|
| ಕ್ರಿಕೆಟ್: ಶ್ರೀಲಂಕಾಗೆ 333 ರನ್‌ಗಳ ಸವಾಲು |
| ಕೊಲೊಂಬೊ, ಗುರುವಾರ, 5 ಫೆಬ್ರವರಿ 2009 ( 18:59 IST ) | |
ಗೌತಮ್ ಗಂಭೀರ್ ಅಮೋಘ ಶತಕ (150) ಹಾಗೂ ಧೋನಿಯ ಅದ್ಭುತ ಆಟದ (94) ನೆರವಿನಿಂದ ಭಾರತವು ಶ್ರೀಲಂಕಾ ವಿರುದ್ಧದ ನಾಲ್ಕನೇ ಪಂದ್ಯದಲ್ಲೂ 300ರ ಗಡಿ ದಾಟಿದೆ. ಲಂಕಾ ಪಡೆಗೆ 333ರ ಗುರಿ ನೀಡಿರುವ ಟೀಮ್ ಇಂಡಿಯಾಕ್ಕೆ ದಾಂಡಿಗರಾದ ಯುವರಾಜ್ ಸಿಂಗ್, ಯೂಸುಫ್ ಪಠಾಣ್ ವಿಫಲರಾದರೂ ಸುರೇಶ್ ರೈನಾ (49) ತಂಡಕ್ಕೆ ಆಸರೆಯಾದರು. ಜತೆಗೆ ಮುತ್ತಯ್ಯ ಮುರಳೀಧನ್ 503ನೇ ವಿಕೆಟ್ ಆಗಿ ಗಂಭೀರ್‌ರನ್ನು ಬಲಿ ಪಡೆಯುವ ಮೂಲಕ ಏಕದಿನ ಕ್ರಿಕೆಟಿನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿಯನ್ನೂ ಪಡೆದಿದ್ದಾರೆ.
ಶ್ರೀಲಂಕಾ-ಭಾರತ ನಡುವಿನ ನಾಲ್ಕನೇ ಏಕದಿನ ಪಂದ್ಯ ಇಂದು ಕೊಲೊಂಬೊದ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಅಲ್ಪಮೊತ್ತಕ್ಕೆ ಸ್ಫೋಟಕ ದಾಂಡಿಗ ವೀರೇಂದ್ರ ಸೆಹ್ವಾಗ್ ಹಾಗೂ ಯುವರಾಜ್ ಸಿಂಗ್‌ರನ್ನು ಕಳೆದುಕೊಂಡಿದ್ದರೂ, ಗೌತಮ್ ಗಂಭೀರ್ ಹಾಗೂ ಮಹೇಂದ್ರ ಸಿಂಗ್ ಧೋನಿ ಆಟದ ನೆರವಿನಿಂದ ನಿಗದಿತ 50 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 332 ರನ್ ಪೇರಿಸಿತು.
ಸೆಹ್ವಾಗ್ ಆಟ ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ ನುವಾನ್ ಕುಲಶೇಖರ ಬೌಲಿಂಗ್‌ನಲ್ಲಿ ಔಟಾಗಿ ನಿರಾಸೆ ಮೂಡಿಸಿದರು. ಆಗ ಅವರು ಕೇವಲ 5 ರನ್ ಗಳಿಸಿದ್ದರು. ನಂತರ ಜತೆಯಾದ ಗಂಭೀರ್ ಮತ್ತು ಧೋನಿ ಜತೆಗಾರರು ಲಂಕಾ ಬೌಲರುಗಳ ಬೆವರಿಳಿಸಿದ್ದಾರೆ. ಅವರು ಎರಡನೇ ವಿಕೆಟಿಗೆ 30.4 ಓವರುಗಳಲ್ಲಿ 188 ರನ್ ಪೇರಿಸಿದ್ದರು. ಧೋನಿ 96 ಎಸೆತಗಳಿಂದ 4 ಬೌಂಡರಿ, 2 ಸಿಕ್ಸರ್ ಸಹಿತ 94 ರನ್ ಗಳಿಸಿದ್ದಾಗ ಜಯಸೂರ್ಯ ಖಳನಾಗಿ ಕಾಡಿದರು. ಶತಕ ವಂಚಿತನಾದ ಧೋನಿ ಜೋಲು ಮೋರೆ ಹಾಕಿಕೊಂಡು ಪೆವಿಲಿಯನ್‌ಗೆ ತೆರಳಬೇಕಾಯಿತು.
