ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಚೆನ್ನೈ ಒಪನ್: ಭಾರತೀಯರಿಗೆ ಮಿಶ್ರ ಅದೃಷ್ಟ
ಚೆನ್ನೈ , 6 ಜನವರಿ 2009   ( 10:43 IST )
ಚೆನ್ನೈ ಒಪನ್ ಎಟಿಪಿ ಟೆನ್ನಿಸ್ ಚಾಂಪಿಯನ್‌ಶಿಪ್‌ನಲ್ಲಿ ಡೇವಿಸ್ ಕಪ್ ವಿಜೇತ ಪ್ರಕಾಶ್ ಅಮೃತ್‌ರಾಜ್ ಸೋಲು ಕಂಡು ಪ್ರೇಕ್ಷಕರಿಗೆ ನಿರಾಶೆ ಮೂಡಿಸಿದರೆ, ರೋಹಣ್ ಬೋಪಣ್ಣಾ ಪ್ರಮುಖ ಹಂತಕ್ಕೆ ಪ್ರವೇಶ ಪಡೆಯುವುದರೊಂದಿಗೆ ಭಾರತೀಯ ಟೆನ್ನಿಸ್ ಪಟುಗಳು ಮೊದಲ ದಿನದ ಆಟದಲ್ಲಿ ಮಿಶ್ರ ಫಲಿತಾಂಶನ್ನು ನೀಡಿದರು. ಇದೇ ವೇಳೆ 6 ಸ್ಪೈನ್ ಪಟುಗಳು ಮೊದಲ ಸುತ್ತಿನಲ್ಲೇ ನಿರ್ಗಮನ ಕಂಡರು.

ಅಮೃತ್‌ರಾಜ್ 5ನೇ ಶ್ರೇಯಾಂಕಿತ ಜರ್ಮನಿಯ ರೈನರ್ ಶ್ಯುಟ್ಲರ್ ವಿರುದ್ಧ 2-6, 6-4, 1-6ದಲ್ಲಿ ಸೋಲು ಅನುಭವಿಸಿದರು. ಆದರೆ ಇತ್ತ ಬೋಪಣ್ಣಾ ಫೈನಲ್ ಅರ್ಹತಾ ಪಂದ್ಯದಲ್ಲಿ ಜರ್ಮನಿಯ ಮೈಕೆಲ್ ಬೆರ್ರೆರ್‌ರನ್ನು 4-6, 6-3, 6-4ದಲ್ಲಿ ಸೋಲಿಸಿ ಸಿಂಗಲ್ಸ್‌ನಲ್ಲಿನ ತಮ್ಮ ಸ್ಥಾನ ಭದ್ರಗೊಳಿಸಿದರು. ಬೋಪಣ್ಣಾ ಮುಂದಿನ ಮೊದಲ ಸುತ್ತಿನಲ್ಲಿ ಡೆನಿಸ್ ಇಸೊಮಿನ್‌ರನ್ನು ಎದುರಿಸಲಿದ್ದಾರೆ.

ಸಾಗರೋತ್ತರ ಆಟಗಾರರ ನಡುವಿನ ಇತರ ಪಂದ್ಯಗಳಲ್ಲಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದ ಲುಕಾಸ್ ಡ್ಲೌಹಿ ಜಪಾನಿನ ಗೊ ಸೊಡರನ್ನು 3-6, 6-2, 6-4ದಲ್ಲಿ ಸೋಲಿಸಿದರು. ಈ ಕಡೆ ಜರ್ಮನಿಯ ಗ್ರುಯೆಲ್ ಎದುರಾಳಿ ಡೇನಿಯಲ್ ಗಿಮೆನೊರನ್ನು 6-3, 6-4ದಲ್ಲಿ ಮಣಿಸಿದರು.

ಮೂರನೇ ಶ್ರೇಯಾಕಿತ ಮರೀನ್ ಸಿಲಿಕ್ ಸ್ಪೈನಿನ ಅಲ್ಬೆರ್ಟೊ ಮಾರ್ಟಿನ್ ವಿರುದ್ಧ 6-4, 6-4ರ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು. ಬೊರಿಸ್ ಬೇಕರ್ ಅಡಿ ತರಬೇತಿ ಪಡೆದಿರುವ ಬ್ಜೊರ್ನ್ ಪುವಾ ಸ್ಪೈನಿನ ಸಾಂಟಿಯಾಗೊ ವೆಂಚುರರನ್ನು 6-2, 7-5ದಲ್ಲಿ ಸೋಲಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ತಟಸ್ಥ ಸ್ಥಳದಲ್ಲಿ ರಣಜಿ: ಸಚಿನ್ ವಿರೋಧ
ಇಂಗ್ಲೆಂಡ್ ಕೋಚ್ ಹುದ್ದೆ: ಪೋರ್ಡ್‌ಗೆ ಅಡ್ಡಿಯಿಲ್ಲ- ಕೆಂಟ್
ಅಗ್ರ 5ರತ್ತ ನೆಹ್ವಾಲ್ ಚಿತ್ತ
ಬ್ರಿಟೀಶ್ ಒಪನ್: ದೀಪಿಕಾ, ಮಹೇಶ್ ಮತ್ತು ಕುಶ್ ಫೈನಲಿಗೆ
ಆಸಿಸ್-ಪಾಕ್ ಸರಣಿ: ತಟಸ್ಥ ಸ್ಥಳದತ್ತ ಐಸಿಸಿ ಚಿಂತನೆ
ಕಿವೀಸ್ ಟೆಸ್ಟ್ ಸರಣಿ ವಿಸ್ತರಣೆಗೆ ಭಾರತ ಪ್ರಸ್ತಾಪ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಚಿರಂಜೀವಿ ಜತೆ ಸಿದ್ದರಾಮಯ್ಯ ಸಾಥ್?
ಕಾಂಗ್ರೆಸ್‌‌ಗೆ ಈಗ ಸಿದ್ದರಾಮಯ್ಯ ನುಂಗಲಾರದ ಬಿಸಿ ತುಪ್ಪವಾಗಿದ್ದು, ಅವರ ಮನವೊಲಿಕೆಗೆ ...
ನಾನು ತಪ್ಪು ಮಾಡಿಲ್ಲ: ಸಿದ್ದರಾಮಯ್ಯ
ಕರ್ನಾಟಕದಲ್ಲಿ ಎಂದಿನಂತೆ ಸಿಇಟಿ ಮುಂದುವರಿಕೆ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ
ಮುಂದೆ ಓದಿ|ಮತ್ತಷ್ಟು...