ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಅತಿ ಕೆಟ್ಟ ಬೌಲಿಂಗ್‌ನಿಂದ ನಮಗೆ ಸೋಲಾಯಿತು‌: ಧೋನಿ
ಸೆಂಚೂರಿಯನ್, ಮಂಗಳವಾರ, 19 ಮೇ 2009   ( 12:51 IST )
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಏಳು ವಿಕೆಟ್‌ಗಳ ಅಂತರದಿಂದ ಸೋಲುಂಡ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತೀ ಕೆಟ್ಟ ನಿರ್ವಹಣೆಗಳಲ್ಲೊಂದು ಎಂದು ವಿಶ್ಲೇಷಿಸಿರುವ ನಾಯಕ ಮಹೇಂದ್ರ ಸಿಂಗ್ ಧೋನಿ, ಎದುರಾಳಿಗಳು ಅತ್ಯುತ್ತಮವಾಗಿ ಆಡಿದ್ದನ್ನು ಒಪ್ಪಿಕೊಂಡಿದ್ದಾರೆ.

"ಈ ಪಂದ್ಯವನ್ನು ಕಳೆದುಕೊಂಡಿರುವುದರಿಂದ ನಿರಾಸೆಯಾಗಿದೆ"

"ನಾವು ಸಾಕಷ್ಟು ರನ್‌ಗಳನ್ನು ಮಾಡಿದ್ದರಿಂದ ರಕ್ಷಣಾತ್ಮಕವಾಗಿದ್ದೆವು. ಆದರೆ ಕೊಲ್ಕತ್ತಾ ಕೆಲವು ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿತು. ಮತ್ತೊಂದು ಕಡೆ ನಮ್ಮ ಬೌಲರುಗಳು ಐಪಿಎಲ್‌ನಲ್ಲೇ ಅತಿ ಕೆಟ್ಟ ಪ್ರದರ್ಶನಗಳಲ್ಲೊಂದು ಎನ್ನಬಹುದಾದ ನಿರ್ವಹಣೆ ನೀಡಿದರು" ಎಂದು ಬೌಲರುಗಳ ಬಗ್ಗೆ ತಾನು ಅಸಮಾಧಾನಗೊಂಡಿದ್ದೇನೆ ಎಂಬುದನ್ನು ಧೋನಿ ಹೊರ ಹಾಕಿದರು.

"ಕೊಲ್ಕತ್ತಾ ನಿಜಕ್ಕೂ ಅತ್ಯುತ್ತಮ ಬ್ಯಾಟಿಂಗ್ ಮಾಡಿತು. ಎಲ್ಲಕ್ಕಿಂತ ಹೆಚ್ಚಾಗಿ ಅವರು ನಮ್ಮನ್ನು ಮೀರಿಸುವ ಆಟ ನೀಡಿದ್ದಾರೆ. 190ರ ಹತ್ತಿರ ರನ್ ಚೇಸ್ ಮಾಡಬೇಕೆಂದರೆ ದಾಂಡಿಗರಿಂದ ಕಠಿಣ ಶ್ರಮದ ಅಗತ್ಯವಿರುತ್ತದೆ. ಅದನ್ನವರು ಕ್ರಮಬದ್ಧವಾಗಿ ಮಾಡಿದ್ದಾರೆ" ಎಂದರು.

ಚೆನ್ನೈ ಸೂಪರ್ ಕಿಂಗ್ಸ್ ತನ್ನ ಕೊನೆಯ ಪಂದ್ಯವನ್ನು ಬುಧವಾರ ಕಿಂಗ್ಸ್ XI ಪಂಜಾಬ್ ವಿರುದ್ಧ ಆಡಲಿದೆ. ಗೆಲ್ಲಲೇ ಬೇಕಾಗಿರುವ ಈ ಪಂದ್ಯದಲ್ಲಿ ಬೌಲರುಗಳು ಉತ್ತಮ ಪ್ರದರ್ಶನ ನೀಡುವ ಭರವಸೆ ಧೋನಿಗಿದೆ. ಇಲ್ಲಿ ಗೆದ್ದರೆ ಸೆಮಿಫೈನಲ್ ಸ್ಥಾನ ಖಚಿತವಾಗಲಿದೆ.

