|
| ಈ ಬಾರಿಯ ಅತಿ ವೇಗದ ಅರ್ಧಶತಕ ಮೆಕಲಮ್‌ರದ್ದು |
| ಸೆಂಚೂರಿಯನ್, ಮಂಗಳವಾರ, 19 ಮೇ 2009 ( 18:05 IST ) | |
ಇಂಡಿಯನ್ ಪ್ರೀಮಿಯರ್ ಲೀಗ್ 51ನೇ ಪಂದ್ಯದಲ್ಲಿ ಮುಖಾಮುಖಿಯಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ಮುಖ್ಯಾಂಶಗಳು.
- ಸುರೇಶ್ ರೈನಾ 37 ಎಸೆತಗಳಿಂದ 52 ರನ್ ಗಳಿಸುವ ಮೂಲಕ ಐಪಿಎಲ್ ದ್ವಿತೀಯ ಆವೃತ್ತಿಯಲ್ಲಿ ಎರಡನೇ ಅರ್ಧಶತಕ ದಾಖಲಿಸಿದರು.
- ಈ ಅಮೋಘ ಇನ್ನಿಂಗ್ಸ್‌ನೊಂದಿಗೆ ಸುರೇಶ್ ರೈನಾ 800 ರನ್ ಪೂರ್ಣಗೊಳಿಸಿದ್ದಾರೆ. ಅವರೀಗ 28 ಪಂದ್ಯಗಳಿಂದ 35.43ರ ಸರಾಸರಿಯಲ್ಲಿ ಐದು ಅರ್ಧಶತಕಗಚಳ ಸಹಿತ 815 ರನ್ ದಾಖಲಿಸಿದ ದಾಂಡಿಗ.
- ಐಪಿಎಲ್‌ನಲ್ಲಿ 700 ರನ್ ದಾಖಲಿಸಿದ ಮೊದಲ ನಾಯಕ ಮಹೇಂದ್ರ ಸಿಂಗ್ ಧೋನಿ. ಅವರು 25 ಇನ್ನಿಂಗ್ಸ್‌ಗಳಿಂದ ನಾಲ್ಕು ಅರ್ಧಶತಕಗಳ ಸಹಿತ 44.75ರ ಸರಾಸರಿಯಲ್ಲಿ 716 ರನ್ ದಾಖಲಿಸಿದ್ದಾರೆ.
- ಧೋನಿ ಐಪಿಎಲ್ ದ್ವಿತೀಯ ಆವೃತ್ತಿಯಲ್ಲಿ 300 ರನ್ ಪೂರ್ಣಗೊಳಿಸಿದ್ದಾರೆ. ಎರಡು ಅರ್ಧಶತಕಗಳೊಂದಿಗೆ 50.33ರ ಸರಾಸರಿಯಲ್ಲಿ 11 ಪಂದ್ಯಗಳಿಂದ ಅವರೀಗ 302 ರನ್‌ಗಳ ಸರದಾರ.
- ಬ್ರೆಂಡನ್ ಮೆಕಲಮ್ 21 ಎಸೆತಗಳಿಂದ ಅರ್ಧಶತಕ ದಾಖಲಿಸುವ ಮೂಲಕ 2009ರ ಐಪಿಎಲ್‌ನಲ್ಲಿನ ಅತಿ ವೇಗದ ಅರ್ಧಶತಕ ಎಂಬ ದಾಖಲೆ ನಿರ್ಮಿಸಿದ್ದಾರೆ.
- ಕಳೆದ ವರ್ಷ ಹೈದರಾಬಾದ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ರಾಜಸ್ತಾನ ರಾಯಲ್ಸ್‌ನ ಯೂಸುಫ್ ಪಠಾಣ್ 21 ಎಸೆತಗಳಿಂದ ಅರ್ಧಶತಕ ಮಾಡಿದ್ದ ದಾಖಲೆಯನ್ನೀಗ ಎರಡನೇ ಆವೃತ್ತಿಯಲ್ಲಿ ಮೆಕಲಮ್ ಸರಿಗಟ್ಟಿದ್ದಾರೆ.
- ಬ್ರಾಡ್ ಹಾಡ್ಜ್ 44 ಎಸೆತಗಳಿಂದ 71 ರನ್ ಮಾಡುವ ಮೂಲಕ ಐಪಿಎಲ್ 2009ರಲ್ಲಿ ಮೂರನೇ ಅರ್ಧಶತಕ ದಾಖಲಿಸಿದರು. ಕಳೆದ ಪಂದ್ಯದಲ್ಲಿ ಅವರು ತನ್ನ ಮೊದಲ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
- ಕೊಲ್ಕತ್ತಾ ನೈಟ್ ರೈಡರ್ಸ್ ಆಡಿದ 13 ಪಂದ್ಯಗಳಲ್ಲಿ ಎರಡನೇ ಜಯ ದಾಖಲಿಸಿತು.
- ಐಪಿಎಲ್ 2009ರಲ್ಲಿ 189 ರನ್ ದಾಖಲಿಸುವ ಮೂಲಕ ಕೊಲ್ಕತ್ತಾ ಅತೀ ಹೆಚ್ಚಿನ ಜಯದ ಗುರಿಯನ್ನು ತಲುಪಿದೆ. ಇದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊಲ್ಕತ್ತಾ ದಾಖಲಿಸಿದ ಗರಿಷ್ಠ ಮೊತ್ತವೂ ಹೌದು.
- ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ದಾಖಲಿಸಿದ 188/3 ಕಳೆದ ಮೂರು ಪಂದ್ಯಗಳಲ್ಲಿ ಮುಖಾಮುಖಿಯಾದದ್ದಕ್ಕಿಂದ ಹೆಚ್ಚಿನ ಮೊತ್ತ.
- ಈ ಪಂದ್ಯದಲ್ಲಿ ಒಟ್ಟು ಆರು ವಿಕೆಟ್ ನಷ್ಟಕ್ಕೆ 40 ಓವರುಗಳಿಂದ 377 ರನ್ ಹರಿದು ಬಂದಿದೆ. ಇದು 2009ರ ಐಪಿಎಲ್‌ನಲ್ಲಿ ಯಾವುದೇ ಪಂದ್ಯಗಳಲ್ಲಿ ದಾಖಲಾದ ಒಟ್ಟು ಮೊತ್ತಕ್ಕಿಂತ ಹೆಚ್ಚಿನದು.
- ಐಪಿಎಲ್ ದ್ವಿತೀಯ ಆವೃತ್ತಿಯಲ್ಲಿ ಆಡಿದ 13 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದು ಪಂದ್ಯಗಳನ್ನು ಕಳೆದುಕೊಂಡಿತು.
- ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ಆಡಿದ 13 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಸೋತಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು |
| |
|
|
|
|
|
|