ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಡೆವಿಲ್ಸ್ ತಂಡವನ್ನು ಬಗ್ಗುಬಡಿದ ಚಾಲೆಂಜರ್ಸ್
ಜೋಹಾನ್ಸ್‌ಬರ್ಗ್, 20 ಮೇ 2009   ( 10:03 IST )
ದಕ್ಷಿಣ ಆಫ್ರಿಕಾದ ಆಟಗಾರ ಜಾಕ್ವೆಸ್ ಕಾಲಿಸ್ ಔಟಾಗದ ಅರ್ಧಶತಕದ ನೆರವಿನಿಂದ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡ ಡೆಲ್ಲಿ ಡೇರ್ ಡೇರ್‌ಡೆವಿಲ್ಸ್ ವಿರುದ್ಧ ಏಳು ವಿಕೆಟ್ ಗೆಲುವು ಗಳಿಸಿದ್ದು, ಐಪಿಎಲ್‌ ಎರಡನೇ ಆವೃತ್ತಿಯಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿದೆ. ಕ್ಯಾಲಿಸ್ ಎರಡು ಬೌಂಡರಿಗಳು ಮತ್ತು 2 ಸಿಕ್ಸರುಗಳ ಮ‌ೂಲಕ 56 ಚೆಂಡುಗಳಿಂದ 58 ರನ್ ಬಾರಿಸಿ 13 ಪಂದ್ಯಗಳಲ್ಲಿ 7 ನೇ ಜಯವನ್ನು ಬೆಂಗಳೂರಿಗೆ ತಂದಿತ್ತರು.

ಕ್ಯಾಲಿಸ್ ಮೊದಲಿಗೆ ರಾಹುಲ್ ದ್ರಾವಿಡ್ ಜತೆಗೆ 70 ರನ್ ಜತೆಯಾಟದ ಬಳಿಕ ರೋಸ್ ಟೇಲರ್ ಜತೆಗೆ 14 ಚೆಂಡುಗಳಲ್ಲಿ 29 ರನ್ ಜತೆಯಾಟವಾಗಿ ಇನ್ನೂ ಒಂದು ಓವರು ಬಾಕಿಯಿರುವಂತೆ ಗೆಲುವಿನ ಗಡಿ ದಾಟಿದರು. ಬೆಂಗಳೂರು ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದ್ದು, ಸೆಮಿಫೈನಲ್ ಖಾತರಿಗೆ ಮೇ 21ರಂದು ನಡೆಯುವ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಪಂದ್ಯವನ್ನು ಗೆಲ್ಲಬೇಕಾಗಿದೆ.

ರಾಬಿನ್ ಉತ್ತಪ್ಪ ತಮ್ಮ ಕಳಪೆ ಬ್ಯಾಟಿಂಗ್ ಮುಂದುವರಿಸಿ ಒಂದು ರನ್‌ಗೆ ಔಟಾದ ಬಳಿಕ ಕ್ಯಾಲಿಸ್ ಮತ್ತು ದ್ರಾವಿಡ್ ಬೆಂಗಳೂರು ಇನ್ನಿಂಗ್ಸ್‌ನಲ್ಲಿ ಸ್ಥಿರತೆ ಮ‌ೂಡಿಸಿದರು.5ನೇ ಓವರಿನ ಕೊನೆಯಲ್ಲಿ 1 ವಿಕೆಟ್‌ಗೆ 19 ರನ್ ಗಳಿಸಿದ್ದ ಬೆಂಗಳೂರಿನ ತಂಡದಲ್ಲಿ ಕ್ಯಾಲಿಸ್ ಮತ್ತು ದ್ರಾವಿಡ್ ಸ್ಟ್ರಾಟೆಜಿ ಬ್ರೇಕ್‌ನಲ್ಲಿ ಒಂದು ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿದ್ದರು. ಬಳಿಕ ದ್ರಾವಿಡ್ ಕ್ಯಾಚಿತ್ತು ಔಟಾದ ಬಳಿಕ ಟೇಲರ್ ಬ್ಯಾಟಿಂಗ್ ಆರಂಭಿಸಿ ಸಾಲ್ವಿ ಚೆಂಡಿನಲ್ಲಿ ಸತತವಾಗಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿ ತಮ್ಮ ಆಕ್ರಮಣಕಾರಿ ಪ್ರವೃತ್ತಿಯನ್ನು ತೋರಿಸಿದರು. ಮುಂದಿನ ಓವರಿನಲ್ಲಿ ಯೋಗೇಶ್‌ರ ಎರಡು ಚೆಂಡಿನಲ್ಲಿ ಎರಡು ಸಿಕ್ಸರುಗಳನ್ನು ಬಾರಿಸಿ ಟೇಲರ್ ಬೆಂಗಳೂರು ತಂಡದ ಮೇಲಿದ್ದ ಒತ್ತಡ ತಗ್ಗಿಸಿದರು.

