ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಶಾಂತಚಿತ್ತದಿಂದ ಗೆಲುವು ಸಾಧ್ಯವಾಯಿತು: ಕುಂಬ್ಳೆ
ಪ್ರತೀ ಬಾರಿಯೂ ಒಂದು ಪಂದ್ಯದನ್ನು ಮಾತ್ರ ಗುರಿಯಿರಿಸಿಕೊಂಡು, ಐಪಿಎಲ್ ಅಂಕಪಟ್ಟಿಯ ಬಗ್ಗೆ ಚಿಂತೆ ಮಾಡದಿದ್ದುದು ಸೆಮಿಫೈನಲ್ ಸ್ಥಾನಕ್ಕಾಗಿ ನಿಕಟ ಹೋರಾಟ ನೀಡಲು ಸಹಕಾರಿಯಾಗಿದೆ ಎಂದು ಬೆಂಗಳೂರು ರಾಯಲ್ ಚಾಲೆಂಜರ್ಸ್ ನಾಯಕ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.

"ನಾವು ಒಂದು ಸಲ ಒಂದು ಪಂದ್ಯವನ್ನು ಮಾತ್ರ ಗಮನಕ್ಕೆ ತೆಗೆದುಕೊಳ್ಳುತ್ತೇವೆ" ಎಂದಿರುವ ಕುಂಬ್ಳೆ, "ನಾವೆಲ್ಲಿದ್ದೇವೆ ಮತ್ತು ಮುಂದೆ ಏನಾಗಬಹುದು ಎಂದು ನಾವು ಅಂಕಪಟ್ಟಿಯತ್ತ ನೋಡಲೇ ಇಲ್ಲ. ನಾವು ಕೇವಲ ಒಂದು ಪಂದ್ಯವನ್ನಷ್ಟೇ ಗೆಲ್ಲುವ ಗುರಿ ಹೊಂದಿರುತ್ತೇವೆ. ಇದು ನಮ್ಮ ತಂಡಕ್ಕೆ ಹೆಚ್ಚಿನ ಸಹಾಯವಾಗಿದೆ" ಎಂದು ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ 7 ವಿಕೆಟ್‌ಗಳ ಅಂತರದಿಂದ ಜಯಭೇರಿ ಬಾರಿಸಿದ ನಂತರ ತಿಳಿಸಿದರು.

ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವ ತಂಡದ ವಿರುದ್ಧ ಜಯಗಳಿಸಲು ಪ್ರಮುಖ ಕಾರಣರಾದ ದಕ್ಷಿಣ ಆಫ್ರಿಕಾ ಆಟಗಾರ ಜಾಕ್ವಾಸ್ ಕ್ಯಾಲಿಸ್, ರಾಹುಲ್ ದ್ರಾವಿಡ್ ಮತ್ತು ಪ್ರವೀಣ್ ಕುಮಾರ್ ಆಟವನ್ನು ಕುಂಬ್ಳೆ ಪ್ರಶಂಶಿಸಿದ್ದಾರೆ.

"ಈ ಪಂದ್ಯವನ್ನು ಗೆದ್ದಿರುವುದರಿಂದ ನನಗಂತೂ ಸಂತೋಷವಾಗಿದೆ. ಪ್ರತಿಯೊಬ್ಬರೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಜಾಕ್ವಾಸ್ ಕ್ಯಾಲಿಸ್ ಮತ್ತು ರಾಹುಲ್ ದ್ರಾವಿಡ್‌ರ ಜತೆಯಾಟ ಪಂದ್ಯವನ್ನು ಗೆಲ್ಲಲು ಆಸರೆಯಾಯಿತು. ಪ್ರವೀಣ್ ಕುಮಾರ್ ಬೇಗನೆ ವಿಕೆಟ್ ಪಡೆಯಲು ಸಾಧ್ಯವಾದ ಕಾರಣ ಎದುರಾಳಿಗಳನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಲು ಸಾಧ್ಯವಾಗಿದೆ" ಎಂದರು.

ಇದೇ ವಾದವನ್ನು ಮಂಡಿಸಿರುವ ದೆಹಲಿ ಕಪ್ತಾನ ವೀರೇಂದ್ರ ಸೆಹ್ವಾಗ್, ತಾವು ಆರಂಭಿಕ ವಿಕೆಟುಗಳನ್ನು ಬೇಗನೆ ಕಳೆದುಕೊಂಡ ಕಾರಣ ಹಿನ್ನಡೆ ಅನುಭವಿಸಬೇಕಾಯಿತು ಎಂದಿದ್ದಾರೆ.

