ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ದುರದೃಷ್ಟಕರ ಸನ್ನಿವೇಶಗಳಿಂದ ರಾಜಿನಾಮೆ: ಪೀಟರ್ಸನ್
ಲಂಡನ್, ಗುರುವಾರ, 8 ಜನವರಿ 2009   ( 12:08 IST )
ಕೋಚ್ ಮೂರ್ಸ್ ಜತೆಗಿನ ಸಂಬಂಧ ಸುಧಾರಿಸದಿರುವಷ್ಟರ ಮಟ್ಟಿಗೆ ಹಳಸಿ ಹೋದ ನಂತರ ಇಂಗ್ಲೆಂಡ್ ಕ್ರಿಕೆಟ್ ತಂಡ ನಾಯಕತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ಎಂಬುದಾಗಿ ಕೆವಿನ್ ಪೀಟರ್ಸನ್ ದೃಢಪಡಿಸಿದ್ದಾರೆ ಎಂಬುದಾಗಿ ಬ್ರಿಟೀಶ್ ಮಾಧ್ಯಮ ವರದಿ ಮಾಡಿದೆ.

ನಿನ್ನೆಯ ಮಾಧ್ಯಮ ಊಹಾಪೋಹಗಳಂತೆ ತಾನು ನಿನ್ನೆ ಬೆಳಗ್ಗೆ ನಾಯಕತ್ವ ಸ್ಥಾನಕ್ಕೆ ರಾಜಿನಾಮೆ ನೀಡಿಲ್ಲ ಎಂಬುದನ್ನು ಸ್ಪಷ್ಟ ಪಡಿಸಲು ಇಷ್ಟ ಪಡುತ್ತೇನೆ ಎಂಬ ಅವರ ಉಲ್ಲೇಖ ವರದಿಯಾಗಿದೆ.

ಇಸಿಬಿ ಜತೆಗಿನ ಇತ್ತೀಚಿಗಿನ ಸಂವಹನದ ಹಿನ್ನೆಲೆಯಲ್ಲಿ ಮತ್ತು ತುರುವಾಯ ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ಧಿ ಮತ್ತು ಊಹಾಪೋಹಗಳಿಂದ ಪ್ರಸಕ್ತ ಸ್ಥಾನದಲ್ಲಿ ಮುಂದುವರಿಯುವುದು ಬಹಳ ಕಠಿಣವಾಗಲಿದೆ ಎಂಬುದನ್ನು ಅರಿತು, ನಿನ್ನೆ ಮಧ್ಯಾಹ್ನ ಇಂಗ್ಲೆಂಡ್ ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದೆ ಎಂದು ವಿವರಿಸಿದ್ದಾರೆ.

ತನ್ನ ನಾಯಕತ್ವಗಾಗಿನ ರಾಜಿನಾಮೆಯ ಹೊರತಾಗಿಯೂ ಮುಂದಿನ ತಿಂಗಳ ವಿಂಡೀಸ್ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ತಂಡದ ಟೆಸ್ಟ್ ಹಾಗೂ ಏಕದಿನ ಸ್ಕ್ವೇಡಿನ ಭಾಗವಾಗಿರಲು ತಾನು ಸಂಪೂರ್ಣ ಒಲವು ಹೊಂದಿದ್ದೇನೆ ಮತ್ತು ಬೇಸುಗೆಯಲ್ಲಿನ ಆಶಸ್ ಸರಣಿಯನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಎಲ್ಲವನ್ನೂ ಮಾಡಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ತಾನು ತನ್ನ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಕೆಲ ತತ್ವಗಳನ್ನು ಹೊಂದಿದ್ದೇನೆ ಮತ್ತು ಇಂಗ್ಲೆಂಡ್ ನಾಯಕನಾಗಿದ್ದ ವೇಳೆ ತಾನು ಯಾವತ್ತೂ ಇಸಿಬಿ ಜತೆಗಿನ ತನ್ನ ಸಂವಹನಗಳಲ್ಲಿ ನೇರ ಹಾಗೂ ಪೂರ್ಣ ಸಹಕಾರಿಯಾಗಿದ್ದೆ ಎಂದು ಪೀಟರ್ಸನ್ ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಚೆನ್ನೈ, ಆಸ್ಟ್ರೇಲಿಯನ್ ಒಪನ್‌: ಹಿಂದೆ ಸರಿದ ಡೇವಿಡೆಂಕೊ
ಪಾಂಟಿಂಗ್‌ ಮಾರಟ ಯೊಜನೆ ಇಲ್ಲ: ಕೆಕೆಆರ್
ಆಸ್ಟ್ರೇಲಿಯನ್ ಒಪನ್‌ನಲ್ಲಿ ಆಡಲಿರುವ ಸೆರೆನಾ
ಹೋಪ್‌ಮನ್ ಕಪ್: ಅಮೆರಿಕವನ್ನು ಹೊರತಳ್ಳಿದ ಜರ್ಮನಿ
ನಾಯಕತ್ವ ಹುದ್ದೆಗೆ ಪೀಟರ್ಸನ್ ರಾಜಿನಾಮೆ: ವರದಿ
ಎಎಸ್‌ಬಿ ಕ್ಲಾಸಿಕ್: ಕ್ವಾಟರ್ಸ್‌ಗೆ ಡೆಮೆಂಟೀವಾ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಲಾರಿ ಮುಷ್ಕರ ಕೈಬಿಡದಿದ್ದರೆ ಎಸ್ಮಾ ಜಾರಿ: ಅಶೋಕ್
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ನಡೆಸುತ್ತಿರುವ ಲಾರಿ ಮುಷ್ಕರ ಬುಧವಾರ...
ಗುಲ್ಬರ್ಗಾ: ಬುದ್ಧ ವಿಹಾರ ಲೋಕಾರ್ಪಣೆ
ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣ: ಕತ್ತಿ
ಮನರಂಜನೆ
ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ
ಮುಂದೆ ಓದಿ|ಮತ್ತಷ್ಟು...