ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಅಬ್ಬರಿಸಿದ ನೈಟ್ ರೈಡರ್ಸ್‌ಗೆ ಮಣಿದ ಚೆನ್ನೈ
ನವದೆಹಲಿ, ಮಂಗಳವಾರ, 19 ಮೇ 2009   ( 10:11 IST )
ನಾಯಕ ಬ್ರೆಂಡನ್ ಮೆಕಲಮ್ ಮತ್ತು ಬ್ರಾಡ್ ಹಾಡ್ಜ್ ಅವರ ಬಿರುಸಿನ ಅರ್ಧಶತಕಗಳ ನೆರವಿನಿಂದ ಸೋಮವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ರೋಚಕ ಜಯಗಳಿಸಿದೆ. ಸೂಪರ್ ಕಿಂಗ್ಸ್ ಒಡ್ಡಿದ 189ರನ್‌ಗಳ ಬೃಹತ್ ಮೊತ್ತದ ಸವಾಲಿಗೆ ಎದೆಗುಂದದ ನೈಟ್ ರೈಡರ್ಸ್ ಕೊನೆಯ ಚೆಂಡಿನಲ್ಲಿ ವಿಜಯದ ಹೊಡೆತ ಬಾರಿಸಿ ಗೆಲುವಿನ ನಗೆ ಬೀರಿತು.

ಮೆಕಲಮ್ 41 ಚೆಂಡಿಗೆ 81 ರನ್ ಮತ್ತು ಹಾಡ್ಜ್ 44 ಚೆಂಡುಗಳಿಗೆ 71 ರನ್ ಬಾರಿಸಿ ಸತತ ಸೋಲಿನ ಸರಮಾಲೆಯಿಂದ ಕಂಗೆಟ್ಟಿದ್ದ ಕೊಲ್ಕತ್ತಾ ತಂಡದಲ್ಲಿ ಹರ್ಷದ ಹೊನಲು ಹರಿಸಿದರು. ಕೋಲ್ಕತಾ ಆಡಿದ 13 ಪಂದ್ಯಗಳಲ್ಲಿ ಇದು ಕೇವಲ ಎರಡನೇ ಜಯವಾಗಿದ್ದು, ಸೆಮಿಫೈನಲ್ ಸ್ಪರ್ಧೆಯಿಂದ ಹೊರಕ್ಕೆ ಉಳಿದಿದ್ದರೂ ಬಲಿಷ್ಠ ತಂಡವನ್ನು ಸೋಲಿಸಿದ ಹಿರಿಮೆಗೆ ಪಾತ್ರರಾಗಿ ಚೆನ್ನೈ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಕಗ್ಗಂಟಾಗುವಂತೆ ಮಾಡಿತು.

ಚೆನ್ನೈ ತಂಡವು 13 ಪಂದ್ಯಗಳನ್ನು ಆಡಿ 15 ಅಂಕ ಗಳಿಸುವುದರೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಡರ್ಬನ್‌ನಲ್ಲಿ ಮೇ 20 ರಂದು ನಡೆಯಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯವನ್ನು ಚೆನ್ನೈ ಗೆಲ್ಲಬೇಕಾಗಿದ್ದು, ಕೊನೆಯ ನಾಲ್ಕು ಸ್ಥಾನಗಳಲ್ಲಿ ಅವಕಾಶ ಗಿಟ್ಟಿಸಲು ಇತರೆ ಪಂದ್ಯಗಳ ಫಲಿತಾಂಶಕ್ಕೆ ಕಾಯಬೇಕಾಗಿದೆ.ಮೆಕಲಮ್ ಕೊಲ್ಕತ್ತಾಗೆ ಬಿಡುಬೀಸಿನ ಬ್ಯಾಟಿಂಗ್ ಮ‌ೂಲಕ ಉತ್ತಮ ಆರಂಭ ಹಾಕಿಕೊಟ್ಟು 21 ಚೆಂಡುಗಳಲ್ಲಿ ಎರಡನೇ ಅರ್ಧಶತಕ ಪೂರೈಸಿದರು. ಹಾಡ್ಜ್ ಎರಡನೇ ವಿಕೆಟ್‌ಗೆ ಮೆಕಲಮ್ ಜತೆ 90 ರನ್ ಜತೆಯಾಟದಿಂದ ಕೋಲ್ಕತಾಗೆ ಉತ್ತಮ ಅಡಿಪಾಯ ಹಾಕಿದರು.

