|
| ಎಎಸ್‌ಬಿ ಕ್ಲಾಸಿಕ್: ಕ್ವಾಟರ್ಸ್‌ಗೆ ಡೆಮೆಂಟೀವಾ |
| ಔಕ್‌ಲ್ಯಾಂಡ್, 7 ಜನವರಿ 2009 ( 14:15 IST ) | |
ಅಗ್ರ ಶ್ರೇಯಾಂಕಿತೆ ಎಲೆನಾ ಡೆಮೆಂಟೀವಾ ಸ್ಥಳೀಯ ನೆಚ್ಚಿನ ಆಟಗಾರ್ತಿ ಮರಿನಾ ಇರಕೊವಿಕ್‌ರನ್ನು ಸೋಲಿಸಿ, ಎಎಸ್‌ಬಿ ಕ್ಲಾಸಿಕ್ ಕ್ವಾಟರ್ ಫೈನಲ್ ಪ್ರವೇಶಿಸುವಲ್ಲಿ ಸಫಲರಾಗಿದ್ದರೆ, ಇತರ ಶ್ರೇಯಾಕಿತ ಆಟಗಾರರರು ಟೂರ್ನಿಯಿಂದ ನಿರ್ಗಮನ ಕಂಡಿದ್ದಾರೆ.
ವಿಶ್ವ ನಂಬರ್ 4 ಮತ್ತು ಒಲಿಂಪಿಕ್ ಚಾಂಪಿಯನ್ ಎದುರಾಳಿ ನ್ಯೂಜಿಲ್ಯಾಂಡ್ ಆಟಗಾರ್ತಿಯನ್ನು 6-2, 6-3ದಲ್ಲಿ ಸೋಲಿಸಿದರೆ. 8 ಶ್ರೇಯಾಂಕ ಆಟಗಾರರಲ್ಲಿ ಐವರು ಎರಡನೇ ಸುತ್ತಿನ ಪಂದ್ಯದಲ್ಲಿ ನಿರ್ಗಮನ ಕಂಡಿದ್ದಾರೆ.
ಅದಾಗಲೇ ಡೆಮೆಂಟೀವಾರನ್ನು ಸೋಲಿಸುವಲ್ಲಿನ ಇರಕೊವಿಕ್‌ರ ಕ್ಷೀಣ ಅವಕಾಶ ಕುತ್ತಿಗೆ ನೋವಿನಿಂದ ಮತ್ತಷ್ಟು ಕ್ಷೀಣವಾಯಿತು. ಎರಡನೇ ಸೆಟ್ಟಿನಲ್ಲಿ 3-4ರ ಹಿನ್ನಡೆಯಲ್ಲಿರುವಾಗ ಅವರು ತಮ್ಮ ವೈದ್ಯಕೀಯ ವಿರಾಮವನ್ನು ವಿಸ್ತರಿಸಬೇಕಾಗಿ ಬಂತು.
ಡೆಮೆಂಟೀವಾ ಕ್ವಾಟರ್ ಫೈನಲಿನಲ್ಲಿ 5ನೇ ಶ್ರೇಯಾಂಕಿತೆ ಇಸ್ರೇಲಿನ ಶಹರ್ ಪೀರ್‌ರನ್ನು ಎದುರಿಸಲಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ರಷ್ಯಾ ಆಟಗಾರ್ತಿ, ಎದುರಾಳಿಗಾಗಿನ ಭಾರೀ ಪ್ರಮಾಣದ ಪ್ರೇಕ್ಷಕರ ಬೆಂಬಲದ ಕಾರಣ ಇರಕೊವಿಕ್ ವಿರುದ್ಧದ ಪಂದ್ಯ ಕಠಿಣವಾಗಿತ್ತು ಎಂದು ತಿಳಿಸಿದರು. ಎರಡನೇ ಶ್ರೇಯಾಂಕಿತೆ ಡೆನ್ಮಾರ್ಕ್‌ನ ಕರೊಲೈನ್ ವೊಜ್ನೈಕಿ ಎದುರಾಳಇ ಅಮೆರಿಕದ ಜಿಲ್ಲ್ ಕ್ರೈಬಸ್ ವಿರುದ್ಧ ಗೆಲುವು ಸಾಧಿಸಿ ಅಂತಿಮ 8ಕ್ಕೆ ಸುಲಭವಾಗಿ ಮುನ್ನಡೆದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ |
| |
|
|
|
|
|
|
|