ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಬೆಂಗಳೂರು ಪರ ಅತೀ ಹೆಚ್ಚು ಸಿಕ್ಸರ್ ಬಾರಿಸಿದ್ದು ಟೇಲರ್
ಜೋಹಾನ್ಸ್‌ಬರ್ಗ್, ಬುಧವಾರ, 20 ಮೇ 2009   ( 13:17 IST )
ವೀರೇಂದ್ರ ಸೆಹ್ವಾಗ್ ನಾಯಕತ್ವದ ಡೆಲ್ಲಿ ಡೇರ್‌ಡೆವಿಲ್ಸ್‌ನ್ನು ಏಳು ವಿಕೆಟ್‌ಗಳಿಂದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮಣಿಸಿದ ಈ ಪಂದ್ಯದಲ್ಲಿ ದಾಖಲಾದ ಕೆಲವು ಅಂಕಿ ಅಂಶಗಳಿವು.

- 12 ಎಸೆತಗಳಿಂದ 25 ರನ್ ದಾಖಲಿಸಿದ ರೋಸ್ ಟೇಲರ್ ತನ್ನ ಅಮೋಘ ಇನ್ನಿಂಗ್ಸ್‌ನಲ್ಲಿ ಮೂರು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಐಪಿಎಲ್ 2009ರಲ್ಲಿ ಅವರ ಸಿಕ್ಸರುಗಳ ಸಂಖ್ಯೆ 12. ಇದು ಬೆಂಗಳೂರು ಪರ ಈ ವರ್ಷ ದಾಖಲಾದ ಅತೀ ಹೆಚ್ಚಿನ ಸಿಕ್ಸರ್‌ಗಳು ಕೂಡ ಹೌದು.

- ಟ್ವೆಂಟಿ-20ಯಲ್ಲಿ ರೋಸ್ ಟೇಲರ್‌ ಇದುವರೆಗೆ 66 ಸಿಕ್ಸ್‌ಗಳನ್ನು ಬಾರಿಸಿದ್ದಾರೆ. ಅತೀ ಹೆಚ್ಚು ಸಿಕ್ಸರ್‌ಗಳನ್ನು ದಾಖಲಿಸಿದವರು ಡೇವಿಡ್ ಹಸ್ಸಿ (82), ಬ್ರೆಂಡನ್ ಮೆಕಲಮ್ (72) ಮತ್ತು ಸನತ್ ಜಯಸೂರ್ಯ (67). ಅವರ ನಂತರದ ಸ್ಥಾನ ಟೇಲರ್‌ರದ್ದು.

- ವೀರೇಂದ್ರ ಸೆಹ್ವಾಗ್ 2009ರ ಐಪಿಎಲ್‌ನಲ್ಲಿ ಮೊತ್ತ ಮೊದಲ ಬಾರಿಗೆ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ್ದಾರೆ. ಒಟ್ಟಾರೆ ಐಪಿಎಲ್‌ನಲ್ಲಿ ಇವರದ್ದು ಇದು ಮೂರನೇ ಶೂನ್ಯ ಸಂಪಾದನೆ. ಐಪಿಎಲ್ 2009ರಲ್ಲಿ 9 ಪಂದ್ಯಗಳನ್ನಾಡಿರುವ ಸೆಹ್ವಾಗ್ 13.62ರ ಸರಾಸರಿಯಲ್ಲಿ 109 ರನ್‌ಗಳನ್ನಷ್ಟೇ ದಾಖಲಿಸಿದ್ದಾರೆ.

- ರಾಹುಲ್ ದ್ರಾವಿಡ್ ಮತ್ತು ಜಾಕ್ವಾಸ್ ಕ್ಯಾಲಿಸ್ 70 ರನ್ನುಗಳ ಜತೆಯಾಟ ನೀಡುವ ಮೂಲಕ ದೆಹಲಿ ವಿರುದ್ಧ ಬೆಂಗಳೂರು ಎರಡನೇ ವಿಕೆಟಿಗೆ ಗರಿಷ್ಠ ಪಾಲುದಾರಿಕೆ ನೀಡಿದ ದಾಖಲೆ ಬರೆದಿದೆ. ಕಳೆದ ವರ್ಷ ವಾಸಿಮ್ ಜಾಫರ್ ಮತ್ತು ರೋಸ್ ಟೇಲರ್ ಎರಡನೇ ವಿಕೆಟಿಗೆ ದೆಹಲಿ ವಿರುದ್ದ 40 ರನ್ ದಾಖಲಿಸಿದ್ದು ಇದುವರೆಗಿನ ಗರಿಷ್ಠ ಮೊತ್ತವಾಗಿತ್ತು.

- ಪ್ರವೀಣ್ ಕುಮಾರ್ 30ಕ್ಕೆ 3 ವಿಕೆಟ್ ಪಡೆಯುವ ಮೂಲಕ ಐಪಿಎಲ್ 2009ರಲ್ಲಿ ಅತ್ಯುತ್ತಮ ವೈಯಕ್ತಿಕ ಪ್ರದರ್ಶನ ದಾಖಲಿಸಿದ್ದಾರೆ. ಈ ಪಂದ್ಯದ ಮೊದಲ ಓವರಿನಲ್ಲೇ ಅವರು ಎರಡು ವಿಕೆಟ್ ಕಿತ್ತಿದ್ದರು.

