|
| ಟಿ20, ಏಕದಿನ ತಂಡದಿಂದ ಹೇಡನ್‌ಗೆ ಕೋಕ್ |
| ಮೆಲ್ಬೋರ್ನ್, ಗುರುವಾರ, 8 ಜನವರಿ 2009 ( 12:47 IST ) | |
ಪಾರ್ಮ್ ಕಂಡುಕೊಳ್ಳಲು ಒದ್ದಾಡುತ್ತಿರುವ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್‌ರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಕಾಮನ್‌ವೆಲ್ತ್ ಬ್ಯಾಂಕ್ ಏಕದಿನ ಸರಣಿ ಮತ್ತು ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕಾಗಿನ ಆಸ್ಟ್ರೇಲಿಯಾದ 13 ಸದಸ್ಯರ ಸ್ಕ್ವೇಡ್‌ನಿಂದ ಕೈ ಬಿಡಲಾಗಿದೆ.
ಈ ವರ್ಷದ ಆದಿಯಲ್ಲಿನ ಟ್ವೆಂಟಿ20 ಹಾಗೂ 2011 ಏಕದಿನ ವಿಶ್ವ ಕಪ್‌ನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರೀಯ ಆಯ್ಕಾ ಸಮಿತಿ ಅಧ್ಯಕ್ಷ ಆಂಡ್ರ್ಯೂ ಹಿಲ್ಡಿಚ್ ಸ್ಪಷ್ಟಪಡಿಸಿದ್ದಾರೆ.
2009ರ ಐಸಿಸಿ ವಿಶ್ವ ಟ್ವೆಂಟಿ20 ಮತ್ತು 2011 ಐಸಿಸಿ ವಿಶ್ವಕಪ್‌ಗಾಗಿ ತಾನು ಸಂಪೂರ್ಣ ಶ್ರೇಣಿಯ ಯೋಜನೆಯಲ್ಲಿದ್ದೇವೆ ಎಂಬುದಕ್ಕೆ ಕೆಎಫ್‌ಸಿ ಟ್ವೆಂಟಿ20 ಅಂತಾರಾಷ್ಟ್ರೀಯ ಮತ್ತು ಕಾಮನ್‌ವೆಲ್ತ್ ಬ್ಯಾಂಕ್ ಸರಣಿಗಳಿಗಾಗಿನ ಈ ತಂಡ ಘೋಷಣೆ ಸ್ಪಷ್ಟ ಸಂಕೇತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸತತ ನಾಲ್ಕನೇ ಐಸಿಸಿ ವಿಶ್ವಕಪ್ ಗೆಲುವು ಮತ್ತು ತಮ್ಮ ಚೊಚ್ಚಲ ಐಸಿಸಿ ಟ್ವೆಂಟಿ20 ಗೆಲುವು ತಮ್ಮ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಕಾರಣದಿಂದ ತಾವು ಈ ಗುರಿಯನ್ನು ಸಾಧಿಸುವಲ್ಲಿ ತಮ್ಮ ಕೊಡುಗೆ ನೀಡಲು ಸಾಧ್ಯವಿಲ್ಲದಿರುವಂತಹವರನ್ನು ಹೆಚ್ಚಿಗೆ ಆಯ್ಕೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಆದಾಗ್ಯೂ ಹಿಲ್ಡಿಚ್, 37 ವರ್ಷದ ಹೇಡನ್‌ಗೆ ಇದು ಎಲ್ಲವೂ ಅಂತ್ಯವಲ್ಲ ಅವರು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಸಾಧ್ಯತೆಯೂ ಇದೆ ಎಂದು ಹೇಳಿದ್ದಾರೆ. ಇತ್ತೀಚಿಗಿನ ಟೆಸ್ಟ್ ಸರಣಿಯಲ್ಲಿನ ತಮ್ಮ ಪ್ರದರ್ಶನದಿಂದಾಗಿ ಹೇಡನ್‌ರನ್ನು ಟ್ವೆಂಟಿ20 ಮತ್ತು ಕಾಮನ್‌ವೆಲ್ತ್ ಬ್ಯಾಂಕ್ ಸರಣಿಯಿಂದ ಕೈ ಬಿಡಲಾಗಿಲ್ಲ. ಇದು ರಾಷ್ಟ್ರೀಯ ಆಯ್ಕಾ ಮಂಡಳಿಯ ವ್ಯೂಹಾತ್ಮಕ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.
ಪೆಬ್ರವರಿಯಲ್ಲಿ ಆರಂಭವಾಗಲಿರುವ ಅಂತರ್ ರಾಜ್ಯ ಪಂದ್ಯಗಳ ಪರಿಶೀಲನೆಯ ನಂತರ ಸ್ಕ್ವೇಡನ್ನು ಆಯ್ಕೆ ಮಾಡುವ ವೇಳೆ ದಕ್ಷಿಣ ಆಫ್ರಿಕಾ ಪ್ರವಾಸಗಾಗಿನ ಅವರು ಸಂಭಾವ್ಯ ಆಯ್ಕೆಯನ್ನು ಎಲ್ಲಾ ಆಟಗಾರರ ಜತೆ ಚರ್ಚಿಸಲಿದ್ದೇವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ |
| |
|
|
|
|
|
|
|