|
| ಕಿವೀಸ್ ಟೆಸ್ಟ್ ಸರಣಿ ವಿಸ್ತರಣೆಗೆ ಭಾರತ ಪ್ರಸ್ತಾಪ |
| ನವದೆಹಲಿ , 6 ಜನವರಿ 2009 ( 11:33 IST ) | |
ಈ ವರ್ಷ ಮಾರ್ಚ್-ಏಪ್ರಿಲ್‌ನಲ್ಲಿ ಭಾರತ ದ್ವೀಪ ರಾಷ್ಟ್ರಕ್ಕೆ ಪ್ರವಾಸ ಕೈಗೊಳ್ಳುವ ಸಂದರ್ಭ ಎರಡು ಟೆಸ್ಟ್ ಪಂದ್ಯ ಸರಣಿಯನ್ನು ಒಂದು ಪಂದ್ಯದಷ್ಟು ವಿಸ್ತರಿಸುವಂತೆ ಭಾರತೀಯ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ನ್ಯೂಜಿಲ್ಯಾಂಡ್ ಮಂಡಳಿಗೆ ಪ್ರಸ್ತಾಪ ಕಳುಹಿಸಿದೆ.
ಮಾರ್ಚ್ 6ರಂದು ಪ್ರಾರಂಭವಾಗಲಿರುವ ಈ ಪ್ರವಾಸ ಮೂಲತಃ ಎರಡು ಟೆಸ್ಟ್ ಪಂದ್ಯ, 5 ಏಕದಿನ ಪಂದ್ಯ ಮತ್ತು ಒಂದು ಟ್ವೆಂಟಿ20 ಪಂದ್ಯವನ್ನು ಒಳಗೊಂಡಿತ್ತು.
ಹೆಚ್ಚುವರಿ ಟೆಸ್ಟ್ ಪಂದ್ಯವನ್ನು ಆಡುವ ಬಗ್ಗೆ ನ್ಯೂಜಿಲ್ಯಾಂಡ್ ಕ್ರಿಕೆಟ್‌ಗೆ ಪ್ರಸ್ತಾಪ ಸಲ್ಲಿಸಲಾಗಿದ್ದು, ಈ ನಿಟ್ಟಿನಲ್ಲಿ ನ್ಯೂಜಿಲ್ಯಾಂಡ್ ಶೀಘ್ರದಲ್ಲಿ ಪ್ರತಿಕ್ರಿಯಿಸಲಿದೆ ಎಂದು ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ ರತ್ನಾಕರ್ ಶೆಟ್ಟಿ ತಿಳಿಸಿದ್ದಾರೆ.
ಮುಂಬೈ ಉಗ್ರರ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನಗಾಗಿನ ಭಾರತ ಪ್ರವಾಸ ರದ್ಧು ಹಾಗೂ ಏಳು ಏಕದಿನ ಪಂದ್ಯಗಳ ಸರಣಿಯಲ್ಲಿ ಕೊನೆಯ ಎರಡು ಪಂದ್ಯಗಳಿಂದ ಇಂಗ್ಲೆಂಡ್ ಹಿಂದೆ ಸರಿದ ಕಾರಣ ಬಿಸಿಸಿಐ ಕಳೆದ ವರ್ಷ 120 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ |
| |
|
|
|
|
|
|
|