|
| ಫ್ರೆಂಚ್ ಓಪನ್: ಸೋಮದೇವ್ 2ನೇ ಸುತ್ತಿಗೆ |
| ಪ್ಯಾರಿಸ್, ಬುಧವಾರ, 20 ಮೇ 2009 ( 18:24 IST ) | |
ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಸಿಂಗಲ್ಸ್ ವಿಭಾಗದ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಜಯ ಸಾಧಿಸಿರುವ ಸೋಮದೇವ್ ದೇವರ್‌ಮನ್ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಆದರೆ ಮತ್ತೊಬ್ಬ ಸ್ಪರ್ಧಿ ಪ್ರಕಾಶ್ ಅಮೃತರಾಜ್ ಸೋಲೊಪ್ಪಿಕೊಳ್ಳುವ ಮೂಲಕ ಗ್ರಾಂಡ್ ಸ್ಲಾಮ್ ಪ್ರವೇಶದ ಹೋರಾಟವನ್ನು ಆರಂಭದಲ್ಲೇ ಕಳೆದುಕೊಂಡರು.
ವಿಶ್ವದ ನಂ. 138 ಹಾಗೂ ಅರ್ಹತಾ ಸುತ್ತಿನ 26ನೇ ಶ್ರೇಯಾಂಕಿತ ಸೋಮದೇವ್ ತನ್ನ ಎದುರಾಳಿ ವಿಶ್ವದ ನಂ.223 ಬ್ರೆಜಿಲ್‌ನ ಜಾವೋ ಸೌಜಾ ವಿರುದ್ಧ 6-2, 2-6, 7-5ರ ಅಂತರದಿಂದ ಜಯ ಸಾಧಿಸಿದ್ದಾರೆ.
ಸೋಮದೇವ್ ಮೊದಲ ಸೆಟ್ಟನ್ನು 29 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಗೆದ್ದುಕೊಂಡಿದ್ದರು. ಆದರೆ ಎರಡನೇ ಸೆಟ್ ಕಳೆದುಕೊಳ್ಳಲಿಚ್ಛಿಸದ ಸೋಜಾ ಮೂರನೇ ಸುತ್ತಿನಲ್ಲಿ ಭಾರತೀಯ ಎದುರಾಳಿಗೆ ಮಣಿಯು ಮೂಲಕ ತಮ್ಮ ಆಟವನ್ನು ಅಂತ್ಯಗೊಳಿಸಿದ್ದಾರೆ.
ವಿಜೇತ ಸೋಮದೇವ್ ಎರಡನೇ ಸುತ್ತಿನಲ್ಲಿ ಬ್ರಿಟನ್‌ನ ಅಲೆಕ್ಸ್ ಬೊಗ್ದಾನೊವಿಕ್‌ರನ್ನು ಮುಖಾಮುಖಿಯಾಗಲಿದ್ದಾರೆ. ಅವರು ಆರಂಭಿಕ ಸುತ್ತಿನಲ್ಲಿ ಅಮೆರಿಕಾದ ರೈಲರ್ ಡೆಹಾರ್ಟ್‌ರನ್ನು 4-6, 7-5, 6-3ರಿಂದ ಮಣಿಸಿದ್ದರು.
ಅದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಪ್ರಕಾಶ್ ಅಮೃತರಾಜ್ ತನ್ನ ಎದುರಾಳಿ ವಿಶ್ವದ ನಂ.96 ಹಾಗೂ ಮೂರನೇ ಶ್ರೇಯಾಂಕಿತ ಬ್ರೆಜಿಲ್‌ನ ಡೇನಿಯಲ್ ಮಾರ್ಕೋಸ್‌ರೆದುರು ಸೋಲುಂಡಿದ್ದರು.
ಆರಂಭದಲ್ಲಿ ಇಬ್ಬರೂ ಸಮಬಲ ಹೋರಾಟ ನೀಡಿದರಾದರೂ ಬ್ರೆಜಿಲ್ ಆಟಗಾರ ಹೆಚ್ಚಿನ ಪ್ರಾಬಲ್ಯ ತೋರಿಸುವ ಮೂಲಕ 6-4, 6-4ರಿಂದ ಪ್ರಕಾಶ್‌ಗೆ ಸೋಲುಣಿಸಿದ್ದಾರೆ.
ಅರ್ಹತಾ ಸುತ್ತಿನ ಸಿಂಗಲ್ಸ್ ವಿಭಾಗದಲ್ಲಿ ಪ್ರಕಾಶ್ ಸೋಲುಂಡಿರುವ ಕಾರಣ ಭಾರತೀಯ ಅಭಿಮಾನಿಗಳಿಗೆ ಸೋಮದೇವ್ ಮೇಲೆ ಅಪಾರ ನಿರೀಕ್ಷೆಗಳಿವೆ. ಮಹಿಳೆಯರ ವಿಭಾಗದಲ್ಲಿ ಸಾನಿಯಾ ಮಿರ್ಜಾ, ಡಬಲ್ಸ್‌ನಲ್ಲಿ ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ಪ್ರಮುಖ ಸುತ್ತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು |
| |
|
|
|
|
|
|