ಕುಲಶೇಖರ ಎರಡನೇ ವಿಕೆಟ್ ಪಡೆದದ್ದು 5 ರನ್ ಗಳಿಸಿದ್ದ ಯುವರಾಜ್ ಸಿಂಗ್‌ರನ್ನು. ಆಗ ಮೈದಾನದಲ್ಲೆಲ್ಲಾ ಕುಣಿದಾಡಿದ ಲಂಕಾ ಪಡೆ ಸಂಭ್ರಮವನ್ನಾಚರಿಸಿತು. ಅವರ ಬೆನ್ನಿಗೆ ಹೊರಟು ನಿಂತವರು ಯೂಸುಫ್ ಪಠಾಣ್. ಅವರು ಶೂನ್ಯದಲ್ಲಿದ್ದಾಗ ಮತ್ತೆ ಕುಲಶೇಖರಗೆ ಬಲಿಯಾಗಿದ್ದರು. ಆದರೆ ಕುಲಶೇಖರ ಹ್ಯಾಟ್ರಿಕ್ ಕನಸು ನನಸಾಗಲಿಲ್ಲ.
ಆದರೆ ಮತ್ತೊಂದು ಕಡೆ ಭದ್ರವಾಗಿ ಕ್ರೀಸಿನಲ್ಲಿ ನೆಲೆ ನಿಂತ ಗಂಭೀರ್ ತನ್ನ ಏಕದಿನ ಜೀವನದ 6ನೇ ಶತಕ ದಾಖಲಿಸಿದರು. ಆಟದುದ್ದಕ್ಕೂ ತನ್ನ ಆಕರ್ಷಕ ಶೈಲಿಯಿಂದ ಪ್ರೇಕ್ಷಕರ ಮನಗೆದ್ದ ಗಂಭೀರ್ 147 ಎಸೆತಗಳಿಂದ 14 ಬೌಂಡರಿ, 1 ಸಿಕ್ಸರ್ ಸಹಿತ 150 ರನ್ ಗಳಿಸಿದ್ದಾಗ ಮುರಳೀಧನ್‌ಗೆ 503ನೇ ಬಲಿಯಾದರು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ವಾಸಿಮ್ ಅಕ್ರಮ್ ಹೆಸರಿನಿಂದ ಮುರಳಿ ಹೆಸರಿಗೆ ವರ್ಗಾವಣೆಯಾಯಿತು.
ಗಂಭೀರ್ ನಿರ್ಗಮನಕ್ಕೂ ಮೊದಲು ರೈನಾ ಜತೆ ಸೇರಿ 12.3 ಓವರುಗಳಲ್ಲಿ 103 ರನ್ ಪೇರಿಸಿದ್ದರು. ನಂತರ ರೈನಾರನ್ನು ಸೇರಿಕೊಂಡ ರೋಹಿತ್ ಶರ್ಮಾ 4 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಸುರೇಶ್ ರೈನಾ 37 ಎಸೆತಗಳಿಂದ 49* ರನ್ ಗಳಿಸಿದರು. ಐದು ವಿಕೆಟ್ ಕಳೆದುಕೊಂಡ ಭಾರತ 332 ರನ್ ಗಳಿಸಿದ್ದು, 333ರ ಗುರಿಯನ್ನು ಲಂಕಾ ಪಡೆಗೆ ನೀಡಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - 'ಅಭಿಮಾನಿ' ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರವೀಣ್ ಇಂಜಿನಿಯರ್ ನಿರ್ದೇಶಿಸಿದ್ದಾರೆ. ನಾಯಕನ ಅಣ್ಣಾವ್ರ ಅಭಿಮಾನಿ. ಆ ಅಭಿಮಾನದಿಂದ ತನ್ನ ಮಗನೂ ಅಭಿಮಾನಿಯಾಗಬೇಕೆಂದು ಬಯಸುತ್ತಾಳೆ. ಹೆರಿಗೆಯ ನಂತರ ಆಕೆ ಕೊನೆಯುಸಿರೆಳೆಯುತ್ತಾಳೆ. ತಂದೆ ತನ್ನ |
| |
|
|
|
|
|
|
|