ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಕೊಲ್ಕತ್ತಾಕ್ಕೆ ಸೋತಿದ್ದರಿಂದ ಸಮಸ್ಯೆಯಾಗಿಲ್ಲ: ಫ್ಲೆಮಿಂಗ್
ಸೆಂಚೂರಿಯನ್, ಮಂಗಳವಾರ, 19 ಮೇ 2009   ( 18:39 IST )
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋಲುಂಡಿರುವುದರಿಂದ ಸೆಮಿಫೈನಲ್ ಅವಕಾಶಗಳಿಗೆ ಧಕ್ಕೆಯಾಗಿಲ್ಲ ಎಂದಿರುವ ತರಬೇತುದಾರ ಸ್ಟೀಫನ್ ಫ್ಲೆಮಿಂಗ್, ಈ ತಡೆಯಿಂದಾಗಿ ಆಟಗಾರರು ಎಚ್ಚೆತ್ತುಕೊಳ್ಳಲು ಸಹಾಯಕವಾಗಿದೆ ಎಂದಿದ್ದಾರೆ.

"ನಾವೀಗಲೂ ಉತ್ತಮ ಹಂತದಲ್ಲೇ ಇದ್ದೇವೆ" ಎಂದಿರುವ ಫ್ಲೆಮಿಂಗ್ ಅಂಕಪಟ್ಟಿಯತ್ತ ಬೊಟ್ಟು ಮಾಡುತ್ತಾ ನಮ್ಮ ವಿರುದ್ಧವಿದ್ದ ಪರಿಸ್ಥಿತಿಯನ್ನು ನಾವು ಹಲವು ಬಾರಿ ಬದಲಿಸಿದ್ದೇವೆ ಎಂದು ತಿಳಿಸಿದರು.

"ತಂಡದ ನಿರ್ವಹಣೆ ಬಗ್ಗೆ ನಮ್ಮಲ್ಲಿ ವೈಯಕ್ತಿಕವಾಗಿಯೂ ಅಭಿಮಾನವಿದೆ. ಹಾಗಾಗಿ ಈ ಪಂದ್ಯವನ್ನೂ ಗೆದ್ದು ಅಂಕಪಟ್ಟಿಯಲ್ಲಿ ಮೇಲೇರುವ ಮೂಲಕ ಸೆಮಿಫೈನಲ್ ಪ್ರವೇಶಿಸಲಿದ್ದೇವೆ. ನಮ್ಮದೀಗ ಆರೋಗ್ಯಕರ ಸ್ಥಾನ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆದರೂ ಕಳೆದ ರಾತ್ರಿಗೂ ಮೊದಲು ಸತತ ಎಂಟು ಸೋಲುಗಳನ್ನುಂಡಿದ್ದ ತಂಡದೆದುರು ಸೋತಿರುವುದು ನಿರಾಸೆ ತಂದಿದೆ ಎಂದು ಫ್ಲೆಮಿಂಗ್ ತಿಳಿಸಿದ್ದು, ನಾವಿದನ್ನು ಹಗುರವಾಗಿ ಪರಿಗಣಿಸುತ್ತಿಲ್ಲ ಎಂದರು.

ಅವರು ಕಳೆದುಕೊಳ್ಳಲು ಏನೂ ಉಳಿಯದಿರುವುದರಿಂದ ಅಪಾಯಕಾರಿ ಹಂತವನ್ನು ತಲುಪಬಹುದು ಎಂಬುದನ್ನು ನಾವು ಊಹಿಸಿದ್ದೆವು. ಹಾಗಾಗಿ ನಮಗೆ ದೊಡ್ಡ ಮಟ್ಟದಲ್ಲೇ ನಿರಾಸೆಯಾಗಿದೆ. ನಮ್ಮ ಯೋಜನೆಗಳನ್ನು ಸರಿಯಾದ ಸಂದರ್ಭದಲ್ಲಿ ಜಾರಿ ಮಾಡಲು ಸಾಧ್ಯವಾಗಲಿಲ್ಲ. ಎದುರಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಚೆಂಡಿನಿಂದ ಏನನ್ನೂ ನಮ್ಮಿಂದ ಮಾಡಲಾಗಲಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.

"ಇಲ್ಲಿ ನಿರಾಸೆಯಾಗಿದೆ. ಆದರೆ ಇದರಿಂದ ಸೆಮಿಫೈನಲ್‌ಗೆ ಲಗ್ಗೆ ಹಾಕಲು ನಮಗೆ ಸಹಾಯವಾಗಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ನಾವು ಗೆಲುವು ಸಾಧಿಸುತ್ತಿದ್ದರೆ ನಮ್ಮ ಆಟಗಾರರು ಬಹುಶಃ ಸಮಾಧಾನ ಹೊಂದುತ್ತಿದ್ದರು. ಹೀಗಾಗಿರುವುದರಿಂದ ಅವರಲ್ಲಿನ ಗೆಲುವಿನ ಹಸಿವು ಹೆಚ್ಚಬಹುದು" ಎಂದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸಾನಿಯಾ, ಸೋಮದೇವ್, ಪ್ರಕಾಶ್ ರ‌್ಯಾಂಕಿಂಗ್ ಏರಿಕೆ
ಈ ಬಾರಿಯ ಅತಿ ವೇಗದ ಅರ್ಧಶತಕ ಮೆಕಲಮ್‌ರದ್ದು
ಮಿತಿ ಮೀರಿದ ಕ್ರಿಕೆಟ್‌ನಿಂದ ಒತ್ತಡ ಹೆಚ್ಚುತ್ತಿದೆ: ಗೇಲ್
ಐಸಿಸಿಗೆ ಮತ್ತೊಂದು ನೊಟೀಸ್ ನೀಡಲು ಪಾಕ್ ನಿರ್ಧಾರ
ಅತಿ ಕೆಟ್ಟ ಬೌಲಿಂಗ್‌ನಿಂದ ನಮಗೆ ಸೋಲಾಯಿತು‌: ಧೋನಿ
ಅಬ್ಬರಿಸಿದ ನೈಟ್ ರೈಡರ್ಸ್‌ಗೆ ಮಣಿದ ಚೆನ್ನೈ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ದೇವೇಗೌಡರ 77ನೇ ಹುಟ್ಟು ಹಬ್ಬ ಆಚರಣೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ..
ಜೆಡಿಎಸ್ ಕಾಂಗ್ರೆಸ್ ಜತೆ ವಿಲೀನವಾಗಲಿ: ಡಿವಿಎಸ್
ರಾಜ್ಯವನ್ನು ನಿರ್ಲಕ್ಷಿಸಿದರೆ ಎಚ್ಚರ!: ಯುಪಿಎಗೆ ಸವಾಲ್
ಮನರಂಜನೆ
ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು
ಮುಂದೆ ಓದಿ|ಮತ್ತಷ್ಟು...