|
| ಚೆನ್ನೈ, ಆಸ್ಟ್ರೇಲಿಯನ್ ಒಪನ್: ಹಿಂದೆ ಸರಿದ ಡೇವಿಡೆಂಕೊ |
| ಚೆನ್ನೈ , ಗುರುವಾರ, 8 ಜನವರಿ 2009 ( 11:32 IST ) | |
ರಷ್ಯಾದ ಅಗ್ರ ಶ್ರೇಯಾಂಕಿತ ಪೇವರಿಟ್ ನಿಕೊಲೇ ಡೇವಿಡೆಂಕೊ ತಮ್ಮ ಎಡಗಾಲು ಹಿಮ್ಮಡಿ ಗಾಯದ ಕಾರಣ ಹಿಂದೆ ಸರಿಯುವ ಮೂಲಕ ಚೆನ್ನೈ ಒಪನ್ ತುಸು ಕಳೆ ಗುಂದಿದಂತಾಗಿದೆ.
ವಿಶ್ವ ನಂಬರ್ 5 ಇದೇ ವೇಳೆ ಜನವರಿ 19ರಿಂದ ಪ್ರಾರಂಭವಾಗಲಿರುವ ವರ್ಷದ ಮೊದಲ ಗ್ರಾಂಡ್ ಸ್ಲ್ಯಾಮ್ ಆಸ್ಟ್ರೇಲಿಯನ್ ಒಪನ್‌ನಿಂದಲೂ ಹಿಂದೆ ಸರಿದಿದ್ದಾರೆ. ಡೇವಿಡೆಂಕೊರ ನಿರ್ಗಮನದಿಂದ ತಮ್ಮ ವಿರುದ್ಧ ಎರಡನೇ ಸುತ್ತಿನ ಪಂದ್ಯ ಆಡಬೇಕಾಗಿದ್ದ ಜೆಕ್ ಗಣರಾಜ್ಯದ ಲುಕಾಸ್ ಡ್ಲೌಹಿ ಕ್ವಾಟರ್ ಫೈನಲಿಗೆ ಪ್ರವೇಶಿಸಿದ್ದಾರೆ.
ತನ್ನ ಎಡ ಹಿಮ್ಮಡಿ ಸಮಸ್ಯೆ ನೀಡುತ್ತಿದೆ. ಕಳೆದ ವರ್ಷ ಇದು ಕಾಣಿಸಿಕೊಂಡಿತ್ತು ಆದರೆ ಹೆಚ್ಚು ಸಮಸ್ಯೆ ಉಂಟುಮಾಡುತ್ತಿರಲಿಲ್ಲ. ನೋವಿಲ್ಲದ ಕಾರಣ ಅಲ್ಲಿಂದೀಚೆಗೆ ತಾನು ತನ್ನ ಆಟವನ್ನು ಮುಂದುವರಿಸಿದ್ದೆ. ಶಾಂಘೈಯಲ್ಲೂ ಇದೇ ಸಮಸ್ಯೆಯನ್ನು ಹೊಂದಿದ್ದೆ ಆದರೆ ತಾನು ಅಲ್ಲಿ ಆಡಿದೆನು ಎಂದು ಡೇವಿಡೆಂಕೊ ತಿಳಿಸಿದ್ದಾರೆ.
ಆದರೆ ಈಗ ತಾನು ಭಾರೀ ನೋವು ಹೊಂದಿದ್ದೇನೆ ಮತ್ತು ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ತನಗೆ ಓಡಲು ಮತ್ತು ಟೆನ್ನಿಸ್ ಆಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಾನು ಇಲ್ಲಿ ಟೂರ್ನಿ ವೈದ್ಯರಿಂದ ತನ್ನ ಹಿಮ್ಮಡಿ ಪರಿಶೀಲಿಸಲು ನಿರ್ಧರಿಸಿದೆ. ತವರಿಗೆ ಮರಳಿ, ತಪಾಸಣೆ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯನ್ ಒಪನ್‌ಗೂ ಬರುವ ಯಾವುದೇ ಅವಕಾಶವಿಲ್ಲ. ಆದ್ದರಿಂದ, ತಾನು ಮೊದಲ ಗ್ರಾಂಡ್ ಸ್ಲ್ಯಾಮ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಆಸ್ಟ್ರೇಲಿಯನ್ ಒಪನ್ ಮಧ್ಯದಿಂದ ಹೊರ ಹೋಗುವುದಕ್ಕಿಂತ ಈಗಲೇ ಹಿಂದೆ ಸರಿಯುವುದು ಬುದ್ದಿವಂತಿಕೆ ಎಂದು ಅವರು ತಿಳಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ |
| |
|
|
|
|
|
|
|