ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಮಿತಿ ಮೀರಿದ ಕ್ರಿಕೆಟ್‌ನಿಂದ ಒತ್ತಡ ಹೆಚ್ಚುತ್ತಿದೆ: ಗೇಲ್
ಚೆಸ್ಟರ್ ಲೀ ಸ್ಟ್ರೀಟ್, ಮಂಗಳವಾರ, 19 ಮೇ 2009   ( 18:03 IST )
ಮಿತಿ ಮೀರಿದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದಾಗಿ ನಮ್ಮ ತಂಡದ ಆಟಗಾರರ ಮೇಲೆ ಒತ್ತಡವುಂಟಾಗುತ್ತಿದೆ ಎಂದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಹೀನಾಯವಾಗಿ ಕಳೆದುಕೊಂಡ ವೆಸ್ಟ್‌ಇಂಡೀಸ್ ತಂಡದ ನಾಯಕ ಕ್ರಿಸ್ ಗೇಲ್ ಹೇಳಿದ್ದಾರೆ.

ಮೊದಲ ಟೆಸ್ಟನ್ನು ಲಾರ್ಡ್ಸ್‌ನಲ್ಲಿ 10 ವಿಕೆಟ್‌ಗಳಿಂದ ಹಾಗೂ ಎರಡನೇ ಟೆಸ್ಟನ್ನು ಇನ್ನಿಂಗ್ಸ್ ಮತ್ತು 83 ರನ್ನುಗಳಿಂದ ವಿಂಡೀಸ್ ಕಳೆದುಕೊಂಡಿತ್ತು.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶ್ರೀಲಂಕಾ ರಾಷ್ಟ್ರೀಯ ತಂಡದ ಆಟಗಾರರು ಭಾಗವಹಿಸಿದ ಕಾರಣ ಈ ಸರಣಿಯಿಂದ ಹಿಂದೆ ಸರಿದಿತ್ತು. ಹಾಗಾಗಿ ವೆಸ್ಟ್‌ಇಂಡೀಸ್ ಮತ್ತು ಇಂಗ್ಲೆಂಡ್ ನಡುವೆ ಮಾತ್ರ ಈ ಟೆಸ್ಟ್ ಪಂದ್ಯಗಳು ನಡೆದಿವೆ.

ಆರಂಭಿಕ ಟೆಸ್ಟ್‌ನ ಕೇವಲ ಎರಡು ದಿನಗಳ ಮೊದಲು ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಶ್ರೀಮಂತ ಟ್ವೆಂಟಿ-20 ಲೀಗ್ ಐಪಿಎಲ್‌ನಿಂದ ವಾಪಸಾಗಿದ್ದ ಗೇಲ್ ಬಗ್ಗೆ ಕೋಚ್, ಎದುರಾಳಿ ತಂಡದ ಆಟಗಾರರು ಸೇರಿದಂತೆ ಹಲವರು ಟೀಕಿಸಿದ್ದರು. ಇದಕ್ಕೆಲ್ಲ ಖಾರವಾಗಿ ಪ್ರತಿಕ್ರಿಯಿಸಿದ್ದ ಗೇಲ್, ಟೆಸ್ಟ್ ಕ್ರಿಕೆಟ್ ಅವಸಾನವಾದರೂ ನನಗೇನೂ ಚಿಂತೆಯಿಲ್ಲ ಎಂದು ತಿರುಗೇಟು ನೀಡುವ ಮೂಲಕ ಟೀಕಾಕಾರರ ಬಾಯ್ಮುಚ್ಚಿಸಿದ್ದರು.

ಕೆರೆಬಿಯನ್ ನೆಲದಲ್ಲಿ ಇಂಗ್ಲೆಂಡ್ ಟೆಸ್ಟ್ ಮತ್ತು ಏಕದಿನ ಪ್ರವಾಸವನ್ನು ಏಪ್ರಿಲ್‌ನಲ್ಲಷ್ಟೇ ಮುಗಿಸಿತ್ತು. ಇದೀಗ ಇಂಗ್ಲೆಂಡ್ ಪ್ರವಾಸದಲ್ಲಿರುವ ವಿಂಡೀಸ್ ವಿರಾಮದ ನಂತರ ಗುರುವಾರದಿಂದ ಮೂರು ಏಕದಿನ ಪಂದ್ಯಗಳ ಸರಣಿಯನ್ನೂ ಆಡಲಿದೆ.

