ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
T20 ವಿಶ್ವಕಪ್‌ ಮೊದಲೇ ಭಾರತ-ಪಾಕ್ ಮುಖಾಮುಖಿ
ಕರಾಚಿ, ಸೋಮವಾರ, 18 ಮೇ 2009   ( 19:00 IST )
ಉದ್ಘಾಟನಾ ಆವೃತ್ತಿಯಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಕ್ಷಣಗಳನ್ನು ಉಣಬಡಿಸಿದ್ದ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನಗಳು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಹಿನ್ನಲೆಯಲ್ಲಿ ಜೂನ್ 3ರಂದು ಓವಲ್ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯಕ್ಕಾಗಿ ಮುಖಾಮುಖಿಯಾಗಲಿವೆ.

ಮೂಲಗಳ ಪ್ರಕಾರ ಈ ಪಂದ್ಯದ ಎಲ್ಲಾ ಟಿಕೆಟುಗಳು ಕೂಡ ಬಿಕರಿಯಾಗಿವೆ. ಜೂನ್ 5ರಂದು ಆರಂಭವಾಗಲಿರುವ ಟ್ವೆಂಟಿ-20 ವಿಶ್ವಕಪ್‌ಗೂ ಮೊದಲು ಈ ಅಭ್ಯಾಸ ಪಂದ್ಯದ ಮೂಲಕ ಆಸಕ್ತಿ ಕೆರಳಿಸುವುದು ಆಯೋಜಕರ ಉದ್ದೇಶ.

ಆರಂಭಿಕ ಟ್ವೆಂಟಿ-20 ವಿಶ್ವಕಪ್ ಫೈನಲ್ ನೆನಪುಗಳನ್ನು ಮರುಕಳಿಸುವುದಕ್ಕಾಗಿ ಐಸಿಸಿ ಈ ಪಂದ್ಯವನ್ನು ಆಯೋಜಿಸಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೂಲಗಳು ತಿಳಿಸಿವೆ. ಟೂರ್ನಮೆಂಟ್ ಆರಂಭಕ್ಕೂ ಮೊದಲು ನಡೆಯುವ ಅಭ್ಯಾಸ ವೇಳಾಪಟ್ಟಿಯ ಭಾಗ ಈ ಪಂದ್ಯ ಎಂದೂ ಹೇಳಲಾಗಿದೆ.

ಕಳೆದ ವಿಶ್ವಕಪ್‌ನಲ್ಲಿ ಭಾರತವು ಪಾಕಿಸ್ತಾನವನ್ನು ಕೊನೆಯ ಓವರಿನಲ್ಲಿ ರೋಮಾಂಚಕ ಸ್ಥಿತಿಯಲ್ಲಿ ಮಣಿಸಿ ಕಪ್ ಗೆದ್ದುಕೊಂಡಿತ್ತು. ಈ ಬಾರಿಯೂ ಇವೆರಡೂ ತಂಡಗಳು ಫೈನಲ್ ಪ್ರವೇಶಿಸುವ ನೆಚ್ಚಿನ ತಂಡಗಳಾಗಿ ಕ್ರಿಕೆಟ್ ವಲಯದಲ್ಲಿ ಗುರುತಿಸಲಾಗುತ್ತಿದೆ.

ಟ್ವೆಂಟಿ-20 ವಿಶ್ವಕಪ್‌ನಲ್ಲಿ ಒಟ್ಟು ನಾಲ್ಕು ಗುಂಪುಗಳಿವೆ. ಭಾರತವು 'ಎ' ಗುಂಪಿನಲ್ಲಿ ಬಾಂಗ್ಲಾದೇಶ ಮತ್ತು ಐರ್ಲೆಂಡ್ ಜತೆ ಗುರುತಿಸಿಕೊಂಡಿದೆ. 'ಬಿ' ಗುಂಪಿನಲ್ಲಿ ಇಂಗ್ಲೆಂಡ್, ನೆದರ್ಲೆಂಡ್, ಪಾಕಿಸ್ತಾನ ಹಾಗೂ 'ಸಿ' ಗುಂಪಿನಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್‌ಇಂಡೀಸ್ ಮತ್ತು 'ಡಿ' ಗುಂಪಿನಲ್ಲಿ ನ್ಯೂಜಿಲೆಂಡ್, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾಗಳು ಕಾಣಿಸಿಕೊಂಡಿವೆ.

ವಿಶ್ವಕಪ್ ಜೂನ್ 5ರಂದು ವಿದ್ಯುಕ್ತವಾಗಿ ಆರಂಭವಾಗಲಿದ್ದು, ಭಾರತವು ಜೂನ್ 6ರಂದು ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡಲಿದೆ. ನಂತರ ಲೀಗ್‌ನ ಎರಡನೇ ಹಾಗೂ ಕೊನೆಯ ಪಂದ್ಯವನ್ನು ಜೂನ್ 10ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಇಲ್ಲಿ ಗರಿಷ್ಠ ಅಂಕ ಪಡೆದ ಎಂಟು ತಂಡಗಳು ಸೂಪರ್ 8ರ ಹಂತಕ್ಕೆ ಪ್ರವೇಶ ಪಡೆದುಕೊಳ್ಳಲಿವೆ.

ಸೂಪರ್ 8ರಿಂದ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಜೂನ್ 18 ಮತ್ತು 19ರಂದು ಎರಡು ಸೆಮಿಫೈನಲ್‌ಗಳು ಹಾಗೂ ಜೂನ್ 21ರಂದು ಫೈನಲ್ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸೆಮಿಗೂ ಮೊದಲು ಲಯ ಕಂಡುಕೊಳ್ಳುವೆವು: ಸೆಹ್ವಾಗ್
ಫೆಡರರ್, ಸಫಿನಾ ಮ್ಯಾಡ್ರಿಡ್ ಚಾಂಪಿಯನ್ಸ್
ಏಷಿಯನ್ ಚಾಂಪಿಯನ್‌ಶಿಪ್‌ಗೆ ವಿಜೇಂದರ್, ಜಿತೇಂದರ್
ಮೋಹನ್ ಬಗಾನ್‌ ತಂಡದಿಂದ ಹೊರಬಂದ ಭುಟಿಯಾ
ಎಟಿಪಿ ಡಬಲ್ಸ್: ಪ್ರಕಾಶ್, ಮಂಕಡ್‌‌ ರನ್ನರ್-ಅಪ್
ಬಾಕ್ಸಿಂಗ್‌: ಸುರಂಜಯ್‌ಗೆ ಚಿನ್ನ; 4 ಪದಕ ಬಾಚಿದ ಭಾರತ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಹಣ ಬಲದಿಂದ ಬಿಜೆಪಿಗೆ ಜಯ : ಮಲ್ಲಿಕಾರ್ಜುನ ಖರ್ಗೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ...
ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ
ದಾಖಲೆ ಪ್ರಮಾಣದಲ್ಲಿ ಮರು ಮೌಲ್ಯಮಾಪನ ಅರ್ಜಿ
ಮನರಂಜನೆ
ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ
ಮುಂದೆ ಓದಿ|ಮತ್ತಷ್ಟು...