|
| ಆಸ್ಟ್ರೇಲಿಯನ್ ಒಪನ್‌ನಲ್ಲಿ ಆಡಲಿರುವ ಸೆರೆನಾ |
| ಸಿಡ್ನಿ, ಗುರುವಾರ, 8 ಜನವರಿ 2009 ( 11:06 IST ) | |
ತಾವು ಮಂಡಿರಜ್ಜು ಗಾಯದಿಂದ ಚೇತರಿಸಿಕೊಂಡಿದ್ದು, ಈ ತಿಂಗಳು ನಡೆಯಲಿರುವ ಆಸ್ಟ್ರೇಲಿಯನ್ ಒಪನ್ ಅಖಾಡಕ್ಕಿಳಿಯಲು ಸಿದ್ಧನಿದ್ದೇನೆ ಎಂದು ವಿಶ್ವ ನಂಬರ್ 2 ಸೆರೆನಾ ವಿಲಿಯಮ್ಸ್ ತಿಳಿಸಿದ್ದಾರೆ.
ಅಮೆರಿಕ ಒಪನ್ ಚಾಂಪಿಯನ್ ಪರ್ತ್‌ನಲ್ಲಿ ನಡೆಯಲಿರುವ ಈ ವಾರದ ಹೋಪ್‌ಮನ್ ಕಪ್ ಮಿಶ್ರ ತಂಡಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ವರ್ಷಾರಂಭ ಮಾಡಬೇಕಾಗಿತ್ತು. ಆದರೆ ತಮ್ಮ ಮಂಡಿರಜ್ಜು ನೋವಿನ ಕಾರಣ ಇದರಿಂದ ಹಿಂದೆ ಸರಿದಿದ್ದರು.
ಯಾವುದೇ ರೀತಿಯ ಮಂಡಿರಜ್ಜು ನೋವು ಹೊಂದಿರುವುದಾಗಿ ತನಗೆ ತಿಳಿದಿಲ್ಲ. ತಾನು ಉತ್ತಮವಾಗಿದ್ದೇನೆ ಎಂದು ಅವರು ತಿಳಿಸಿದರು.
ಕಳೆದ ವರ್ಷ ನಂಬರ್ 2ರಾಗಿ ವರ್ಷಾಂತ್ಯಗೊಳಿಸಿದ ವಿಲಿಯಮ್ಸ್, ನಾಲ್ಕು ವಾರಗಳ ಕಾಲ ಅಗ್ರ ಸ್ಥಾನವನ್ನು ಹೊಂದಿದ್ದರು ಮತ್ತು ಮತ್ತೊಂದು ಬಾರಿ ಅಗ್ರ ಸ್ಥಾನವನ್ನು ಅಲಂಕರಿಸುವತ್ತ ಚಿತ್ತ ಹರಿಸಿದ್ದಾರೆ. ತಾನು ಇದಕ್ಕೆ ಸನಿಹದಲ್ಲಿದ್ದು, ಈ ನಿಟ್ಟಿನಲ್ಲಿ ಸಿಡ್ನಿ ಡಬ್ಲ್ಯುಟಿಎ ಟೂರ್ನಿಯನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಸಿಡ್ನಿ ಟೂರ್ನಿಯಲ್ಲಿ ಅವರ ಪ್ರಮುಖ ಮೂರು ಪ್ರತಿಸ್ಪರ್ಧಿಗಳು ವಿಶ್ವ ನಂಬರ್ 3 ದಿನಾರ ಸಫೀನಾ, ಬೀಜಿಂಗ್ ಒಲಿಂಪಿಕ್ ಚಾಂಪಿಯನ್ ಎಲೆನಾ ಡೆಮೆಂಟೀವಾ ಮತ್ತು 2008 ಸಿಡ್ನಿ ಫೈನಲ್ ಪ್ರವೇಶಿತೆ ಸ್ವೆಟ್ಲಾನ ಕುಜ್ನೆಟ್ಸೋವಾರಾಗಿದ್ದಾರೆ.
ವಿಲಿಯಮ್ಸ್ 7 ವರ್ಷಗಳ ಬಳಿಕ ಸಿಡ್ನಿಗೆ ವಾಪಸಾಗುತ್ತಿದ್ದರೆ, ತಮ್ಮ ಹಿರಿಯ ಸಹೋದರಿ ವೀನಸ್ ಹಾಂಕಾಂಗ್‌ನಲ್ಲಿ ಈ ವಾರ ನಡೆಯಲಿರುವ ಹೋಪ್‌ಮನ್ ಕಪ್‌ನಲ್ಲಿ ತಮ್ಮ ವರ್ಷಾರಂಭ ಮಾಡಲು ಬಯಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ |
| |
|
|
|
|
|
|
|