|
| ಸಾನಿಯಾ, ಸೋಮದೇವ್, ಪ್ರಕಾಶ್ ರ‌್ಯಾಂಕಿಂಗ್ ಏರಿಕೆ |
| ನವದೆಹಲಿ, ಮಂಗಳವಾರ, 19 ಮೇ 2009 ( 18:36 IST ) | |
ಎಟಿಪಿ ಸಿಂಗಲ್ಸ್ ರ‌್ಯಾಂಕಿಂಗ್‌ನಲ್ಲಿ ಸೋಮದೇವ್ ದೇವರ್‌ಮನ್ 138 ಹಾಗೂ ಪ್ರಕಾಶ್ ಅಮೃತರಾಜ್ 163ನೇ ಸ್ಥಾನಕ್ಕೇರಿದ್ದಾರೆ. ಅದೇ ಹೊತ್ತಿಗೆ ಡಬಲ್ಸ್ ಪಟ್ಟಿಯಲ್ಲಿ ಸಾನಿಯಾ ಮಿರ್ಜಾ 18 ಸ್ಥಾನಗಳ ಏರಿಕೆ ಕಂಡಿದ್ದು 42ನೇ ಸ್ಥಾನ ಪಡೆದುಕೊಂಡಿದ್ದಾರೆ.
ಸೋಮದೇವ್ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರದರ್ಶನ ನೀಡದ ಹೊರತಾಗಿಯೂ ರ‌್ಯಾಂಕಿಂಗ್‌ನಲ್ಲಿ ಮೇಲೇರುತ್ತಿದ್ದಾರೆ. 140ನೇ ಸ್ಥಾನದಲ್ಲಿದ್ದ ಅವರು ಎರಡು ಸ್ಥಾನಗಳ ಏರಿಕೆ ಕಂಡಿದ್ದು ಜೀವನ ಶ್ರೇಷ್ಠ 138ನೇ ಸ್ಥಾನ ತಲುಪಿದ್ದಾರೆ. ಪ್ರಕಾಶ್ ಅಮೃತರಾಜ್ 163ನೇ ಸ್ಥಾನದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
ಕಳೆದ ತಿಂಗಳು ಎರಡೆರಡು ಐಟಿಎಫ್ ಪ್ರಶಸ್ತಿ ಪಡೆದಿದ್ದ ಯೂಕಿ ಭಾಂಬ್ರಿ ಎಟಿಪಿ ಸಿಂಗಲ್ಸ್ ರ‌್ಯಾಂಕಿಂಗ್‌ನಲ್ಲಿ 664ನೇ ಸ್ಥಾನದಿಂದ 640ಕ್ಕೇರಿದ್ದಾರೆ. ಮತ್ತೋರ್ವ ಪ್ರತಿಭಾವಂತ ಆಟಗಾರ ವಿಷ್ಣುವರ್ದನ್ ಕೂಡ ಏರಿಕೆ ಕಂಡಿದ್ದು 605ನೇ ಸ್ಥಾನ ತಲುಪಿದ್ದಾರೆ.
ಡಬ್ಲ್ಯೂಟಿಎ ಡಬಲ್ಸ್ ವಿಭಾಗದ ರ‌್ಯಾಂಕಿಂಗ್ ಪಟ್ಟಿಯಲ್ಲಿ ಸಾನಿಯಾ 18 ಸ್ಥಾನಗಳ ಏರಿಕೆ ಕಂಡಿದ್ದಾರೆ. ಈ ಹಿಂದೆ 60ನೇ ಸ್ಥಾನದಲ್ಲಿದ್ದ ಅವರೀಗ 42ನೇ ಸ್ಥಾನದಲ್ಲಿದ್ದಾರೆ. ಕಳೆದ ವಾರದ ಮ್ಯಾಡ್ರಿಡ್ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು ಸಾನಿಯಾಗೆ ರ‌್ಯಾಂಕಿಂಗ್‌ನಲ್ಲಿ ಲಾಭ ತಂದಿದೆ. ಇವರ ಸಿಂಗಲ್ಸ್ ರ‌್ಯಾಂಕಿಂಗ್‌ನಲ್ಲಿ (91) ಯಾವುದೇ ಬದಲಾವಣೆಗಳಾಗಿಲ್ಲ.
ಇತ್ತೀಚೆಗೆ ಎಟಿಪಿ ಚಾಲೆಂಜರ್ಸ್ ವಲಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಹರ್ಷ ಮಂಕಡ್ ಮತ್ತು ಪ್ರಕಾಶ್ ಅಮೃತರಾಜ್ ಡಬಲ್ಸ್ ರ‌್ಯಾಂಕಿಂಗ್ ಪಟ್ಟಿಯಲ್ಲಿ ಏರಿಕೆ ಕಂಡಿದ್ದಾರೆ. ಅವರು ಕ್ರಮವಾಗಿ 136 ಮತ್ತು 150ನೇ ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಮತ್ತೋರ್ವ ಭಾರತೀಯ ಅಶುತೋಷ್ ಸಿಂಗ್ ಐದು ಸ್ಥಾನಗಳನ್ನು ಕಳೆದುಕೊಂಡು 158ನೇ ಸ್ಥಾನದಲ್ಲಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು |
| |
|
|
|
|
|
|