"ನಾವು ಕೊನೆಯ ಪಂದ್ಯವನ್ನು ಗೆಲ್ಲುವ ಅಗತ್ಯವಿದೆ. ನಮ್ಮ ತಂಡವು ಉತ್ತಮವಾಗಿದೆ. ನಾವು ಗರಿಷ್ಠ ಮೊತ್ತವನ್ನು ಕಲೆ ಹಾಕಿದಲ್ಲಿ ನಂತರ ಬೌಲರುಗಳು ತಂಡದ ರಕ್ಷಣೆಯನ್ನು ಇಂದಿಗಿಂತ ಉತ್ತಮವಾಗಿ ಮಾಡಬಹುದು" ಎಂದು ತಿಳಿಸಿದ್ದಾರೆ.

ಅದೇ ಹೊತ್ತಿಗೆ ಕೊನೆಯ ಪಂದ್ಯವನ್ನು ಗೆಲ್ಲಲು ತನ್ನ ತಂಡವು ಒತ್ತಡವನ್ನು ಎದುರಿಸುತ್ತಿದೆ ಎಂದು ತಾನು ಯೋಚಿಸುತ್ತಿಲ್ಲ ಎಂದು ಧೋನಿ ಹೇಳಿದ್ದಾರೆ.

"ಕಳೆದ ವರ್ಷ ಕೂಡ ನಾವು ಇಂತಹುದೇ ಸ್ಥಿತಿಯಲ್ಲಿದ್ದೆವು. ಸೆಮಿಫೈನಲ್ ತಲುಪಬೇಕಿದ್ದರೆ ಕೊನೆಯ ಪಂದ್ಯವನ್ನು ಗೆಲ್ಲಬೇಕಾಗಿತ್ತು. ಈಗಲೂ ಅದೇ ಪರಿಸ್ಥಿತಿಯಲ್ಲಿದ್ದೇವೆ" ಎಂದು ವಿವರಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಅಬ್ಬರಿಸಿದ ನೈಟ್ ರೈಡರ್ಸ್‌ಗೆ ಮಣಿದ ಚೆನ್ನೈ
T20 ವಿಶ್ವಕಪ್‌ ಮೊದಲೇ ಭಾರತ-ಪಾಕ್ ಮುಖಾಮುಖಿ
ಸೆಮಿಗೂ ಮೊದಲು ಲಯ ಕಂಡುಕೊಳ್ಳುವೆವು: ಸೆಹ್ವಾಗ್
ಫೆಡರರ್, ಸಫಿನಾ ಮ್ಯಾಡ್ರಿಡ್ ಚಾಂಪಿಯನ್ಸ್
ಏಷಿಯನ್ ಚಾಂಪಿಯನ್‌ಶಿಪ್‌ಗೆ ವಿಜೇಂದರ್, ಜಿತೇಂದರ್
ಮೋಹನ್ ಬಗಾನ್‌ ತಂಡದಿಂದ ಹೊರಬಂದ ಭುಟಿಯಾ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಹಣ ಬಲದಿಂದ ಬಿಜೆಪಿಗೆ ಜಯ : ಮಲ್ಲಿಕಾರ್ಜುನ ಖರ್ಗೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ...
ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ
ದಾಖಲೆ ಪ್ರಮಾಣದಲ್ಲಿ ಮರು ಮೌಲ್ಯಮಾಪನ ಅರ್ಜಿ
ಮನರಂಜನೆ
ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ
ಮುಂದೆ ಓದಿ|ಮತ್ತಷ್ಟು...