಿ 192 ಹಾಗೂ ನೀಲಿಂಗ್ ವಿಭಾಗದಲ್ಲಿ 196 ಅಂಕಗಳನ್ನು ಪಡೆದಿದ್ದರು. ಫೈನಲ್‌ನಲ್ಲಿ 97 ಅಂಕಗಳನ್ನು ಗಳಿಸುವ ಮೂಲಕ ಒಟ್ಟಾರೆ 685 ಪಾಯಿಂಟ್ ಸಂಪಾದಿಸಿದ ಅವರು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಅದೇ ಹೊತ್ತಿಗೆ ಮತ್ತೊಬ್ಬ ಭಾರತೀಯ ಶೂಟರ್ ಲಜ್ಜಾ ಗೋಸ್ವಾಮಿ 682.4 ಅಂಕ ಪಡೆಯುವುದರೊಂದಿಗೆ ಆರನೇ ಸ್ಥಾನ ಪಡೆದಿದ್ದು, ಸ್ವಲ್ಪದರಲ್ಲೇ ಪದಕವಂಚಿತರಾದರು. ಅವರು 198, 195, 194 ಅಂಕಗಳೊಂದಿಗೆ ಫೈನಲ್‌ನಲ್ಲಿ 95.4 ಅಂಕ ಪಡೆದಿದ್ದರು.

ಮೀನಾ ಕುಮಾರಿ 569 ಅಂಕ ಪಡೆಯುವ ಮೂಲಕ 80 ಸ್ಪರ್ಧಿಗಳಿದ್ದ ಈ ವಿಭಾಗದಲ್ಲಿ 67ನೇ ಸ್ಥಾನ ಪಡೆದಿದ್ದಾರೆ.

197, 196, 197ರೊಂದಿಗೆ ಫೈನಲ್‌ನಲ್ಲಿ 97.5 ಅಂಕ ಪಡೆಯುವ ಮೂಲಕ ಒಟ್ಟು 687.5 ಅಂಕ ಪಡೆದ ಚೀನಾದ ವೆನ್ ಯಿನ್ ಸ್ವರ್ಣ ಪದಕ ಹಾಗೂ 199, 190, 195ರೊಂದಿಗೆ ಫೈನಲ್‌ನಲ್ಲಿ 101.7 ಅಂಕ ಪಡೆದು ಒಟ್ಟಾರೆ 685.7 ಅಂಕ ಗಳಿಸಿದ ಜರ್ಮನಿಯ ಸೋಂಜಾ ಪೀಲ್ಸ್‌ಸೈಪ್ಟರ್‌ ಬೆಳ್ಳಿ ಪದಕ ಗಿಟ್ಟಿಸಿಕೊಂಡಿದ್ದಾರೆ.

ವಿಶ್ವ ಶೂಟಿಂಗ್ ಫೆಡರೇಷನ್ ನಡೆಸುತ್ತಿರುವ ಈ ಶೂಟಿಂಗ್ ವಿಶ್ವಕಪ್‌ನ ಮುಂದಿನ ಹಂತದ ಸ್ಪರ್ಧೆಗಳು ಮೇ 23ರಿಂದ 28ರವರೆಗೆ ಇಟಲಿಯ ಮಿಲನ್‌ನಲ್ಲಿ ನಡೆಯಲಿವೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಶಾಂತಚಿತ್ತದಿಂದ ಗೆಲುವು ಸಾಧ್ಯವಾಯಿತು: ಕುಂಬ್ಳೆ
ಫ್ರೆಂಚ್ ಓಪನ್: ಸೋಮದೇವ್ 2ನೇ ಸುತ್ತಿಗೆ
ಆಶಸ್ ಸರಣಿ: ಆಸೀಸ್ ತಂಡದಲ್ಲಿ ಸೈಮಂಡ್ಸ್‌ಗೆ ಸ್ಥಾನವಿಲ್ಲ
ಬೆಂಗಳೂರು ಪರ ಅತೀ ಹೆಚ್ಚು ಸಿಕ್ಸರ್ ಬಾರಿಸಿದ್ದು ಟೇಲರ್
ಡೆವಿಲ್ಸ್ ತಂಡವನ್ನು ಬಗ್ಗುಬಡಿದ ಚಾಲೆಂಜರ್ಸ್
ಕೊಲ್ಕತ್ತಾಕ್ಕೆ ಸೋತಿದ್ದರಿಂದ ಸಮಸ್ಯೆಯಾಗಿಲ್ಲ: ಫ್ಲೆಮಿಂಗ್
ಗ್ರಹ ಗತಿ
ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಾಫಿ ಬೆಳೆಗಾರರ ಪ್ಯಾಕೇಜ್‌ಗೆ ಆದ್ಯತೆ: ಚಂದ್ರೇಗೌಡ
ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಕೇಂದ್ರ ಸರ್ಕಾರದ ಮುಂದಿಡುವ ಕಾಫಿ ಪ್ಯಾಕೇಜನ್ನು ತಕ್ಷಣ ಜಾರಿಗೆ ತರುವಂತೆ ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಡಿ.ಬಿ. ಚಂದ್ರೇಗೌಡ
ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್
ಬಿಜೆಪಿ ಕತೆ ಏನಾಗುತ್ತೆ ಅಂತ ನೋಡಿ: ಸಿದ್ದರಾಮಯ್ಯ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು
ಮುಂದೆ ಓದಿ|ಮತ್ತಷ್ಟು...