ಜೂನ್ ತಿಂಗಳಲ್ಲಿ ಇಂಗ್ಲೆಂಡ್‌ನಲ್ಲೇ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಮುಗಿಸಿ ವೆಸ್ಟ್‌ಇಂಡೀಸ್ ತಂಡ ತವರಿಗೆ ವಾಪಸಾದ ನಂತರ ಭಾರತದ ವಿರುದ್ಧ ನಾಲ್ಕು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ನಂತರ ತಾಯ್ನೆಲದಲ್ಲೇ ಬಾಂಗ್ಲಾದೇಶದ ವಿರುದ್ಧವೂ ಒಂದು ಸರಣಿ ನಿಗದಿಯಾಗಿದೆ.

ಇದರ ಬೆನ್ನಿಗೆ ತಂಡವು ಚಾಂಪಿಯನ್ಸ್ ಟ್ರೋಫಿಗಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಬೇಕು. ಬಳಿಕ ಆಸ್ಟ್ರೇಲಿಯಾದಲ್ಲೂ ಸರಣಿ ನಿಗದಿಯಾಗಿದೆ.

ಈ ಹಿನ್ನಲೆಯಲ್ಲಿ ಆರಂಭಿಕ ಆಟಗಾರ ಗೇಲ್ ಮಾತನಾಡುತ್ತಾ, "ಅತೀ ಹೆಚ್ಚಿನ ಕ್ರಿಕೆಟ್ ಪಂದ್ಯಗಳಿವೆ. ಇದು ನಮ್ಮನ್ನು ದೈಹಿಕವಾಗಿ ಬಳಲಿಸದಿದ್ದರೂ ಮಾನಸಿಕವಾಗಿ ಕುಗ್ಗಿಸುತ್ತದೆ. ಅಲ್ಲದೆ ಇದು ನಿರಂತರವಾಗಿರುತ್ತದೆ" ಎಂದಿದ್ದಾರೆ.

ಮಿತಿ ಮೀರುತ್ತಿರುವ ಕ್ರಿಕೆಟ್‌ನಿಂದಾಗಿ ಆಟಗಾರರಿಗೆ ಹಲವು ರೀತಿಯ ತೊಂದರೆಗಳೆದುರಾಗಬಹುದು. ಅದು ದೈಹಿಕವಾದುದ್ದಕ್ಕಿಂತ ಮಾನಸಿಕವಾಗಿ ಎದುರಾಗುವುದೇ ಹೆಚ್ಚು ಎಂದು ಅವರ ಅಭಿಪ್ರಾಯ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಐಸಿಸಿಗೆ ಮತ್ತೊಂದು ನೊಟೀಸ್ ನೀಡಲು ಪಾಕ್ ನಿರ್ಧಾರ
ಅತಿ ಕೆಟ್ಟ ಬೌಲಿಂಗ್‌ನಿಂದ ನಮಗೆ ಸೋಲಾಯಿತು‌: ಧೋನಿ
ಅಬ್ಬರಿಸಿದ ನೈಟ್ ರೈಡರ್ಸ್‌ಗೆ ಮಣಿದ ಚೆನ್ನೈ
T20 ವಿಶ್ವಕಪ್‌ ಮೊದಲೇ ಭಾರತ-ಪಾಕ್ ಮುಖಾಮುಖಿ
ಸೆಮಿಗೂ ಮೊದಲು ಲಯ ಕಂಡುಕೊಳ್ಳುವೆವು: ಸೆಹ್ವಾಗ್
ಫೆಡರರ್, ಸಫಿನಾ ಮ್ಯಾಡ್ರಿಡ್ ಚಾಂಪಿಯನ್ಸ್
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ದೇವೇಗೌಡರ 77ನೇ ಹುಟ್ಟು ಹಬ್ಬ ಆಚರಣೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ..
ಜೆಡಿಎಸ್ ಕಾಂಗ್ರೆಸ್ ಜತೆ ವಿಲೀನವಾಗಲಿ: ಡಿವಿಎಸ್
ರಾಜ್ಯವನ್ನು ನಿರ್ಲಕ್ಷಿಸಿದರೆ ಎಚ್ಚರ!: ಯುಪಿಎಗೆ ಸವಾಲ್
ಮನರಂಜನೆ
ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು
ಮುಂದೆ ಓದಿ|ಮತ್ತಷ್ಟು...