ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಕ್ಲಾಸಿಕ್ ಸೆಮೀಸ್‌ಗೆ ಡೆಮೆಂಟೀವಾ
ಔಕ್‌ಲ್ಯಾಂಡ್, ಗುರುವಾರ, 8 ಜನವರಿ 2009   ( 13:27 IST )
ವಿಶ್ವ ನಂಬರ್ 4 ಎಲೆನಾ ಡೆಮೆಂಟೀವಾ ತಮ್ಮ ಇಸ್ರೇಲ್ ಎದುರಾಳಿ ಶಹಾರ್ ಪೀರ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಎಎಸ್‌ಬಿ ಕ್ಲಾಸಿಕ್‌ನ ಅಂತಿಮ ನಾಲ್ಕರ ಹಂತಕ್ಕೆ ತಲುಪಿದ್ದಾರೆ.

ರಷ್ಯಾದ ಒಲಿಂಪಿಕ್ ಚಾಂಪಿಯನ್ ಮತ್ತು ಅಗ್ರ ಶ್ರೇಯಾಂಕಿತೆ 6-3, 6-1ರ ಗೆಲುವು ಸಾಧಿಸುವಲ್ಲಿ ಹೆಚ್ಚಿನ ಕಷ್ಟ ಪಡಲಿಲ್ಲ ಆದರೆ ಪೀರ್ ಗಾಜಾ ಮೇಲಿನ ತಮ್ಮ ದೇಶದ ಸೇನಾ ಕಾರ್ಯಚರಣೆ ವಿರುದ್ಧ ಟೆನ್ನಿಸ್ ಕೇಂದ್ರದ ಹೊರಗೆ 20 ಜನರು ಕೈಗೊಂಡ ಪ್ರತಿಭಟನೆಯನ್ನು ಸೋಲಿಗೆ ನೆಪವಾಗಿ ಬಳಸಲು ನಿರಾಕರಿಸಿದರು.

21 ವರ್ಷದ ಪೀರ್ ತಾವು ಪ್ರತಿಭಟನೆಯಿಂದ ಎಳ್ಳಷ್ಟೂ ವಿಚಲಿತರಾಗಿಲ್ಲ ಎಂದು ಹೇಳಿದರೆ, ಡೆಮೆಂಟೀವಾ ಇಸ್ರೇಲಿನಲ್ಲಿನ ಪರಿಸ್ಥಿತಿ ಪೀರ್‌ ಮೇಲೆ ಪರಿಣಾಮ ಬೀರಿರಬಹುದು ಎಂದು ತಿಳಿಸಿದ್ದಾರೆ. ತಮ್ಮ ದೇಶದಲ್ಲಿನ ಪರಿಸ್ಥಿತಿಯ ಕಾರಣ ಪೀರ್‌ ಕಠಿಣ ದಿನವನ್ನು ಅನುಭವಿಸಿದರು ಎಂಬುದು ತನ್ನ ಅನಿಸಿಕೆ ಎಂದು ಡೆಮೆಂಟೀವಾ ತಿಳಿಸಿದ್ದಾರೆ.

ಟೂರ್ನಮೆಂಟಿನಿಂದ ಪೀರ್ ಹಿಂದೆ ಸರಿಯುವುದನ್ನು ಪ್ರತಿಭಟನಾಕಾರರು ಇಚ್ಚಿಸಿದ್ದರು ಮತ್ತು ಗಾಜಾ ಮೇಲಿನ ಇಸ್ರೇಲ್ ದಾಳಿ ವಿರುದ್ಧವಾಗಿ ಮಾತನಾಡುವುದನ್ನು ಇಚ್ಚಿಸಿದ್ದರು ಆದರೆ ಅವರು ಈ ಬಗ್ಗೆ ಏನನ್ನೂ ಮಾತನಾಡಲು ನಿರಾಕರಿಸಿದರು.

5ನೇ ಶ್ರೇಯಾಂಕಿತೆ ವಿಶ್ವ ನಂಬರ್ 39 ಮೊದಲ ಸೆಟ್ಟಿನಲ್ಲಿ 3-2ರ ಮುನ್ನಡೆ ಪಡೆದರು ಆದರೆ ನಂತರ ಡೆಮೆಂಟೀವಾ ವಿರುದ್ಧ ಕುಸಿದು, ಮುಂದಿನ 9 ಪಂದ್ಯಗಳಲ್ಲಿ ಸೋಲು ಕಂಡರು.

ಶುಕ್ರವಾರ ನಡೆಯಲಿರುವ ಸೆಮಿ-ಫೈನಲಿನಲ್ಲಿ ಡೆಮೆಂಟೀವಾ ಶ್ರೇಯಾಂಕರಹಿತ ಪ್ರೆಂಚ್ ಆಟಗಾರ್ತಿ ಅರವಾಣೆ ರೆಜೈರನ್ನು ಎದುರಿಸಲಿದ್ದಾರೆ. ರೆಜೈ ರೊಮೇನಿಯಾದ ಎಡಿನಾ ಗಲ್ಲೊವಿಟ್ಸ್‌ರನ್ನು ಸೋಲಿಸಿ ಸೆಮೀಸ್‌ಗೆ ಪ್ರವೇಶ ಪಡೆದಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ನಾಯಕರಾಗಿ ಸ್ಟ್ರಾಸ್, ಹಂಗಾಮಿ ಕೋಚ್‌ರಾಗಿ ಪ್ಲವರ್ ನೇಮಕ
ಟಿ20, ಏಕದಿನ ತಂಡದಿಂದ ಹೇಡನ್‌ಗೆ ಕೋಕ್
ದುರದೃಷ್ಟಕರ ಸನ್ನಿವೇಶಗಳಿಂದ ರಾಜಿನಾಮೆ: ಪೀಟರ್ಸನ್
ಚೆನ್ನೈ, ಆಸ್ಟ್ರೇಲಿಯನ್ ಒಪನ್‌: ಹಿಂದೆ ಸರಿದ ಡೇವಿಡೆಂಕೊ
ಪಾಂಟಿಂಗ್‌ ಮಾರಟ ಯೊಜನೆ ಇಲ್ಲ: ಕೆಕೆಆರ್
ಆಸ್ಟ್ರೇಲಿಯನ್ ಒಪನ್‌ನಲ್ಲಿ ಆಡಲಿರುವ ಸೆರೆನಾ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಲಾರಿ ಮುಷ್ಕರ ಕೈಬಿಡದಿದ್ದರೆ ಎಸ್ಮಾ ಜಾರಿ: ಅಶೋಕ್
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ನಡೆಸುತ್ತಿರುವ ಲಾರಿ ಮುಷ್ಕರ ಬುಧವಾರ...
ಗುಲ್ಬರ್ಗಾ: ಬುದ್ಧ ವಿಹಾರ ಲೋಕಾರ್ಪಣೆ
ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣ: ಕತ್ತಿ
ಮನರಂಜನೆ
ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ
ಮುಂದೆ ಓದಿ|ಮತ್ತಷ್ಟು...