ಗಂಗೂಲಿ 6ನೇ ಓವರಿನಲ್ಲಿ 4 ರನ್2 ಮಾಡಿ ಔಟಾಗಿದ್ದು ಮೆಕಲಮ್ ಏಕಾಗ್ರತೆ ಕೆಡಿಸದೇ ಚೆನ್ನೈ ಬೌಲರುಗಳ ಚೆಂಡುಗಳನ್ನು ಮೈದಾನದ ಎಲ್ಲ ದಿಕ್ಕುಗಳಿಗೂ ಅಟ್ಟಿದರು. ಅವರ ಭರ್ಜರಿ ಬ್ಯಾಟಿಂಗ್‌ನಲ್ಲಿ 11 ಫೋರ್ ಮತ್ತು 6 ಸಿಕ್ಸರುಗಳಿದ್ದವು. ಹಾಡ್ಜ್ ನಾಲ್ಕು ಬೌಂಡರಿ ಮತ್ತು ಅಷ್ಟೇ ಸಂಖ್ಯೆಯ ಸಿಕ್ಸರುಗಳಿಂದ ಕೊಲ್ಕತಾ ಗೆಲುವಿನ ಆಸೆ ಜೀವಂತ ಇರಿಸಿದರು.

ವ್ರಿಧಿಮಾನ್ ಸಾಹಾ ಕೂಡ ಔಟಾಗದೆ 13 ಚೆಂಡುಗಳಲ್ಲಿ 25 ರನ್ ಬಾರಿಸಿ ಸುರೇಶ್ ರೈನಾ ಅವರ ಕಡೆಯ ಓವರಿನ ಕಡೆಯ ಚೆಂಡಿನಲ್ಲಿ ಗೆಲುವಿನ ರನ್ ಬಾರಿಸಿದರು. ಇದಕ್ಕೆ ಮುನ್ನ, ಹೇಡನ್ ನೆರವಿಲ್ಲದೇ ಆಡಿದ ಚೆನ್ನೈ, ಸುರೇಶ್ ರೈನಾ ಅವರ ಭರ್ಜರಿ ಅರ್ಧಶತಕ ಮತ್ತು ಧೋನಿ ಅವರ ಔಟಾಗದ 40 ರನ್ ನೆರವಿನೊಂದಿಗೆ 3 ವಿಕೆಟ್ ನಷ್ಟಕ್ಕೆ 188 ರನ್ ಮಾಡಿತು. ರೈನಾ ತಮ್ಮ ಐದನೇ ಐಪಿಎಲ್ ಅರ್ಧಶತಕದಲ್ಲಿ 37 ಚೆಂಡುಗಳಲ್ಲಿ 52ರನ್‌ ಬಾರಿಸಿದರು. ಧೋನಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್‌ನ 40 ರನ್ ಚಚ್ಚಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
T20 ವಿಶ್ವಕಪ್‌ ಮೊದಲೇ ಭಾರತ-ಪಾಕ್ ಮುಖಾಮುಖಿ
ಸೆಮಿಗೂ ಮೊದಲು ಲಯ ಕಂಡುಕೊಳ್ಳುವೆವು: ಸೆಹ್ವಾಗ್
ಫೆಡರರ್, ಸಫಿನಾ ಮ್ಯಾಡ್ರಿಡ್ ಚಾಂಪಿಯನ್ಸ್
ಏಷಿಯನ್ ಚಾಂಪಿಯನ್‌ಶಿಪ್‌ಗೆ ವಿಜೇಂದರ್, ಜಿತೇಂದರ್
ಮೋಹನ್ ಬಗಾನ್‌ ತಂಡದಿಂದ ಹೊರಬಂದ ಭುಟಿಯಾ
ಎಟಿಪಿ ಡಬಲ್ಸ್: ಪ್ರಕಾಶ್, ಮಂಕಡ್‌‌ ರನ್ನರ್-ಅಪ್
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಹಣ ಬಲದಿಂದ ಬಿಜೆಪಿಗೆ ಜಯ : ಮಲ್ಲಿಕಾರ್ಜುನ ಖರ್ಗೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ...
ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ
ದಾಖಲೆ ಪ್ರಮಾಣದಲ್ಲಿ ಮರು ಮೌಲ್ಯಮಾಪನ ಅರ್ಜಿ
ಮನರಂಜನೆ
ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ
ಮುಂದೆ ಓದಿ|ಮತ್ತಷ್ಟು...