ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಮಂಗಾವ್ಕರ್ ಮುಡಿಗೆ ಯು-15 ಬಿಜೆಒ ಪ್ರಶಸ್ತಿ
ನವದೆಹಲಿ, 7 ಜನವರಿ 2009   ( 12:54 IST )
ಮಹೇಶ್ ಮಂಗಾವ್ಕರ್ 15 ವರ್ಷ ಕೆಳಗಿನ ವಿಭಾಗದ ಫೈನಲಿನಲ್ಲಿ ಎದುರಾಳಿ ಇಂಗ್ಲೆಂಡಿನ ಒಲಿವರ್ ಹೋಲೆಂಡ್‌ರನ್ನು 11-5, 7-11, 11-5, 12-10 ದಲ್ಲಿ ಸೋಲಿಸಿ ಭಾರತಕ್ಕೆ ಚೊಚ್ಚಲ ಬ್ರಿಟಿಶ್ ಜ್ಯೂನಿಯರ್ ಒಪನ್ (ಬಿಜೆಒ) ಸ್ಕೇಶ್ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ.

ಈ ಮುಂಚೆ 2004ರಲ್ಲಿ 19 ವರ್ಷ ಕೆಳಗಿನ ವಿಭಾಗದಲ್ಲಿ ಸೌರವ್ ಘೋಶಲ್ ಭಾರತಕ್ಕೆ ಬಿಜೆಒ ಪ್ರಶಸ್ತಿ ತಂದುಕೊಟ್ಟಿದ್ದರು.

ದಿಲ್ಲಿಯ ಕುಶ್ ಕುಮಾರ್ ಒಂದರ ಹಿಂದೆ ಮತ್ತೊಂದರಂತೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾದರು. 13 ವರ್ಷ ಹುಡುಗರ ವಿಭಾಗದಲ್ಲಿ ಕುಶ್ ಎದುರಾಳಿ ಈಜಿಪ್ಟ್‌ನ ಅಮ್ರ್ ಅಬೌಲ್ ಸೌಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರಾದರೂ, ಪ್ರಮುಖ ಘಟ್ಟದಲ್ಲಿ ಮುನ್ನಡೆಯನ್ನು ಪೋಲು ಮಾಡಿ ಪಂದ್ಯದಲ್ಲಿ 7-11, 11-7, 11-9, 9-11, 7-11ರ ಸೋಲು ಅನುಭವಿಸಿದರು.

15 ವರ್ಷ ಕೆಳಗಿನ ವಿಭಾಗದಲ್ಲಿ ಮಂಗಾವ್ಕರ್ ಉತ್ತಮ ಆರಂಭ ಮಾಡಿ ಮೊದಲ ಗೇಮನ್ನು ಅತಿ ಶೀಘ್ರದಲ್ಲಿ ಗೆದ್ದುಕೊಡರು. ಹೋಲೆಂಡ್ ಎರಡನೇ ಗೇಮ್‌ನಲ್ಲಿ ಚೇತರಿಕೆಯ ಆಟ ಆಡಿ ಅಂಕವನ್ನು ಸಮಗೊಳಿಸಿದರು.

ಅಂತಿಮವಾಗಿ ಭಾರತೀಯನ ಸ್ಥಿರತೆಯ ಆಟ ಮತ್ತು ಎದುರಾಳಿಯ ಅಪ್ರೇರಿತ ತಪ್ಪುಗಳ ನೆರವಿನಿಂದ ಮಂಗಾವ್ಕರ್ ಮೂರನೇ ಹಾಗೂ ನಾಲ್ಕನೇ ಗೇಮನ್ನು ಗೆದ್ದುಕೊಂಡರು ಮತ್ತು ಪಂದ್ಯವನ್ನು 40 ನಿಮಿಷಗಳಲ್ಲಿ ತಮ್ಮದಾಗಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪಾಕ್ ನಾಯಕನಾಗಿ ಮಲಿಕ್ ಮುಂದುವರಿಕೆ
ಚೆನ್ನೈ ಒಪನ್: ಮೊಯಾ 2ನೇ ಸುತ್ತಿಗೆ
ತಟಸ್ಥ ಸ್ಥಳದಲ್ಲಿ ರಣಜಿ: ಸಚಿನ್ ವಿರೋಧ
ಇಂಗ್ಲೆಂಡ್ ಕೋಚ್ ಹುದ್ದೆ: ಪೋರ್ಡ್‌ಗೆ ಅಡ್ಡಿಯಿಲ್ಲ- ಕೆಂಟ್
ಅಗ್ರ 5ರತ್ತ ನೆಹ್ವಾಲ್ ಚಿತ್ತ
ಬ್ರಿಟೀಶ್ ಒಪನ್: ದೀಪಿಕಾ, ಮಹೇಶ್ ಮತ್ತು ಕುಶ್ ಫೈನಲಿಗೆ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಲಾರಿ ಮುಷ್ಕರ ಕೈಬಿಡದಿದ್ದರೆ ಎಸ್ಮಾ ಜಾರಿ: ಅಶೋಕ್
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ನಡೆಸುತ್ತಿರುವ ಲಾರಿ ಮುಷ್ಕರ ಬುಧವಾರ...
ಗುಲ್ಬರ್ಗಾ: ಬುದ್ಧ ವಿಹಾರ ಲೋಕಾರ್ಪಣೆ
ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣ: ಕತ್ತಿ
ಮನರಂಜನೆ
ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ
ಮುಂದೆ ಓದಿ|ಮತ್ತಷ್ಟು...