- ಅನಿಲ್ ಕುಂಬ್ಳೆಯವರು 13 ಪಂದ್ಯಗಳಿಂದ 18.53 ರನ್ ಸರಾಸರಿಯಲ್ಲಿ 15 ವಿಕೆಟ್ ಪಡೆದಿದ್ದು, ಐಪಿಎಲ್ ದ್ವಿತೀಯ ಆವೃತ್ತಿಯಲ್ಲಿ ಬೆಂಗಳೂರು ತಂಡದ ಶ್ರೇಷ್ಠ ಪ್ರದರ್ಶನವಾಗಿ ದಾಖಲಾಗಿದೆ.

- ಐಪಿಎಲ್ 2009ರಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ 300 ರನ್ ಮಾಡಿದ ಮೊದಲ ದಾಂಡಿಗ ಜಾಕ್ವಾಸ್ ಕ್ಯಾಲಿಸ್. ಅವರು 12 ಪಂದ್ಯಗಳಿಂದ ಮೂರು ಅರ್ಧಶತಕಗಳ ಸಹಿತ 33.20ರ ಸರಾಸರಿಯಲ್ಲಿ 332 ರನ್ ಮಾಡಿದ್ದಾರೆ.

- ಕ್ಯಾಲಿಸ್ ಆಲ್-ರೌಂಡರ್ ಪ್ರದರ್ಶನ ನೀಡುವ ಮೂಲಕ ಐಪಿಎಲ್‌ನಲ್ಲಿ ಎರಡನೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

- ಡೆಲ್ಲಿ ಡೇರ್‌ಡೆವಿಲ್ಸನ್ನು ಐಪಿಎಲ್‌ನಲ್ಲಿ ನಾಲ್ಕು ಬಾರಿ ಮುಖಾಮುಖಿಯಾದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮೊದಲ ಜಯವನ್ನು ದಾಖಲಿಸಿತು. ಮೊದಲ ಪಂದ್ಯವನ್ನು ನವದೆಹಲಿಯಲ್ಲಿ 10 ರನ್‌ಗಳಿಂದ, ಎರಡನೇ ಪಂದ್ಯವನ್ನು ಬೆಂಗಳೂರಿನಲ್ಲಿ 5 ವಿಕೆಟುಗಳಿಂದ ಹಾಗೂ ಮೂರನೇ ಪಂದ್ಯವನ್ನು ಪೋರ್ಟ್ ಎಲಿಜಬೆತ್‌ನಲ್ಲಿ 6 ವಿಕೆಟುಗಳಿಂದ ಡೆಲ್ಲಿ ಡೇರ್‌ಡೆವಿಲ್ಸ್ ಗೆದ್ದುಕೊಂಡಿತ್ತು.

- ಏಳು ವಿಕೆಟುಗಳ ಅಂತರದಿಂದ ಜಯ ಸಾಧಿಸಿದ ಬೆಂಗಳೂರು ಐಪಿಎಲ್ ದ್ವಿತೀಯ ಆವೃತ್ತಿಯಲ್ಲಿ ಆಡಿದ 13 ಪಂದ್ಯಗಳಲ್ಲಿ ಏಳನ್ನು ಜಯಿಸಿದೆ.

- ಡೆಲ್ಲಿ ಡೇರ್‌ಡೆವಿಲ್ಸ್ (134/7) ಈ ಪಂದ್ಯದಲ್ಲಿ ಬೆಂಗಳೂರು ವಿರುದ್ಧ ಇದುವರೆಗಿನ ಅತೀ ಕಡಿಮೆ ಮೊತ್ತ ದಾಖಲಿಸಿತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಡೆವಿಲ್ಸ್ ತಂಡವನ್ನು ಬಗ್ಗುಬಡಿದ ಚಾಲೆಂಜರ್ಸ್
ಕೊಲ್ಕತ್ತಾಕ್ಕೆ ಸೋತಿದ್ದರಿಂದ ಸಮಸ್ಯೆಯಾಗಿಲ್ಲ: ಫ್ಲೆಮಿಂಗ್
ಸಾನಿಯಾ, ಸೋಮದೇವ್, ಪ್ರಕಾಶ್ ರ‌್ಯಾಂಕಿಂಗ್ ಏರಿಕೆ
ಈ ಬಾರಿಯ ಅತಿ ವೇಗದ ಅರ್ಧಶತಕ ಮೆಕಲಮ್‌ರದ್ದು
ಮಿತಿ ಮೀರಿದ ಕ್ರಿಕೆಟ್‌ನಿಂದ ಒತ್ತಡ ಹೆಚ್ಚುತ್ತಿದೆ: ಗೇಲ್
ಐಸಿಸಿಗೆ ಮತ್ತೊಂದು ನೊಟೀಸ್ ನೀಡಲು ಪಾಕ್ ನಿರ್ಧಾರ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ದೇವೇಗೌಡರ 77ನೇ ಹುಟ್ಟು ಹಬ್ಬ ಆಚರಣೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ..
ಜೆಡಿಎಸ್ ಕಾಂಗ್ರೆಸ್ ಜತೆ ವಿಲೀನವಾಗಲಿ: ಡಿವಿಎಸ್
ರಾಜ್ಯವನ್ನು ನಿರ್ಲಕ್ಷಿಸಿದರೆ ಎಚ್ಚರ!: ಯುಪಿಎಗೆ ಸವಾಲ್
ಮನರಂಜನೆ
ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು
ಮುಂದೆ ಓದಿ|ಮತ್ತಷ್ಟು...