ಯೋಗೇಶ್‌ರ ಮೂರನೇ ಚೆಂಡಿನಲ್ಲಿ ಇನ್ನೊಂದು ಸಿಕ್ಸರ್ ಬಾರಿಸಲು ಯತ್ನಿಸಿ ವೆಟ್ಟೋರಿಗೆ ಕ್ಯಾಚಿತ್ತು ಔಟಾದರು. ಬೆಂಗಳೂರಿಗೆ ಕೊನೆಯ ಐದು ಓವರಿನಲ್ಲಿ 33 ರನ್ ಅಗತ್ಯವಿದ್ದು, ನಾಲ್ಕು ಓವರುಗಳಲ್ಲೇ ಗೆಲುವಿನ ಗುರಿ ಮುಟ್ಟಿದರು.ಅದಕ್ಕೆ ಮುನ್ನ, ಬೆಂಗಳೂರು ಬೌಲರುಗಳು ಉತ್ತಮ ಬೌಲಿಂಗ್‌ನಿಂದ ಡೆಲ್ಲಿಯನ್ನು 134 ರನ್‌ಗೆ ಔಟ್ ಮಾಡಿದರು. ದಿನೇಶ್ ಕಾರ್ತಿಕ್ 31 ರನ್ ಮತ್ತು ಡಿ ವಿಲಿಯರ್ಸ್ ಕ್ರಮವಾಗಿ 28 ಮತ್ತು 27 ರನ್ ಕೊಡುಗೆ ನೀಡಿದರು. ಪ್ರವೀಣ್ ಕುಮಾರ್ 30 ರನ್‌ಗಳಿಗೆ 3 ವಿಕೆಟ್ ಪಡೆದಿದ್ದರೆ ನಾಯಕ ಅನಿಲ್ ಕುಂಬ್ಳೆ ವಿಕೆಟ್ ಕಬಳಿಸಿದರು.

ತಮ್ಮ 9 ಪಂದ್ಯಗಳಿಂದ 109 ರನ್ ಬಾರಿಸಿರುವ ಸೆಹ್ವಾಗ್ ಇನ್ನಿಂಗ್ಸ್ ಮ‌ೂರನೇ ಚೆಂಡಿನಲ್ಲಿ ರೋಸ್ ಟೇಲರ್‌ಗೆ ಕ್ಯಾಚಿತ್ತು ಔಟಾದರು. ಎರಡು ಚೆಂಡುಗಳ ನಂತರ ಮನಾಸ್ ಪ್ರವೀಣ್ ಬೌನ್ಸರ್‌ನಿಂದ ಕ್ಯಾಲಿಸ್‌ಗೆ ಕ್ಯಾಚಿತ್ತು ಔಟಾದರು. ಗಂಭೀರ್ ಒಳ್ಳೆಯ ಸ್ಕೋರ್ ಬಾರಿಸುವರೆಂದು ಭಾವಿಸಿದ್ದಾಗಲೇ ಕ್ಯಾಲಿಸ್ ಚೆಂಡಿನಲ್ಲಿ ಕೆಟ್ಟ ಹೊಡೆತಕ್ಕೆ ಬಲಿಯಾದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬೆಂಗಳೂರು ಪರ ಅತೀ ಹೆಚ್ಚು ಸಿಕ್ಸರ್ ಬಾರಿಸಿದ್ದು ಟೇಲರ್
ಕೊಲ್ಕತ್ತಾಕ್ಕೆ ಸೋತಿದ್ದರಿಂದ ಸಮಸ್ಯೆಯಾಗಿಲ್ಲ: ಫ್ಲೆಮಿಂಗ್
ಸಾನಿಯಾ, ಸೋಮದೇವ್, ಪ್ರಕಾಶ್ ರ‌್ಯಾಂಕಿಂಗ್ ಏರಿಕೆ
ಈ ಬಾರಿಯ ಅತಿ ವೇಗದ ಅರ್ಧಶತಕ ಮೆಕಲಮ್‌ರದ್ದು
ಮಿತಿ ಮೀರಿದ ಕ್ರಿಕೆಟ್‌ನಿಂದ ಒತ್ತಡ ಹೆಚ್ಚುತ್ತಿದೆ: ಗೇಲ್
ಐಸಿಸಿಗೆ ಮತ್ತೊಂದು ನೊಟೀಸ್ ನೀಡಲು ಪಾಕ್ ನಿರ್ಧಾರ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ದೇವೇಗೌಡರ 77ನೇ ಹುಟ್ಟು ಹಬ್ಬ ಆಚರಣೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ..
ಜೆಡಿಎಸ್ ಕಾಂಗ್ರೆಸ್ ಜತೆ ವಿಲೀನವಾಗಲಿ: ಡಿವಿಎಸ್
ರಾಜ್ಯವನ್ನು ನಿರ್ಲಕ್ಷಿಸಿದರೆ ಎಚ್ಚರ!: ಯುಪಿಎಗೆ ಸವಾಲ್
ಮನರಂಜನೆ
ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು
ಮುಂದೆ ಓದಿ|ಮತ್ತಷ್ಟು...