ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಐಸಿಸಿಗೆ ಮತ್ತೊಂದು ನೊಟೀಸ್ ನೀಡಲು ಪಾಕ್ ನಿರ್ಧಾರ
ಕರಾಚಿ, ಮಂಗಳವಾರ, 19 ಮೇ 2009   ( 18:01 IST )
ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಗೊಳಿಸಿದ ಹೊರತಾಗಿಯೂ 2011ರ ಕ್ರೀಡಾಕೂಟದ ಆತಿಥೇಯ ರಾಷ್ಟ್ರಗಳಲ್ಲೊಂದು ಪಾಕಿಸ್ತಾನ ಎಂದು ಮೊದಲ ನೊಟೀಸಿಗೆ ಪತ್ರ ಮುಖೇನ ಉತ್ತರಿಸಿರುವ ಐಸಿಸಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮತ್ತೊಂದು ನೊಟೀಸ್ ನೀಡಲಿದೆ ಎಂದು ಕಾನೂನು ಸಲಹೆಗಾರ ತಫಾಜುಲ್ ರಿಜ್ವಿ ತಿಳಿಸಿದ್ದಾರೆ.

"ಈ ಸಂಬಂಧ ನಾನು ನಮ್ಮ ವಿದೇಶೀ ವಕೀಲರೊಂದಿಗೆ ಸಮಾಲೋಚನೆ ನಡೆಸಲಿದ್ದೇನೆ. ನಂತರ ತಯಾರಿ ನಡೆಸಿ ಇನ್ನೆರಡು ಅಥವಾ ಮೂರು ದಿನಗಳೊಳಗೆ ಐಸಿಸಿಗೆ ಮತ್ತೊಂದು ನೊಟೀಸ್ ನೀಡಲಿದ್ದೇವೆ" ಎಂದು ರಿಜ್ವಿ ಮಾಹಿತಿ ನೀಡಿದರು.

ಇಂಗ್ಲೆಂಡ್ ಮೂಲದ ಡಿಎಫ್‌ಎಲ್ ಪೈಪರ್ ಎಂಬ ಸಂಸ್ಥೆ ಮೂಲಕ ಕಾನೂನು ಹೋರಾಟ ನಡೆಸುತ್ತಿರುವ ಪಿಸಿಬಿಯ ವಕೀಲ ರಿಜ್ವಿ ಮತ್ತೂ ಮಾತು ಮುಂದುವರಿಸುತ್ತಾ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.

"ಪಾಕಿಸ್ತಾನವು 2011ರ ವಿಶ್ವಕಪ್‌ನ ಜಂಟಿ ಆತಿಥೇಯ ರಾಷ್ಟ್ರವೆಂದು ಐಸಿಸಿ ಒಪ್ಪಿಕೊಂಡದ್ದೇ ಆದಲ್ಲಿ ಇಲ್ಲಿ ಸಾಕಷ್ಟು ಪ್ರಶ್ನೆಗಳು ಮತ್ತು ಕಾನೂನು ವಿಚಾರಗಳಿವೆ" ಎಂದು ಖ್ಯಾತ ವಕೀಲರಾಗಿರುವ ರಿಜ್ವಿ ಲಾಹೋರ್‌ನಿಂದ ಮಾತನಾಡುತ್ತಾ ತಿಳಿಸಿದರು.

"ಪಾಕಿಸ್ತಾನಕ್ಕೆ ಆಹ್ವಾನವಿಲ್ಲದ ಮುಂಬೈಯಲ್ಲಿ ನಡೆದ ವಿಶ್ವಕಪ್ ಸಂಘಟನಾ ಸಮಿತಿ ಸಭೆಗೆ ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೂನ್ ಲಾರ್ಗಟ್ ಹೇಗೆ ಭಾಗವಹಿಸಲು ಒಪ್ಪಿಕೊಂಡಿದ್ದರು ಎಂಬುದು ಕೂಡ ಪ್ರಶ್ನೆಯಾಗುತ್ತದೆ"

"ಸಭೆಗೆ ಪಾಕಿಸ್ತಾನವನ್ನು ಆಹ್ವಾನಿಸಿರದ ಬಗ್ಗೆ ಲಾರ್ಗಟ್ ಯಾಕೆ ಆಕ್ಷೇಪವನ್ನೆತ್ತಲಿಲ್ಲ? ಪಿಸಿಬಿಯನ್ನು ಪ್ರತಿನಿಧಿಸುವ ಯಾರೊಬ್ಬರೂ ಸಭೆಯಲ್ಲಿರದೆ ಇತರ ಮೂರು ಆತಿಥೇಯ ರಾಷ್ಟ್ರಗಳು ತಮ್ಮೊಳಗೆ ಪಂದ್ಯಗಳನ್ನು ಹಂಚಲು ಅವರು ಯಾಕೆ ಅವಕಾಶ ಕೊಟ್ಟರು?" ಎಂದು ರಿಜ್ವಿ ಪ್ರಶ್ನಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದರೆ, ಅತ್ತ ಅಧ್ಯಕ್ಷ ಇಜಾಜ್ ಭಟ್ ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನವು ವಿಶ್ವಕಪ್‌ ಆತಿಥ್ಯದಲ್ಲಿ ಉಳಿಯುವಂತೆ ಮಾಡಲು ಶತಾಯ ಗತಾಯ ಯತ್ನಿಸುತ್ತಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಅತಿ ಕೆಟ್ಟ ಬೌಲಿಂಗ್‌ನಿಂದ ನಮಗೆ ಸೋಲಾಯಿತು‌: ಧೋನಿ
ಅಬ್ಬರಿಸಿದ ನೈಟ್ ರೈಡರ್ಸ್‌ಗೆ ಮಣಿದ ಚೆನ್ನೈ
T20 ವಿಶ್ವಕಪ್‌ ಮೊದಲೇ ಭಾರತ-ಪಾಕ್ ಮುಖಾಮುಖಿ
ಸೆಮಿಗೂ ಮೊದಲು ಲಯ ಕಂಡುಕೊಳ್ಳುವೆವು: ಸೆಹ್ವಾಗ್
ಫೆಡರರ್, ಸಫಿನಾ ಮ್ಯಾಡ್ರಿಡ್ ಚಾಂಪಿಯನ್ಸ್
ಏಷಿಯನ್ ಚಾಂಪಿಯನ್‌ಶಿಪ್‌ಗೆ ವಿಜೇಂದರ್, ಜಿತೇಂದರ್
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ದೇವೇಗೌಡರ 77ನೇ ಹುಟ್ಟು ಹಬ್ಬ ಆಚರಣೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ..
ಜೆಡಿಎಸ್ ಕಾಂಗ್ರೆಸ್ ಜತೆ ವಿಲೀನವಾಗಲಿ: ಡಿವಿಎಸ್
ರಾಜ್ಯವನ್ನು ನಿರ್ಲಕ್ಷಿಸಿದರೆ ಎಚ್ಚರ!: ಯುಪಿಎಗೆ ಸವಾಲ್
ಮನರಂಜನೆ
ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು
ಮುಂದೆ ಓದಿ|ಮತ್ತಷ್ಟು...