ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಅಕ್ತರ್‌ಗೆ ಅಗ್ರ ಗುತ್ತಿಗೆ ನೀಡಿದ ಪಿಸಿಬಿ
ಕರಾಚಿ, 7 ಜನವರಿ 2009   ( 13:07 IST )
ಪಾಕಿಸ್ತಾನ ಕ್ರಿಕೆಟ್ ಮಂಡಳಿ 26 ಆಟಗಾರರಿಗೆ ವಾರ್ಷಿಕ ಕೇಂದ್ರ ಗುತ್ತಿಗೆಯನ್ನು ಕೊಡ ಮಾಡಿದ್ದು, ವಿವಾದಿತ ವೇಗಿದ ಬೌಲರ್ ಶೊಯೇಬ್ ಅಕ್ತರ್ ಅಗ್ರ ವಿಭಾಗದಲ್ಲಿ ಸ್ಥಾನ ಪಡೆಯಲು ಸಫಲರಾಗಿದ್ದಾರೆ.

ಹಿರಿತನ ಮತ್ತು ಕಳೆದ ವರ್ಷ ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿನ ಅವರ ಪ್ರದರ್ಶನದ ಆಧಾರದಲ್ಲಿ ಆಟಗಾರರಿಗೆ ಗುತ್ತಿಗೆಗಳನ್ನು ನೀಡಲಾಗಿದೆ ಎಂದು ಮಂಡಳಿಯ ಮುಖ್ಯ ಕಾರ್ಯಕಾರಿಣಿ ಅಧಿಕಾರಿ ಸಲೀಂ ಅಲ್ತಾಪ್ ತಿಳಿಸಿದ್ದಾರೆ.

ಕಳೆದ ವರ್ಷದ ಏಷಿಯಾ ಕಪ್‌ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ವೇಗಿ ಅಬ್ದುಲ್ ರೌಪ್‌ರನ್ನು ನಿರ್ಲಕ್ಷಿಸಲಾಗಿದ್ದರೆ, ಅನುಭವಿ ಬ್ಯಾಟ್ಸ್‌ಮನ್ ಆಸಿಂ ಕಮಾಲ್, ಸಮಿಯುಲ್ಲಾ ನಿಯಾಜಿರಂತಹವರು ಆಯ್ಕೆಗಾರರ ಕೃಪಾಕಟಾಕ್ಷವನ್ನು ಗೆದ್ದುಕೊಂಡಿದ್ದಾರೆ.

ರಾಷ್ಟ್ರೀಯ ಆಯ್ಕಾ ಸಮಿತಿಯಿಂದ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದ ಬಳಿಕ ಎಲ್ಲಾ ಹಿರಿಯ ಆಟಗಾರರನ್ನು ವಿಭಾಗ 'ಎ'ಯಲ್ಲಿ ಇಡಲಾಗಿದೆ ಎಂದು ಅಲ್ತಾಪ್ ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಮಂಡಳಿ ಇಬ್ಬರು ಹೊಸಬರಾದ ಬ್ಯಾಟ್ಸ್‌ಮನ್ ಅಜರ್ ಅಲಿ ಮತ್ತು ಉಮರ್ ಆಮಿನ್‌ಗೆ ಗುತ್ತಿಗೆಗಳನ್ನು ನೀಡಿದೆ. ಈ ಮುಂಚೆ ಗುತ್ತಿಗೆಗಳನ್ನು ಕೊಡ ಮಾಡುವಾಗ ಕೇವಲ ಪಾಕ್ ಪರ ಆಡಿದ ಆಟಗಾರರನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಂಗಾವ್ಕರ್ ಮುಡಿಗೆ ಯು-15 ಬಿಜೆಒ ಪ್ರಶಸ್ತಿ
ಪಾಕ್ ನಾಯಕನಾಗಿ ಮಲಿಕ್ ಮುಂದುವರಿಕೆ
ಚೆನ್ನೈ ಒಪನ್: ಮೊಯಾ 2ನೇ ಸುತ್ತಿಗೆ
ತಟಸ್ಥ ಸ್ಥಳದಲ್ಲಿ ರಣಜಿ: ಸಚಿನ್ ವಿರೋಧ
ಇಂಗ್ಲೆಂಡ್ ಕೋಚ್ ಹುದ್ದೆ: ಪೋರ್ಡ್‌ಗೆ ಅಡ್ಡಿಯಿಲ್ಲ- ಕೆಂಟ್
ಅಗ್ರ 5ರತ್ತ ನೆಹ್ವಾಲ್ ಚಿತ್ತ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಲಾರಿ ಮುಷ್ಕರ ಕೈಬಿಡದಿದ್ದರೆ ಎಸ್ಮಾ ಜಾರಿ: ಅಶೋಕ್
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ನಡೆಸುತ್ತಿರುವ ಲಾರಿ ಮುಷ್ಕರ ಬುಧವಾರ...
ಗುಲ್ಬರ್ಗಾ: ಬುದ್ಧ ವಿಹಾರ ಲೋಕಾರ್ಪಣೆ
ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣ: ಕತ್ತಿ
ಮನರಂಜನೆ
ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ
ಮುಂದೆ ಓದಿ|ಮತ್ತಷ್ಟು...