|
| ಆಸಿಸ್-ಪಾಕ್ ಸರಣಿ: ತಟಸ್ಥ ಸ್ಥಳದತ್ತ ಐಸಿಸಿ ಚಿಂತನೆ |
| ಮೆಲ್ಬೋರ್ನ್, 6 ಜನವರಿ 2009 ( 11:46 IST ) | |
ಒಂದು ವೇಳೆ ಪಾಕಿಸ್ತಾನದಲ್ಲಿ ಉದ್ದೇಶಿತ ಏಕದಿನ ಸರಣಿ ನೆಡಯದಿದ್ದರೆ, ತಟಸ್ಥ ಸ್ಥಳವೊಂದರಲ್ಲಿ ಆಸ್ಟ್ರೇಲಿಯಾದ ಆತಿಥ್ಯ ವಹಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಪಾಕ್ ಮನವೊಲಿಕೆಯಲ್ಲಿ ನಿರತವಾಗಿದೆ.
ಪಾಕಿಸ್ತಾನದಲ್ಲಿ ಆಡುವುದು ಮೊದಲ ಆದ್ಯತೆ ಎಂಬುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಐಸಿಸಿ ಹೇಳುತ್ತಿದ್ದರೂ, ಪರ್ಯಾಯ ತಾಣವನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ತವರಿನಲ್ಲಿ ಆಡುವುದು ಯಾವುದೇ ರಾಷ್ಟ್ರದ ಮೊದಲ ಆದ್ಯತೆಯಾಗಿದೆ ಆದರೆ ಒಂದು ವೇಳೆ ಅದಾಗದಿದ್ದರೆ, ಕ್ರಿಕೆಟ್ ಆಡುವಂತೆ ತಾವು ತಂಡಗಳನ್ನು ಪ್ರೇರೇಪಿಸಬೇಕು ಎಂದು ಐಸಿಸಿ ಮುಖ್ಯ ಕಾರ್ಯಕಾರಿಣಿ ಹರೂನ್ ಲೊರ್ಗಟ್ ತಿಳಿಸಿದ್ದಾರೆ.
ಒಂದು ವೇಳೆ ಅದು ತಟಸ್ಥ ಸ್ಥಳದಲ್ಲಾದರೆ, ಹಾಗೇ ಆಗಲಿ. ತಂಡಗಳು ಕ್ರಿಕೆಟ್ ಆಡಲಿ ಎಂದು ಅವರು ತಿಳಿಸಿದ್ದಾರೆ. ಕೌಲಾಲಂಪುರ, ಶಾರ್ಜಾ ಮತ್ತು ಅಬುದಬಿಯನ್ನು ಪರ್ಯಾಯ ತಾಣವಾಗಿ ಪರಿಗಣಿಸಲಾಗುತ್ತಿದೆ.
ತಟಸ್ಥ ಸ್ಥಳಗಾಗಿನ ವಿಚಾರಕ್ಕೆ ಸಿಎ ಮುಖ್ಯ ಕಾರ್ಯಕಾರಿಣಿ ಜೇಮ್ಸ್ ಸೌದರ್ಲೇಂಡ್ ಬೆಂಬಲ ನೀಡಿದ್ದಾರೆ. ಪ್ರವಾಸ ಮುಂದೂಡಿಕೆಯ ಕಾರಣ ತಾವು ಪಾಕ್ ವಿರುದ್ಧ ಹಲವು ಸಮಯದಿಂದ ಕ್ರಿಕೆಟ್ ಆಡಲು ಸಾಧ್ಯವಾಗಿಲ್ಲ. ತಾವು ಅವರ ಜತೆ ಆಡಲು ಇಚ್ಚಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ |
| |
|
|
|
|
|
|
|