"ನಾವು ಅಂದುಕೊಂಡಂತೆ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ಮೊದಲ ಓವರಿನಲ್ಲೇ ನಾವು ಎರಡು ವಿಕೆಟುಗಳನ್ನು ಕಳೆದುಕೊಂಡಿದ್ದೆವು" ಎಂದರು.

ಇದರ ಜತೆಗೆ ಮತ್ತೊಂದು ವಿಶ್ಲೇಷಣೆ ನಡೆಸಿರುವ ಸೆಹ್ವಾಗ್, "ಬಹುಶಃ ಸೆಮಿಫೈನಲ್‌ಗೆ ಈಗಾಗಲೇ ಪ್ರವೇಶಿಸಿರುವ ಕಾರಣ ನಾವು ಸ್ವಲ್ಪ ಮಟ್ಟದ ಸುರಕ್ಷಿತ ಭಾವನೆ ಹೊಂದಿದ್ದೆವು ಅನ್ನಿಸುತ್ತಿದೆ. ಮುಂದಿನ ಪಂದ್ಯದಲ್ಲಿ ನಾವು ಎಚ್ಚೆತ್ತುಕೊಂಡು ಗೆಲುವು ಸಾಧಿಸಲಿದ್ದೇವೆ" ಎಂದಿದ್ದಾರೆ.

"ನಾವು ಉತ್ತಮ ಆರಂಭವನ್ನು ನೀಡಲಿದ್ದೇವೆ. ಅಬ್ರಹಾಂ ಡೇ ವಿಲ್ಲರ್ಸ್, ತಿಲಕರತ್ನೆ ದಿಲ್‌ಶಾನ್ ಮತ್ತು ದಿನೇಶ್ ಕಾರ್ತಿಕ್ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಲಯದಲ್ಲಿದ್ದಾರೆ. ನಾನು ಮತ್ತು ಗೌತಮ್ ಗಂಭೀರ್ ಸ್ಫೋಟಕ ಆಟವಾಡಬೇಕಿದೆ. ಸೆಮಿಫೈನಲ್‌ಗೂ ಮೊದಲು ನಮಗುಳಿದಿರುವ ಏಕೈಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿದ್ದೇವೆ" ಎಂದು ಸೆಹ್ವಾಗ್ ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಫ್ರೆಂಚ್ ಓಪನ್: ಸೋಮದೇವ್ 2ನೇ ಸುತ್ತಿಗೆ
ಆಶಸ್ ಸರಣಿ: ಆಸೀಸ್ ತಂಡದಲ್ಲಿ ಸೈಮಂಡ್ಸ್‌ಗೆ ಸ್ಥಾನವಿಲ್ಲ
ಬೆಂಗಳೂರು ಪರ ಅತೀ ಹೆಚ್ಚು ಸಿಕ್ಸರ್ ಬಾರಿಸಿದ್ದು ಟೇಲರ್
ಡೆವಿಲ್ಸ್ ತಂಡವನ್ನು ಬಗ್ಗುಬಡಿದ ಚಾಲೆಂಜರ್ಸ್
ಕೊಲ್ಕತ್ತಾಕ್ಕೆ ಸೋತಿದ್ದರಿಂದ ಸಮಸ್ಯೆಯಾಗಿಲ್ಲ: ಫ್ಲೆಮಿಂಗ್
ಸಾನಿಯಾ, ಸೋಮದೇವ್, ಪ್ರಕಾಶ್ ರ‌್ಯಾಂಕಿಂಗ್ ಏರಿಕೆ
ಗ್ರಹ ಗತಿ
ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಾಫಿ ಬೆಳೆಗಾರರ ಪ್ಯಾಕೇಜ್‌ಗೆ ಆದ್ಯತೆ: ಚಂದ್ರೇಗೌಡ
ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಕೇಂದ್ರ ಸರ್ಕಾರದ ಮುಂದಿಡುವ ಕಾಫಿ ಪ್ಯಾಕೇಜನ್ನು ತಕ್ಷಣ ಜಾರಿಗೆ ತರುವಂತೆ ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಡಿ.ಬಿ. ಚಂದ್ರೇಗೌಡ
ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್
ಬಿಜೆಪಿ ಕತೆ ಏನಾಗುತ್ತೆ ಅಂತ ನೋಡಿ: ಸಿದ್ದರಾಮಯ್ಯ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು
ಮುಂದೆ ಓದಿ|ಮತ್ತಷ್ಟು...