|
| ಪಾಕ್ ನಾಯಕನಾಗಿ ಮಲಿಕ್ ಮುಂದುವರಿಕೆ |
| ಕರಾಚಿ , 7 ಜನವರಿ 2009 ( 12:41 IST ) | |
ತಮ್ಮ ನಾಯಕತ್ವಕ್ಕಾಗಿ ತೀವ್ರ ಟೀಕೆಗೊಳಗಾಗಿರುವ ಹೊರತಾಗಿಯೂ ಶೊಯೇಬ್ ಮಲಿಕ್‌ರನ್ನು ಪಿಸಿಬಿ ಅಧ್ಯಕ್ಷ ಇಜಾಜ್ ಬಟ್ಟ್ ಅನಿರ್ದಿಷ್ಟಾವಧಿ ಕಾಲ ರಾಷ್ಟ್ರೀಯ ನಾಯಕರನ್ನಾಗಿ ಉಳಿಸಿಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ ತವರು ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತ ಸಮಿತಿಯ ಅನುಮೋದನೆ ಇಲ್ಲದೆ ನಿರ್ಧಾರ ತೆಗೆಯುವ ಮೂಲಕ ಬಟ್ಟ್ ಅಧ್ಯಕ್ಷರಾಗಿ ತಮ್ಮ ಅಧಿಕಾರವನ್ನು ಬಳಸಿದ್ದಾರೆ ಎಂದು ಮುಖ್ಯ ಕಾರ್ಯಕಾರಿ ಅಧಿಕಾರಿ ಸಲೀಂ ಅಲ್ತಾಪ್ ತಿಳಿಸಿದ್ದಾರೆ.
ಅನಿರ್ದಿಷ್ಟಾವಧಿಗೆ ಮಲಿಕ್ ನಾಯಕರಾಗಿ ಮುಂದುವರಿಯುವ ಬಗ್ಗೆ ಅಧ್ಯಕ್ಷರು ಈಗಾಗಲೇ ದೃಢಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ವಿಷಯವಾಗಿ ಆಡಳಿತ ಸಮಿತಿಯ ಅನುಮೋದನೆ ಪಡೆಯಲಾಗಿದೆಯೋ ಎಂದು ಕೇಳಿದ ಪ್ರಶ್ನೆಗೆ ಅವರು 6 ಸಮಿತಿ ಸದಸ್ಯರು ರಾಜಿನಾಮೆ ನೀಡಿದ್ದು, ಅದು ಅಸ್ತಿತ್ವದಲ್ಲೇ ಇಲ್ಲ ಎಂದು ಉತ್ತರಿಸಿದರು.
ಸಮಿತಿಗಾಗಿನ 6 ಹೊಸ ಸದಸ್ಯರನ್ನು ಅಧ್ಯಕ್ಷರು ಘೋಷಿಸಿದ ಬಳಿಕ ಆಡಳಿತ ಸಮಿತಿ ಸಕ್ರೀಯಗೊಳ್ಳುವುದು ಎಂದು ಅವರು ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ |
| |
|
|
|
|
|
|
|