|
| ಆಶಸ್ ಸರಣಿ: ಆಸೀಸ್ ತಂಡದಲ್ಲಿ ಸೈಮಂಡ್ಸ್‌ಗೆ ಸ್ಥಾನವಿಲ್ಲ |
| ಸಿಡ್ನಿ, ಬುಧವಾರ, 20 ಮೇ 2009 ( 13:20 IST ) | |
ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಆಶಸ್ ಕ್ರಿಕೆಟ್ ಸರಣಿಗಾಗಿ ಆಸ್ಟ್ರೇಲಿಯಾ ತನ್ನ ತಂಡವನ್ನು ಪ್ರಕಟಿಸಿದ್ದು, ವಿವಾದಿತ ಆಲ್-ರೌಂಡರ್ ಆಂಡ್ರ್ಯೂ ಸೈಮಂಡ್ಸ್‌ರನ್ನು ಕೈ ಬಿಡಲಾಗಿದೆ.
ಆಯ್ಕೆಗಾರರು 16 ಸದಸ್ಯರ ತಂಡದಲ್ಲಿ ಮೂವರು ಆಲ್-ರೌಂಡರ್‌ಗಳಾದ ಶೇನ್ ವಾಟ್ಸನ್, ಆಂಡ್ರ್ಯೂ ಮೆಕ್‌ಡೊನಾಲ್ಡ್ ಮತ್ತು ಮಾರ್ಕಸ್ ನಾರ್ತ್‌ರನ್ನು ಸೇರಿಸಿಕೊಂಡಿದ್ದರೂ ಸಹ 34ರ ಹರೆಯದ ಸೈಮಂಡ್ಸ್‌ರಿಗೆ ಅವಕಾಶ ನೀಡಲಾಗಿಲ್ಲ.
ಇದುವರೆಗೆ 26 ಟೆಸ್ಟ್‌ಗಳನ್ನಾಡಿರುವ ಸೈಮಂಡ್ಸ್ ಕೊನೆಯ ಬಾರಿ ಆಡಿದ್ದು ದಕ್ಷಿಣ ಆಫ್ರಿಕಾ ವಿರುದ್ಧ ಮೆಲ್ಬೋರ್ನ್‌ನಲ್ಲಿ ನಡೆದ 'ಬಾಕ್ಸಿಂಗ್ ಡೇ' ಟೆಸ್ಟ್‌ನಲ್ಲಿ. ಆ ನಂತರ ಗಾಯಾಳು, ಲಯ ಕಳೆದುಕೊಂಡದ್ದು ಮತ್ತು ಅಂಗಣದ ಹೊರಗಿನ ವೈಯಕ್ತಿ ಚರಿಷ್ಮಾವನ್ನು ಹಾಳು ಮಾಡಿಕೊಂಡದ್ದು ಅವರನ್ನು ತಂಡದಿಂದ ದೂರವೇ ಉಳಿಯುವಂತೆ ಮಾಡಿತ್ತು.
"ಯಾವುದೇ ತಂಡವನ್ನು ಆರಿಸುವುದಾದರೂ ಆಯ್ಕೆಗಾರರಿಗೆ ಯಾವತ್ತೂ ಅದೊಂದು ಕಠಿಣವಾದ ಕೆಲಸ. ಅದರಲ್ಲೂ ಆಶಸ್ ಸರಣಿಗೆ ತಂಡವನ್ನು ಗುರುತಿಸುವುದು ಮತ್ತೂ ಕಷ್ಟ. ದುರುದೃಷ್ಟಕರವೆಂದರೆ ಆಂಡ್ರ್ಯೂ ಸೈಮಂಡ್ಸ್ ಈ ಬಾರಿ 16 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿಲ್ಲ" ಎಂದು ನಾಯಕ ರಿಕಿ ಪಾಂಟಿಂಗ್ ತಂಡದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಅವರು ಅಬುದಾಭಿ ಮತ್ತು ದುಬೈಯಲ್ಲಿ ಪಾಕಿಸ್ತಾನ ವಿರುದ್ಧ ಕಳೆದ ಕೆಲವು ವಾರಗಳ ಹಿಂದೆ ನಡೆದಿದ್ದ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು. ಈ ಬಾರಿ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಅವರು ತನ್ನ ಕಠಿಣ ಶ್ರಮವನ್ನು ಮುಂದುವರಿಸುತ್ತಾರೆಂಬ ಭರವಸೆ ನನ್ನಲ್ಲಿದೆ. ಮುಂದಿನ ಸರಣಿಗಾಗಿ ಖಂಡಿತಾ ಅವರು ಅವಕಾಶ ಪಡೆಯುವ ಎಲ್ಲಾ ಸಾಧ್ಯತೆಗಳು ಮುಕ್ತವಾಗಿವೆ" ಎಂದರು.
2005ರಲ್ಲಿ ಇಂಗ್ಲೆಂಡ್‌ನಲ್ಲಿ 2-1ರ ಅಂತರದಿಂದ ಸೋಲುಂಡಿದ್ದ ಆಸ್ಟ್ರೇಲಿಯಾವು, 2006-07ರಲ್ಲಿ ಇಂಗ್ಲೆಂಡ್‌ನ್ನು ತಾಯ್ನೆಲದಲ್ಲಿ 5-0ಯಿಂದ ಮಣಿಸುವ ಮೂಲಕ ಪ್ರಶಸ್ತಿಯನ್ನು ಪಡೆದಿತ್ತು. ಈ ಬಾರಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಈ ಮಹಾನ್ ಸರಣಿಯಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿ ಆಸ್ಟ್ರೇಲಿಯಾವನ್ನೇ ಗುರುತಿಸಲಾಗುತ್ತಿದೆ.
ತಂಡ ಇಂತಿದೆ: ರಿಕಿ ಪಾಂಟಿಂಗ್, ಮೈಕೆಲ್ ಕ್ಲಾರ್ಕೆ, ಸ್ಟುವರ್ಟ್ ಕ್ಲಾರ್ಕ್, ಬ್ರಾಡ್ ಹಡ್ಡಿನ್, ನಥಾನ್ ಹರ್ಟೀಝ್, ಬೆನ್ ಹಿಲ್‌ಫೆನಾಸ್, ಫಿಲಿಫ್ ಹ್ಯೂಗ್ಸ್, ಮೈಕೆಲ್ ಹಸ್ಸಿ, ಮಿಚ್ಚೆಲ್ ಜಾನ್ಸನ್, ಸೈಮನ್ ಕ್ಯಾಟಿಚ್, ಬ್ರೆಟ್ ಲೀ, ಗ್ರಹಾಮ್ ಮಾನೂ, ಆಂಡ್ರ್ಯೂ ಮೆಕ್‌ಡೊನಾಲ್ಡ್, ಮಾರ್ಕಸ್ ನಾರ್ತ್, ಪೀಟರ್ ಸಿದ್ಲೇ, ಶೇನ್ ವಾಟ್ಸನ್.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು |
| |
|
|
|
|
|
|